ದಾವಣಗೆರೆ,ಜುಲೈ.19 ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದಿಂದ 2011 ರ ಜನಗಣತಿಯನ್ವಯ ಜನಸಂಖ್ಯೆಯನ್ನಾಧರಿಸಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಸ್ಥಾನಗಳ ವ್ಯಾಪ್ತಿಯನ್ನು ಪುನರ್ ನಿಗಧಿ ಮಾಡಿದ್ದು ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಜುಲೈ 24 ರೊಳಗಾಗಿ ಲಿಖಿತವಾಗಿ ಸಲ್ಲಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2011 ರ ಜನಗಣತಿಯನ್ವಯ ದಾವಣಗೆರೆ ಜಿಲ್ಲೆಯ ಗ್ರಾಮೀಣ ಜನಸಂಖ್ಯೆ 1024705 ಇದ್ದು ಜಿಲ್ಲೆಯಲ್ಲಿ 98 ತಾಲ್ಲೂಕು ಪಂಚಾಯತ್ ಮತ್ತು 29 ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ ಇರುತ್ತದೆ. ತಾಲ್ಲೂಕುವಾರು ವಿವರದನ್ವಯ ನ್ಯಾಮತಿ ಗ್ರಾಮೀಣ ಜನಸಂಖ್ಯೆ 75846 ಇದ್ದು 9 ತಾ.ಪಂ, 2 ಜಿ.ಪಂ ಸದಸ್ಯರ ಸಂಖ್ಯೆ, ಹೊನ್ನಾಳಿ 125957 ಗ್ರಾಮೀಣ ಜನಸಂಖ್ಯೆ ಇದ್ದು 13 ತಾ.ಪಂ, 4 ಜಿ.ಪಂ ಸ್ಥಾನಗಳು, ಹರಿಹರ 140355 ಗ್ರಾಮೀಣ ಜನಸಂಖ್ಯೆ ಇದ್ದು 15 ತಾ.ಪಂ ಮತ್ತು 4 ಜಿ.ಪಂ, ಜಗಳೂರು 154565 ಗ್ರಾಮೀಣ ಜನಸಂಖ್ಯೆ ಇರುತ್ತದೆ. ಇಲ್ಲಿ 16 ತಾ.ಪಂ, 4 ಜಿ.ಪಂ ಸ್ಥಾನಗಳು, ದಾವಣಗೆರೆ 247008 ಗ್ರಾಮೀಣ ಜನಸಂಖ್ಯೆ ಇದ್ದು 21 ತಾ.ಪಂ ಮತ್ತು 7 ಜಿ.ಪಂ ಸ್ಥಾನಗಳು, ಚನ್ನಗಿರಿ ತಾಲ್ಲೂಕಿನಲ್ಲಿ 281004 ಗ್ರಾಮೀಣ ಜನಸಂಖ್ಯೆ ಇದ್ದು 24 ತಾ.ಪಂ ಮತ್ತು 8 ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ನಿಗಧಿ ಮಾಡಲಾಗಿದೆ.
ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ ಸೀಮಾ ನಿರ್ಣಯ ನಿರ್ಧರಿಸುವ ಕುರಿತು ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಹಶೀಲ್ದಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿಗಳಿಗೆ ಜು.24ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಲು ತಿಳಿಸಲಾಗಿದೆ.