ನ್ಯಾಮತಿ; ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿದ ವಾರ್ಡಗಳಲ್ಲಿ ” ಸ್ಚಚ್ಚತೇಯೇ ಸೇವೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅ 1 ಭಾನುವಾರ ಬೆಳಗ್ಗೆ 10 ಗಂಟೆಯಿಂದ ಪ್ರಾರಂಭಗೊಂಡು ಮಧ್ಯಾಹ್ನ 12 ಗಂಟೆಯವರೆಗೆ ಸ್ವಚ್ಚತೆ ಕಾರ್ಯ ನಡೆಸಲಾಯಿತು. ಪ್ರಮುಖವಾಗಿ ಪಟ್ಟಣದಲ್ಲಿರುವ ಕೆರೆ ಆವರಣದ ಪರಿಸರ ಕಾಳಜಿ ಇರುವ ಹಂಪಣ್ಣ , ಮತ್ತು ಮುಖ್ಯಾದಿಕಾರಿ ನೇತೃತ್ವದಲ್ಲಿ, ಹಾಗೂ ಆರೋಗ್ಯ ಕೇಂದ್ರ ಆಸ್ಪತ್ರೆ ಆವರಣದಲ್ಲಿ , ಡಾ|| ಮೇಣಸಿಕಾಯಿ ಇವರ ಉಪಸ್ಥಿತಿಯಲ್ಲಿ,
ಮಾನ್ಯ ತಹಶೀಲ್ದಾರ್ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ, ಹಾಗೂ ಹರಳಿಕಟ್ಟೆ, ವೀರಭದ್ರೇಶ್ವರ ದೇವಸ್ಥಾನದ ಆವರಣದ ಸುತ್ತಮುತ್ತಲಿನ ಸ್ಥಳಗಲ್ಲಿ ಪುರಸಭೆ ಎಲ್ಲಾ ಸಿಬ್ಬಂದಿಗಳು, ಪರಿಸರ ಕಾಳಜಿ ಇರವ ಸ್ಥಳೀಯ ಮುಖಂಡರು ಸೇರಿದಂತೆ ಸಾರ್ವಜನಿಕರೊಂದಿಗೆ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದಲ್ಲಿ ಶ್ರಮಾಧಾನ ನಡೆಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ, ಪುರಸಭೆ ಮುಖ್ಯಾಧಿಕಾರಿ ಗಣೇಶರಾವ್ ಪಿ, ನಗರ ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲೋಕೇಶಪ್ಪ ಗುಂದೂರು ಷಣ್ಮುಖಪ್ಪ, ಕರಿಬಸಪ್ಪ ಇನ್ನು ಮುಂತಾದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ನಗರದ ಪ್ರಮುಖರು ಸೇರಿದಂತೆ ಪಟ್ಟಣ ಪಂಚಾಯಿತಿಯ ಕಾರ್ಮಿಕ ವರ್ಗದವರು ಸಹ ಈ ಕಾರ್ಯದಲ್ಲಿ ಭಾಗಿಯಾಗಿದ್ದರು.