ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಚೆನ್ನಮ್ಮನವರ ಬದುಕು, ಹೋರಾಟ ಅನನ್ಯ. ಅವರ ದೇಶಪ್ರೇಮ ಎಲ್ಲರಿಗೂ ಅನುಕರಣೀಯವಾಗಿದ್ದು, ಎಂದು ಜಿಲ್ಲಾಧಿಕಾರಿ ಶಿವಾನಂದ್ ಕಾಪಶಿ ಹೇಳಿದರು
ಭಾನುವಾರ ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯುತ ಪಂಚಮಸಾಲಿ ಸಂಘ (ರಿ.) ಜಿಲ್ಲಾ ಘಟಕ ದಾವಣಗೆರೆ ಮತ್ತು ಅಖಿಲ ಭಾರತ ಲಿಂಗಾಯುತ ಪಂಚಮಸಾಲಿ ಮಹಾಸಭಾ (ರಿ.) ದಾವಣಗೆರೆ ಇವರುಗಳ ಸಂಯುಕ್ತಾಶ್ರದಲ್ಲಿ ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ಗುರಿ ಇಟ್ಟುಕೊಂಡು ಹೋರಾಟ ನಡೆಸಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಪ್ರತಿ ಮನೆಯಲ್ಲೂ ರಾಣಿ ಚೆನ್ನಮ್ಮನಂತಹ ಮಹಿಳೆಯರು ಹುಟ್ಟಬೇಕು. ಹೆಣ್ಣು ಮಕ್ಕಳು ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಸ್ತ್ರೀಯರಿಗೆ ಅಂತಹದೊAದು ಅಗಾಧ ಶಕ್ತಿ ಇದೆ. ಮಹಿಳೆಯರು ಉನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ಪುರುಷರಿಗೆ ಸಮಾನವಾಗಿ ದಾಪುಗಾಲಿಡುತ್ತಿದ್ದಾರೆ. ನಮ್ಮ ದೇಶದೊಳಗೆ ಶತ್ರುಗಳಿಲ್ಲ ಆದರೆ ದೇಶದ ಹೊರಗೆ ಶತ್ರುಗಳು ಸೃಷ್ಟಿಯಾಗಿದ್ದಾರೆ ಅವರು ದೇಶಕ್ಕೆ ಏನಾದರು ಆಪತ್ತು ಮಾಡಿದರೆ ಅವರನ್ನು ಸದೆ ಬಡಿಯಲು ನಾವು ಯೋಧರಾಗಿ ಹೋರಾಡಿ ದೇಶವನ್ನು ರಕ್ಷಿಸುವ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದರು.
ಉತ್ತರ ವಿಧಾನಸಭಾ ಶಾಸಕ ರವೀಂದ್ರನಾಥ ಮಾತನಾಡಿ, ೨೦೦ ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಹೋರಾಡಿ ನಮಗೆಲ್ಲರಿಗೂ ಸ್ಪೂರ್ತಿಯಾಗಿರುವ ಕಿತ್ತೂರಾಣಿ ಚೆನ್ನಮ್ಮನವರಂತೆ ಎಲ್ಲರೂ ಅನ್ಯಾಯವನ್ನು ಖಂಡಿಸಿ, ನ್ಯಾಯದ ಪರವಾಗಿ ಹೋರಾಟ ಮಾಡಬೇಕು ಎಂದರು.
ಸೀತಮ್ಮ ಕಾಲೇಜಿನ ಪ್ರಾಧ್ಯಾಪಕಿ ಅರುಣಾ ಕುಮಾರಿ ಬಿರಾದರ್ ಉಪನ್ಯಾಸ ನೀಡಿ, ಎಲ್ಲಿ ನಾರಿಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತು ಇದೆ. ಇದೇ ರೀತಿ ದೂತ ಕಪಟಿ, ಬಲಶಾಹಿ ಬ್ರಿಟಿಷರಿಂದ ನಮ್ಮ ನೆಲ-ಜಲ ರಕ್ಷಣೆ ಮಾಡಿದ ವೀರ ಮಹಿಳೆಯಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಇಂದಿನ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಆಕೆಯಲ್ಲಿದ್ದ ಛಲ, ಆತ್ಮವಿಶ್ವಾಸ, ಶೂರತ್ವ, ನಾಡು-ನುಡಿಯ ಮೇಲಿನ ಅಭಿಮಾನ ಎಲ್ಲವೂ ಯುವಜನಾಂಗಕ್ಕೆ ಆದರ್ಶಪ್ರಾಯ ಎಂದರು.
ಕಿತ್ತೂರು ಒಂದು ಸಣ್ಣ ರಾಜ್ಯವಾಗಿದ್ದು, ತಂತ್ರಜ್ಞಾನ, ಶಸ್ತ್ರಗಳ ಕೊರತೆ ಸಾಕಷ್ಟಿದ್ದರೂ ಸಹ ಒಬ್ಬ ಮಹಿಳೆಯಾಗಿ ನಾಡಿನ ಜನರ ರಕ್ಷಣೆಗೆ, ಕನ್ನಡ ನಾಡಿನ ಉಳಿವಿಗೆ ಬ್ರಿಟಿಷರ ವಿರುದ್ಧ ಹೋರಾಡಿದ ಮೊಟ್ಟ ಮೊದಲ ಮಹಿಳೆ ರಾಣಿ ಚೆನ್ನಮ್ಮ. ಅವರ ಹೋರಾಟಕ್ಕೆ ಉತ್ತಮ ಬೆಂಬಲ ದೊರಕಿದ್ದರೆ ಬ್ರಿಟಿಷರನ್ನು ದೇಶಬಿಟ್ಟು ಓಡಿಸಲು ೧೯೪೭ರವರೆಗೆ ಕಾಯಬೇಕಿರಲಿಲ್ಲ. ಆದರೆ, ನಮ್ಮವರೇ ಮಾಡಿದ ಕುತಂತ್ರದ ಫಲವಾಗಿ ಮೋಸ, ವಂಚನೆಯಿAದ ಬ್ರಿಟಿಷರ ದಾಳಿಗೆ ಸಿಲುಕುವ ಸಂದರ್ಭ ಬಂತು ಎಂದು ವಿಷಾದಿಸಿದರು.
ನಮಗೆ ಸ್ವಾತಂತ್ರ‍್ಯ ಬಂದು ೭೫ ವರ್ಷಗಳಾದರೂ ಆರ್ಥಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ನಾವಿನ್ನು ಹಿಂದುಳಿದಿದ್ದೇವೆ, ಎಲ್ಲರೂ ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಂಡು ಮುಂದೆ ಸಾಗಬೇಕು. ಸ್ತ್ರೀಯರ ಮೇಲೆ ನಡೆಯುವಂತಹ ಅನೇಕ ದೌರ್ಜನ್ಯಗಳು ಕೊನೆಗೊಳ್ಳಬೇಕು. ಐತಿಹಾಸಿಕ ಪ್ರಜ್ಞೆ ಕಡಿಮೆಯಾಗುವ ಈ ಕಾಲಘಟ್ಟದಲ್ಲಿ ಇತಿಹಾಸದ ಮನದಟ್ಟನ್ನು ಮಾಡಿಕೊಳ್ಳಬೇಕು ಎಂದರು.
ದೂಡ ಅಧ್ಯಕ್ಷ ಕೆ.ಎಂ ಸುರೇಶ್ ಮಾತನಾಡಿ, ಸರ್ಕಾರವು ಸ್ಥಳೀಯ ಹೋರಾಟಗಾರರನ್ನು ಗುರುತಿಸಿ ಅವರ ಇತಿಹಾಸವನ್ನು ಪುಸ್ತಕಗಳ ಮೂಲಕ ಮಾಹಿತಿ ನೀಡಿದರೆ ಉತ್ತಮ ಹಾಗೂ ಮಹಾನ್ ವ್ಯಕ್ತಿಗಳನ್ನು ಯಾವುದೇ ಒಂದು ವರ್ಗಕ್ಕೆ ಸೀಮಿತಗೊಳಿಸದೆ ಅವರ ಮಾರ್ಗದಲ್ಲಿ ಎಲ್ಲರು ಸಾಗಬೇಕು ಎಂದರು..
ಇದು ವೇಳೆ ಪಂಚಮಸಾಲಿ ಮಹಿಳಾ ಘಟಕ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಲಾವಣಿ ಗೀತೆ ಹಾಡಿದರು. ಪಂಚ ವಾಣಿ ಪತ್ರಿಕೆಯ ವಿಶೇಷ ಸಂಚಿಕೆ ಲೋಕಾರ್ಪಣೆ ಮಾಡಲಾಯಿತು. ಸಮಾಜದಲ್ಲಿ ಗಣನಿಯ ಸೇವೆ ಸಲ್ಲಿಸಿದ ಮೂರು ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ರಾಧ ಮತ್ತು ಸಂಗಡಿಗರಿAದ ಕಿತ್ತೂರಾಣಿ ಚೆನ್ನಮ್ಮನ ಕುರಿತು ನೃತ್ಯ ರೂಪಕವನ್ನು ಪ್ರದರ್ಶಿಸಿದರು.
ವೇದಿಕೆ ಮೇಲೆ ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್, ಉಪಮೇಯರ್ ಗಾಯತ್ರಿಬಾಯಿ ಕಂಡೋಜಿ ರಾವ್, ಜಿಲ್ಲಾ ಪೊಲೀಸ್ ವರಿಷಾ್ಠಧಿಕಾರಿ ಸಿ.ಬಿ ರಿಷ್ಯಂತ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯುತ ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಸಿ ಉಮಾಪತಿ, ಅಖಿಲ ಭಾರತ ಲಿಂಗಾಯುತ ಪಂಚಮಸಾಲಿ ಮಹಾಸಭಾ ಸಂಘದ ಜಿಲ್ಲಾಧ್ಯಕ್ಷರಾದ ಅಶೋಕ್ ಸೇರಿದಂತೆ ಅನೇಕರು ಹಾಜರಿದ್ದರು.