ಹುಣಸಘಟ್ಟ: ರೈತ ಈಗ ಆರ್ಥಿಕವಾಗಿ ಸದೃಢನಾಗುತ್ತಿದ್ದಾನೆ ಎನ್ನುವುದು ಒಂದು ಕಡೆ ಖುಷಿಯನ್ನು ತಂದುಕೊಟ್ಟರೆ, ಇನ್ನೊಂದು ಕಡೆ ಅಡಿಕೆ ಬೆಳೆ ಪ್ರತಿ ವರ್ಷ ಸಾವಿರಾರು ಎಕ್ಕರೆ ಫಲವತ್ತಾದ ಭತ್ತದ ಬೆಳೆಯುವ ಭೂಮಿ ಅಡಿಕೆ ಬೆಳೆಯಾಗಿ ಪರಿವರ್ತನೆಯಾಗುತ್ತಿದ್ದು ಮುಂದೊಂದು ದಿನ ಎಲ್ಲಿ ಆಹಾರದ ಕೊರತೆ ತಲೆ ದೂರ ಬಹುದು ಎನ್ನುವ ಸಮಸ್ಯೆ ನಮ್ಮನ್ನು ಕಾಡುತ್ತಿದೆ ಎಂದು ದಾವಣಗೆರೆ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಸಿ ಟಿ ಸುರೇಶ್ ಹೇಳಿದರು
ಹೋಬಳಿ ಸಾಸ್ವೆಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಿದ ರೈತರ ಆದಾಯ ದ್ವಿಗುಣ ಗೊಳಿಸುವ ಬಗ್ಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದು ಜಿಲ್ಲೆ ಒಂದು ಉತ್ಪನ್ನ ವಿಷಯದ ಬಗ್ಗೆ ಮಾತನಾಡಿದ ಅವರು ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಒಂದೇ ಬೆಳೆ ಬೆಳೆಯುವುದು ಈ ಭಾಗದಲ್ಲಿ ವಾಡಿಕೆಯಾಗಿದ್ದು ಇದರ ಬದಲಿಗೆ ಮಿಶ್ರ ಬೆಳೆ ಬೆಳೆಯುವುದರಿಂದ ಮಾರುಕಟ್ಟೆ ಕುಸಿತ ರೋಗ ಮುಂತಾದ ಸಮಸ್ಯೆಗಳಿಂದ ಪಾರಾಗಿ ರೈತರು ಲಾಭ ಗಳಿಸಲು ಸಾಧ್ಯ ಎಂದರು.
ಸಾಸ್ವೆಹಳ್ಳಿ ಹೋಬಳಿ ಎ ಎಚ್ ಓ ರಮೇಶ್ ಮಾತನಾಡಿ ಈಗ ಸಿರಿಧಾನ್ಯಕ್ಕೆ ಹೆಚ್ಚಿನ ಬೇಡಿಕೆ ಇದ್ದು ಕಡಿಮೆ ಭೂಮಿಯಲ್ಲಿ ಏನನ್ನು ಬೆಳೆಯಲು ಅಸಾಧ್ಯ ಎನ್ನುವ ಭೂಮಿಯಲ್ಲಿ ಸಿರಿ ಧಾನ್ಯಗಳ ಬೆಳೆಯನ್ನು ಬೆಳೆದು ಸಿರಿ ಧಾನ್ಯಗಳ ಪೌಡರ್ ಅನ್ನು ಮಾಡಿ ಪಾಕೆಟ್ ಮಾಡಿ ಆದಾಯವನ್ನು ದ್ವಿಗುಣಗೊಳಿಸಬಹುದು ಎಂದರು.
ಸಾಸ್ವೆಹಳ್ಳಿ ಡಿ ಸಿ ಸಿ ಬ್ಯಾಂಕ್ ವ್ಯವಸ್ಥಾಪಕ ಗಣೇಶ್ ಮಾತನಾಡಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸಣ್ಣ ಸಣ್ಣ ಉದ್ಯಮ ದಾರರಿಗೆ ಸಾಕಷ್ಟು ಯೋಜನೆಗಳು ಲಭ್ಯವಿದ್ದು ಆಸಕ್ತ ರೈತರು ಯೋಜನೆಗಳ ಸದ್ಬಳಿಕೆ ಮಾಡಿಕೊಳ್ಳುವಂತೆ ತಿಳಿಸಿದರು
ರೈತರ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಶಶಿಧರ್ ಸೇರಿದಂತೆ ಹೋಬಳಿ ಸುತ್ತಮುತ್ತಲ ಗ್ರಾಮಗಳ ರೈತ ಮಹಿಳಾ ಸದಸ್ಯರು ಹಾಗೂ ರೈತರು ಪಾಲ್ಗೊಂಡಿದ್ದರು.