ನ್ಯಾಮತಿ:ತಾಲ್ಲೂಕು ದೊಡ್ಡೇತ್ತಿನಹಳ್ಳಿಪ್ರಸ್ತುತ ನಾರೀಶಕ್ತಿ ಹೆಚ್ಚು ಪ್ರಭಾವಶಾಲಿಯಾಗಿದ್ದು, ಮಹಿಳೆ ಎಲ್ಲಾಕ್ಷೇತ್ರದಲ್ಲೂ ಮುಂದಿದ್ದಾಳೆ ಎಂದುಶಿಶು ಅಭಿವೃದ್ದಿಇಲಾಖೆಯಒಡೆಯರಹತ್ತೂರು ವ್ಯಾಪ್ತಿಯ ಮೇಲ್ವಿಚಾರಕಿ ಪಾವಟಿ ತಿಳಿಸಿದರು.
ಗ್ರಾಮದ 2ನೇ ಅಂಗನವಾಡಿಕೇಂದ್ರದಲ್ಲಿಒಡೆಯರಹತ್ತೂರು ವ್ಯಾಪ್ತಿಯಅಂಗನವಾಡಿ ಕೇಂದ್ರಗಳಿಂದ ಗುರುವಾರ ವಿಶ್ವ ಮಹಿಳಾ ದಿನಾಚರಣೆ ಮತ್ತು ವಯೋನಿವೃತ್ತಿ ಹೊಂದಿದ ಸಿಬ್ಬಂದಿಗಳ ಸನ್ಮಾನಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ವಯೋನಿವೃತ್ತಿ ಹೊಂದಿದ ಕುಂಕುವ 2ನೇ ಅಂಗನವಾಡಿಕಾರ್ಯಕರ್ತೆ ಜಿ.ಆರ್.ಗಾಯಿತ್ರಿ,ನ್ಯಾಮತಿ 2ನೇ ಕೇಂದ್ರದ ಸಹಾಯಕಿ ಕಮಲಮ್ಮ, ದಾನಿಹಳ್ಳಿ ಸಹಾಯಕಿ ಪುಷ್ಪಾಅವರನ್ನುಗೌರವಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ಅಂಗನವಾಡಿಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿದರು.
ಕುಂಕುವ ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡೆತ್ತಿನಹಳ್ಳಿ ಕ್ಷೇತ್ರದಚಂದನಜಂಗ್ಲಿ, ಎಸ್‍ಡಿಎಂಸಿ ಅಧ್ಯಕ್ಷಗುರುಮೂರ್ತಿ, ಟಿ.ಚಂದ್ರಮ್ಮ, ವೈ.ಎಸ್.ರೂಪಾ,ಆಶಾಸೋಗಿ, ಎಂ.ಲತಾ ಹಾಗೂ 32 ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *