ಮಾನವೀಯ ಮೌಲ್ಯಗಳ
ವೃದ್ಧಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ
ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ಜಿ.ಪಂ.ಸಿಇಓ ಡಾ.ಎ
ಚೆನ್ನಪ್ಪ ಅವರು ಹೇಳಿದರು.
ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಆಡಳಿತ ಭವನದ
ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಮಾನವ
ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ
ಪ್ರತಿಜ್ಞಾ ವಿಧಿ ಬೋಧಿಸಿ, ಬಳಿಕ ಅವರು ಮಾತನಾಡಿದರು.
ಸಂವಿಧಾನದ ಮೂಲಭೂತ ತತ್ವಗಳನ್ನು ಆದರಿಸಿಯೇ
ನಮ್ಮ ದೇಶದಲ್ಲಿ ಎಲ್ಲರಿಗೂ ಹಕ್ಕುಗಳು ಮತ್ತು
ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಮಗುವಿನ ಹುಟ್ಟಿನಿಂದ
ಮೊದಲುಗೊಳ್ಳುವ ಹಕ್ಕುಗಳು, ಮರಣ ಕಾಲದವರೆಗೆ
ಜೀವನದುದ್ದಕ್ಕೂ ಆತನಿಗೆ ಹಕ್ಕುಗಳನ್ನು ನಮ್ಮ ಸಂವಿಧಾನ
ದಯಪಾಲಿಸಿದೆ. ಸಮಾನತೆ, ಸ್ವಾತಂತ್ರ್ಯತೆ ಹಾಗೂ
ಸಹೋದರತ್ವ ಇವು ಮಾನವ ಹಕ್ಕುಗಳ ರಕ್ಷಣೆಯ
ಮೂಲಾಧಾರವಾಗಿದೆ. ಸಮಾಜದಲ್ಲಿ ಮನುಷ್ಯ ಘನತೆಯಿಂದ
ಬದುಕು ಸಾಗಿಸಲು ಬೇಕಿರುವ ಮೂಲಭೂತ
ಅವಶ್ಯಕತೆಗಳನ್ನು ಪಡೆಯುವುದು ಆತನ ಹಕ್ಕು.
ಯಾವುದೇ ಕಾರಣದಿಂದ ಇದಕ್ಕೆ ತೊಡಕಾದಲ್ಲಿ, ಅದು ಮಾನವ
ಹಕ್ಕುಗಳ ಉಲ್ಲಂಘನೆಯಾದಂತೆ ಆಗುತ್ತದೆ. ಪ್ರತಿ
ವ್ಯಕ್ತಿಗೂ ಗೌರವ ನೀಡುವುದು ನಮ್ಮ ಕರ್ತವ್ಯ,
ಅಧಿಕಾರಿಗಳು ಇದಕ್ಕೆ ಚ್ಯುತಿ ಬಾರದ ರೀತಿಯಲ್ಲಿ, ಮಾನವ
ಹಕ್ಕುಗಳ ಉಲ್ಲಂಘನೆಯಾಗದ ರೀತಿಯಲ್ಲಿ
ನಡೆದುಕೊಳ್ಳಬೇಕು ಎಂದು ಹೇಳಿದರು.
ಮಾನವ ಹಕ್ಕುಗಳು ಅನೇಕ ಉದ್ದೇಶಗಳನ್ನು ಹೊಂದಿದೆ.
ಮಾನವ ಜೀವಿಗಳು ಈ ಪ್ರಪಂಚದಲ್ಲಿ ಮುಕ್ತರಾಗಿ ಜೀವಿಸುವ
ಮತ್ತು ಬೇಧ-ಭಾವವಿಲ್ಲದೇ ಬದುಕುವ ಹಕ್ಕು ಹೊಂದಿದ್ದಾರೆ.
ಯಾರ ಗುಲಾಮಗಿರಿಯಲ್ಲ್ಲೂ ಇರದೇ, ಸ್ವಂತತ್ರರಾಗಿ
ಜೀವಿಸಬೇಕು. ಹಿಂಸೆ ಮತ್ತು ಅಮಾನವೀಯವಾಗಿ ಬೇರೊಬ್ಬರಿಂದ
ಶಿಕ್ಷೆಗೆ ಒಳಗಾಗದಂತೆ ಜೀವಿಸುವ ಹಕ್ಕುಗಳು ಸೇರಿದಂತೆ ವಿವಿಧ
ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದರು.
