ನ್ಯಾಮತಿ: ಪಟ್ಟಣದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ 6ನೇ ದಿನದ ಅಂಗವಾಗಿ ಶುಕ್ರವಾರ ದೇವಿ ಪೂಜೆಯನ್ನು 118 ಜನ ಮುತ್ತೈದೆಯರಿಗೆ ಬಾಗಿನ ಉಡಿ ತುಂಬ ಕಾರ್ಯಕ್ರಮ ನೆರವೇರಿಸಲಾಯಿತು.
ದೇವಸ್ಥಾನದ ಅರ್ಚಕರಿಂದ ಲಲಿತ ಸಹಸ್ರ ನಾಮಾವಳಿ ಸಮಿತಿಯ ಸದಸ್ಯರುಗಳಿಂದ ದೇವಿಯ ಅಷ್ಟೋತ್ತರ, ಮಹಾಮಂಗಳಾರತಿ, ಕುಂಕುಮಾರ್ಚನೆ, ಸಹಸ್ರನಾಮಾವಳಿಯನ್ನು ಜಪಿಸಿದರು. ಆಂಜನೇಯ ಸ್ವಾಮಿ ಅರ್ಚಕ ಜಯಲಿಂಗ ಸ್ವಾಮಿ ಶಿವಮೊಗ್ಗ ವಿಶ್ವನಾಥಯ್ಯ ದೇವಸ್ಥಾನದ ಅರ್ಚಕ ಪೂಜಾರಿ ಪುಟ್ಟಪ್ಪ ಧಾರ್ಮಿಕ ಕಾರ್ಯಕರ್ಮ ಗಳನ್ನು ನಡೆಸಿದರು. ದೇವಸ್ಥಾನದ ಸಮಿತಿಯವರ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.