ನ್ಯಾಮತಿ ಃ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ನಿಯೋಜಿತ ಉತ್ತರಾಧಿಕಾರಿ ಸದ್ಗುರು ಮಹಾಲಿಂಗ ಹಾಲಸ್ವಾಮೀಜಿಯಗುರು ಪಟ್ಟಾಧಿಕಾರ ಮಹೋತ್ಸವಪ್ರತಿಯೊಬ್ಬರು ತನು ,ಮನ , ಧನ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ನೆರವೇರಿಸುವಂತೆ ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾರ್ಚಾಯ ಸ್ವಾಮೀಜಿ ಹೇಳಿದರು.
ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಮಂಗಳವಾರ ಜರುಗಿದ ನಿಯೋಜಿತ ಉತ್ತರಾಧಿಕಾರಿ ಸದ್ಗುರು ಮಹಾಲಿಂಗ ಹಾಲಸ್ವಾಮೀಜಿಯ ಗುರು ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸÀಂಸ್ಕೃತಿ ನಾಶಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮಠಗಳ ಪಾತ್ರ ಮಹತ್ವ ಪಡೆದಿದ್ದು ಅರಿವು-ಆಚಾರ ಕಲಿಸುವ ಕೇಂದ್ರಗಳಾಗಿ ಮಠಗಳು ಕಾರ್ಯ ಮಾಡುತ್ತ ಬಂದಿರುವ ಹಾಲಸ್ವಾಮೀಜಿ ಬೃಹನ್ಮಠ ಶ್ರೀ ಕಾಶಿ ಪೀಠದ ಶಾಖಾ ಮಠವಾಗಿದ್ದು, ಹಲವು ಶತಮಾನದಿಂದಲೂ ವೀರಶೈವ ಧರ್ಮ ಕಾರ್ಯಗಳಲ್ಲಿ ಲಿಂಗೈಕ್ಯ ಹಾಲಸ್ವಾಮೀಜಿಯವರು ಸಾಕಷ್ಟು ಸಮಾಜಮುಖಿ ಕಾರ್ಯಗಳ ಮೂಲಕ ಹಲವೆಡೆ ಭಕ್ತ ಸಮೂಹದ ಪ್ರೀತಿ, ಗೌರವ, ಭಕ್ತಿಗೆ ಪಾತ್ರರಾಗಿದ್ದರು ಎಂದು ಹೇಳಿದರು
ಇಂದು ಮಠಗಳ ಸ್ವಾಮೀಜಿಗಳನಾಗಿ ಮಾಡಲು ಸಮಾಜದಲ್ಲಿಯಾರು ಮುಂದೆ ಬರುವುದಿಲ್ಲ ಅದರೆ ನಿಮ್ಮಗ್ರಾಮದ ಪುಣ್ಯ ಫಲದಿಂದ ನಿಮಗೆ ವಿದ್ಯೆ, ವಿನಯ, ಶಿಸ್ತು, ಸೌಜನ್ಯ, ಪ್ರತಿಭೆ, ಪಾಂಡಿತ್ಯಗಳಿಂದ ತಮ್ಮ ವ್ಯಕ್ತಿತ್ವ ಶೃಂಗರಿಸಿಕೊಂಡಿದ್ದು, ಕಿರಿಯ ವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡಬೇಕೆನ್ನುವ ಯತಿಗಳಾಗಿದ್ದಾರೆ. ಸದ್ಗುರು ಮಹಾಲಿಂಗ ಹಾಲಸ್ವಾಮೀಜಿಯ ಪ್ರತಿಯೊಬ್ಬರು ತನು ,ಮನ , ಧನ ಸಹಕಾರದೊಂದಿಗೆ ಪಟ್ಟಾಧಿಕಾರ ಮಹೋತ್ಸವನ್ನು ಅರ್ಥಪೂರ್ಣವಾಗಿ ಯಶಸ್ಸಿಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ನೇಮಕ, ಹಲವು ಪೂರ್ವಭಾವಿ ಕಾರ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ಪಟ್ಟಾಧಿಕಾರ ಮಹೋತ್ಸವಕ್ಕೆ ಸಂಬಂಧಿಸಿದಂತೆ ಡಿ.ಎಸ್.ಸುರೇಂದ್ರಗೌಡ , ಹೊನ್ನಾಳಿ ತಾಲೂಕು ಬೇಡಜಂಗಮ ಸೇವಾ ಸಮಾಜದಅಧ್ಯಕ್ಷ ಬೈರನಹಳ್ಳಿ ಪಂಚಾಕ್ಷರಯ್ಯ , ಕಸಾಪ ನ್ಯಾಮತಿ ತಾಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ , ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಗಾಧರಯ್ಯ , ಹೊನ್ನಾಳಿ ಎಂ.ಎಸ್.ಶಾಸ್ತ್ರಿಹೊಳೆಮಠ್ , ಹೊಲಳೂರು ಶಿವಲಿಂಗಶಾಸ್ತ್ರೀ , ಎಪಿಎಂಸಿ ಮಾಜಿಅಧ್ಯಕ್ಷ ದಿಡಗೂರು ಪ್ರಕಾಶ್ , ಯು.ಕೆ.ಮಧು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಿಯೋಜಿತ ಉತ್ತರಾಧಿಕಾರಿಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ,ಹಾಲಸ್ವಾಮಿ ಸೇವಾ ಸಮಿತಿಯ ಗೌರವಾಧ್ಯಕ್ಷ ಎಚ್. ಪಾಲಾಕ್ಷಪ್ಪಗೌಡ್ರು ,ಅಧ್ಯಕ ಎಸ್.ಇ.ರಮೇಶ್, ಕಾರ್ಯದರ್ಶಿ ವಿ.ಎಚ್. ರುದ್ರೇಶ , ಹಾಲಸ್ವಾಮಿ ಸೇವಾ ಸಮಿತಿ ಪದಾಕಾರಿಗಳಾದ ಶಿವಮೂರ್ತಿಪ್ಪ , ಮಧು , ಗಂಗಾಧರಪ್ಪ , ರಾಜಪ್ಪ , ನ್ಯಾಮತಿ ಸದಾಶಿವಯ್ಯ , ಚನ್ನೇಶ್ , ನ್ಯಾಮತಿ ಮೇಘರಾಜ್, ಕುರುವ ಹಾಲಸಿದ್ದಯ್ಯ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.