ಇಂದು ಮಾನವ ಹಕ್ಕುಗಳ ಉಲ್ಲಂಘನೆ ವಿವಿಧ ರೀತಿಯಲ್ಲಿ
ಆಗುತ್ತಿದೆ. ಸಮಯಕ್ಕೆ ಸರಿಯಾಗಿ ನ್ಯಾಯ ಸಿಗದಿದ್ದರೂ ಸಹ,
ಮಾನವ ಹಕ್ಕುಗಳ ಉಲ್ಲಂಘನೆ ಆದಂತೆ. ಸಾಮಾಜಿಕ ಮತ್ತು
ಆರ್ಥಿಕ ಅಸಮಾನತೆಯೂ ಸಹ ಮಾನವ ಹಕ್ಕುಗಳ
ಉಲ್ಲಂಘನೆಗೆ ಪ್ರಮುಖ ಕಾರಣವಾಗಿದೆ. ಪ್ರಸ್ತುತ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲೂ ಮಾನವ ಹಕ್ಕುಗಳ
ಉಲ್ಲಂಘನೆ ಯಾಗುತ್ತಿರುವುದು ದುರಂತದ ಸಂಗತಿ ಎಂದು
ತಿಳಿಸಿದರು.
ಹಿರಿಯ ವಕೀಲರಾದ ಎಲ್.ಹೆಚ್ ಅರುಣ್ಕುಮಾರ್ ಅವರು ವಿಶೇಷ
ಉಪನ್ಯಾಸ ನೀಡಿ, ಎರಡನೆ ಮಹಾಯುದ್ಧ ಸಂದರ್ಭದಲ್ಲಿ
ಜಾಗತಿಕವಾಗಿ ನಡೆದ ಸಾಮೂಹಿಕ ಹತ್ಯೆ, ಅನಾಗರೀಕ
ಕೃತ್ಯಗಳ ಪರಿಣಾಮವಾಗಿ 1948 ಡಿ. 10 ರಲ್ಲಿ ವಿಶ್ವಸಂಸ್ಥೆ ಮಾನವ
ಹಕ್ಕುಗಳ ರಕ್ಷಣೆಗಾಗಿ ನೀತಿಯನ್ನು ಘೋಷಣೆ ಮಾಡಿತು.
ಅಂದಿನಿಂದ ಈವರೆಗೂ ಮಾನವ ಹಕ್ಕುಗಳ ರಕ್ಷಣೆ ವಿಷಯ
ಹಲವು ಮಜಲುಗಳನ್ನು ಕಂಡಿದೆಯಾದರೂ, ಈಗಲೂ ಮಾನವ
ಹಕ್ಕುಗಳ ಉಲ್ಲಂಘನೆ ನಿತ್ಯ ನಡೆಯುತ್ತಿರುವುದು
ಬೇಸರದ ಸಂಗತಿಯಾಗಿದೆ. ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿ,
ಮಾನವ ಕಳ್ಳಸಾಗಣೆ, ಲೈಂಗಿಕ ಕಿರುಕುಳ, ಹೆಚ್ಐವಿ
ಸೋಂಕಿತರಿಗೆ ಮಾಡಲಾಗುವ ತಾರತಮ್ಯ ಇವೆಲ್ಲವೂ ಮಾನವ
ಹಕ್ಕುಗಳ ಉಲ್ಲಂಘನೆಯೇ ಆಗಿದೆ ಎಂದರು ಮಾನವ
ಹಕ್ಕುಗಳ ಉಲ್ಲಂಘನೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳು
ಸಾಮಾನ್ಯವಾಗಿ ಪೆÇಲೀಸ್ ಇಲಾಖೆ ವಿರುದ್ಧವೇ ದಾಖಲಾಗುತ್ತವೆ. ದಕ್ಷಿಣ
ಆಫ್ರಿಕಾದ ನೆಲ್ಸನ್ ಮಂಡೇಲ ಅವರು ಸುಮಾರು 30
ವರ್ಷಗಳಿಗೂ ಹೆಚ್ಚು ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿದರು.
ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದವರಲ್ಲಿ ಇವರೂ
ಪ್ರಮುಖರು. ಶೋಷಿತರು, ಬಡವರು ತೊಂದರೆಗೆ
ಒಳಗಾದಾಗ, ಯಾರೂ ಕೂಡ ದೂರು ನೀಡದೇ ಹೋದರೂ,
ಮಾನವ ಹಕ್ಕುಗಳ ರಕ್ಷಣಾ ಆಯೋಗವೇ ಸ್ವಯಂ
ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಕ್ರಮ ಕೈಗೊಂಡ
ನಿದರ್ಶನಗಳು ಬಹಳಷ್ಟಿವೆ. ಯಾರೂ ಕೂಡ ಕಾನೂನು
ಕೈಗೆ ತೆಗೆದುಕೊಳ್ಳುವುದು, ಇತರರೊಂದಿಗೆ ಅಗೌರವವಾಗಿ,
ಮನುಷ್ಯತ್ವ ಮರೆತು ಕ್ರೂರ ರೀತಿಯಲ್ಲಿ ವರ್ತಿಸುವುದು
ಸರಿಯಲ್ಲ. ಮಾನವರಾದ ಎಲ್ಲರನ್ನೂ ಕಾನೂನು
ಸಮಾನವಾಗಿಯೇ ನೋಡುತ್ತದೆ ಎಂದರು.
ಆಡಳಿತಗಾರರಿಗೆ ಜನಸಾಮಾನ್ಯರ ಸಮಸ್ಯೆಗಳ ಅರಿವು
ಇರಬೇಕಾಗುತ್ತದೆ. ಇದರಿಂದ ಮಾನವ ಹಕ್ಕುಗಳ ರಕ್ಷಣೆಗೆ
ಸಹಕಾರಿಯಾಗಿ, ಉಲ್ಲಂಘನೆ ಪ್ರಕರಣಗಳನ್ನು
ನಿಯಂತ್ರಿಸಬಹುದಾಗಿದೆ. ಮಗು ಹುಟ್ಟಿದ ಕೂಡಲೇ ಬದುಕುವ
ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು
ಪಡೆದುಕೊಳ್ಳುತ್ತದೆ. ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ
ಇನ್ನೊಬ್ಬರ ಹಕ್ಕುಗಳಿಗೆ ತೊಂದರೆಯಾಗದಂತೆ
ನೋಡಿಕೊಳ್ಳಬೇಕು. ಅಂದಾಗ ಮಾತ್ರ ಮಾನವ ಹಕ್ಕುಗಳ
ದಿನಾಚರಣೆಗೆ ಮಹತ್ವ ದೊರೆಯುತ್ತದೆ. ಸ್ವಾತಂತ್ರ್ಯವಾಗಿ
ಜೀವಿಸುವುದು ಪ್ರತಿಯೊಬ್ಬರ ಹಕ್ಕು. ಭಾರತ ಸಂವಿಧಾನವು
ಪ್ರತಿ ಒಬ್ಬ ಪ್ರಜೆಗಳಿಗೂ ಸಮಾನತೆಯ ಹಕ್ಕು, ಜೀವಿಸುವ
ಹಕ್ಕು, ಸ್ವಾತಂತ್ರದ ಹಕ್ಕು, ಶಿಕ್ಷಣ ಪಡೆಯುವ ಹಕ್ಕು,
ಸೇರಿದಂತೆ ಹತ್ತು ಹಲವಾರು ಹಕ್ಕುಗಳನ್ನು ನೀಡಿದೆ. ನಾಗರಿಕ
ಸಮಾಜದಲ್ಲಿ ಹೆಚ್ಚಿನ ವಿಷಯ ತಿಳಿದವರೇ ಮಾನವ ಹಕ್ಕುಗಳ
ಉಲ್ಲಂಘನೆ ಮಾಡುತ್ತಾರೆ, ಋಷಿಮುನಿಗಳು ಆಶೀರ್ವದಿಸಿ, ಉತ್ತಮ
ಮೌಲ್ಯಯುತ ವಿಷಯಗಳು, ಸಂಸ್ಕಾರ ನೀಡಿದಂತಹ ದೇಶ
ನಮ್ಮದು. ಆದರೆ ನಮ್ಮ ದೇಶದಲ್ಲಿಯೇ ಮಾನವ
ಹಕ್ಕುಗಳ ರಕ್ಷಣೆಯ ಉಲ್ಲಂಘನೆ ಹೆಚ್ಚಾಗುತ್ತಿರುವುದು
ವಿಪರ್ಯಾಸವಾಗಿದೆ ಎಂದರು
ಕಾರ್ಯಕ್ರಮದಲ್ಲಿ ನಜ್ಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಕಾನೂನು
ಸಲಹೆಗಾರರದ ಹಾಲಪ್ಪ, ಅಂಗನವಾಡಿ ಕಾರ್ಯಕರ್ತೆಯರು
ಭಾಗವಹಿಸಿದ್ದರು.