ನ್ಯಾಮತಿ ಃ ಕಾರ್ತಿಕ ಶುದ್ಧ ದ್ವಾದಶಿಯ ದಿನವಾದ ಶನಿವಾರÀ ಗೋಧೋಳಿ ಸಮಯದಲ್ಲಿ ತುಳಸಿ ಪೂಜೆಯನ್ನು ನ್ಯಾಮತಿ ಪಟ್ಟಣದ ಮನೆ ಮನೆಗಳಲ್ಲಿರುವ ತುಳಸಿ ಬೃಂದಾವನಕ್ಕೆ ಸುಮಂಗಲಿಯರು ತುಳಸಿ ಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.
ಸಾಲು ಸಾಲು ದೀಪಗಳ ಜೊತೆಗೆ ಬಾಂಧವ್ಯವನ್ನು ವೃದ್ಧಿಸುವ ದೀಪಾವಳಿ ಹಬ್ಬ ಮುಗಿದು ವಾರ ಕಳೆಯುವುದರೊಳಗಾಗಿ ಅದೇ ಹಬ್ಬವನ್ನು ನೆನಪು ಮಾಡುವ ತುಳಸಿ ಪೂಜೆ (ಕಿರು ದೀಪಾವಳಿ) ಮತ್ತೆ ಬಂದಿದೆ. ಅದೇ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ತುಳಸಿ ಪೂಜೆ. ಎಲ್ಲ ಹಬ್ಬದಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಈ ಹಬ್ಬವನ್ನು ಹಿಂದು ಸಂಪ್ರದಾಯದಂತೆ ಪ್ರತೀವರ್ಷ ಕಾರ್ತಿಕ ಶುದ್ಧ ದ್ವಾದಶಿಯಂದು ಸಂಭಮ-ಸಡಗರದಿಂದ ಆಚರಸಲಾಗುತ್ತದೆ.
ತುಳಸಿ ವಿವಾಹ ಃ ಸಾಮಾನ್ಯವಾಗಿ ಹಿಂದು ಧರ್ಮದಲ್ಲಿ ಹೆಚ್ಚಿನ ಮುತ್ತೈದೆಯರು, ಯುವತಿಯರು ಮುಂಜಾನೆ ಎದ್ದು ಸ್ನಾನ ಮಾಡಿ ತುಳಸಿ ಕಟ್ಟೆಗೆ ನೀರನ್ನು ಎರೆದು ಪೂಜೆಯನ್ನು ಮಾಡುವುದನ್ನು ಸಾಮಾನ್ಯವಾಗಿ ನಿತ್ಯ ನೋಡುತ್ತೇವೆ. ತುಳಸಿಯಷ್ಟೇ ಔಷಯ ಗುಣವನ್ನು ಹೊಂದಿರುವ ಬೆಟ್ಟದ ನೆಲ್ಲಿಕಾಯಿಯ ಗಿಡ ಅತ್ಯಂತ ಪಾಮುಖ್ಯವಾದುದರಿಂದ ಹಬ್ಬದ ದಿನದಂದು ಈ ಗಿಡಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚಿನ ಕಡೆಗಳಲ್ಲಿ ನೆಲ್ಲಿಕಾಯಿಯ ಆರತಿಯನ್ನೇ ಬೆಳಗುವುದು ಇನ್ನೊಂದು ವಿಶೇಷ.
ಪ್ರತಿ ಮನೆಯ ಅಂಗಳದಲ್ಲೂ ತುಳಸಿ ಸಸಿ ಇರುವುದು ಸಂಜೀವಿನಿ ಸಮಾನವಾದುದು. ಇದಕ್ಕೆ ಪೂಜೆ ಸಲ್ಲಿಸಿದರೆ ಪಾಪನಾಶ, ಸೇವನೆಯಿಂದ ರೋಗನಾಶ, ಪ್ರದಕ್ಷಿಣಿಯಿಂದ ದರಿದ್ರ ನಾಶ, ಫಲಪ್ರಾಪ್ತಿಗಳು ಲಭಿಸುವುದಕ್ಕಾಗಿ ಈ ತುಳಸಿ ಮಾತೆಯ ಪೂಜೆಯನ್ನು ಸುಮಂಗಲಿಯರು ನೆರವೇರಿಸುತ್ತಾರೆ ಎಂದು ಕವಿತಾಹೊಳೆಮಠ ತಿಳಿಸಿದರು.