ದಾವಣಗೆರೆ; ಜೂನ್ 27 :  ಮಾದಕ ವಸ್ತುಗಳು ನಮ್ಮ ಜೀವನವನ್ನು ಹಾಳು ಮಾಡುವುದಲ್ಲದೇ ನಮ್ಮನ್ನು ದೈಹಿಕ, ಮಾನಸಿಕವಾಗಿ ಹಾಳು ಮಾಡುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ತಿಳಿಸಿದರು.
    ಗುರುವಾರ(27)ರಂದು ಜಿಲ್ಲಾ ಕಾರಾಗೃಹ ಇಲಾಖೆಯ ಸಂಭಾಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮನೋವೈದ್ಯಕೀಯ ವಿಭಾಗ, ಚಿಗಟೇರಿ ಜಿಲ್ಲಾಸ್ಪತ್ರೆ ದಾವಣಗೆರೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಪೋಲೀಸ್ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ, ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಣಿಕೆ ವಿರೋಧಿ ದಿನದ ಪ್ರಯುಕ್ತ ಕಾರಾಗೃಹ ನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದÀರು. ಇಂದಿನ ಯುವ ಸಮೂಹವು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು, ದುರದೃಷ್ಟಕರ ಸಂಗತಿಯಾಗಿದೆ. ಯುವಕರು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಆಲೋಚನೆ ಮಾಡಬೇಕೆ ಹೊರತು, ದುರಾಲೋಚನೆ ಮಾರ್ಗದಕಡೆ ಗಮನಹರಿಸಬಾರದು. ಈಗಿನ ಕಾಲೇಜಿನ ಯುವಕರು ತಂಬಾಕು, ಸಿಗರೇಟ್, ಇನ್ನಿತರ ಮಾದಕ ವಸ್ತುಗಳನ್ನು ಉಪಯೋಗಿಸುತ್ತಿದ್ದು. ವಿಲಾಸಿ ಜೀವನಕ್ಕೆ ಅವಲಂಭನೆಯಾಗುತ್ತಿದ್ದಾರೆ. ಕೆಲ ಕೀಡಿಗೇಡಿಗಳು ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ಯುವಕರಿಗೆ ಆಸೆ ತೋರಿಸಿ ಯುವಕರನ್ನು ತಪ್ಪುದಾರಿಯತ್ತ ಕರೆದೊಯುತ್ತಿದ್ದಾರೆ. ಮಾದಕ ವ್ಯಸನಕ್ಕೆ ದಾಸರಾದವರು ಪರಿಜ್ಞಾನವಿಲ್ಲದೇ ನಶೆಯಲ್ಲಿಯೇ ಏನಾದರೂ ಅವಘಡಗಳನ್ನು ಮಾಡಿಕೊಂಡು ಕಾರಾಗೃಹಕ್ಕೆ ಬಂದಿರುವವರೇ ಹೆಚ್ಚಾಗಿದೆ. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಿಕೆಯಲ್ಲಿ ಯೋಗ, ಧ್ಯಾನದಲ್ಲಿ ನಿರತರಾಗಬೇಕು ಮತ್ತು ಕಾರಾಗೃಹವು ನಿಮಗೆ ಪರಿವರ್ತನಾ ಮಂದಿರವಿದ್ದಂತೆ, ಇಲ್ಲಿ ಬಂದಿರುವ ಎಲ್ಲರೂ ಕೂಡ ತಮ್ಮ ಮನಃಪರಿವರ್ತನೆ ಮಾಡಿಕೊಂಡು ಹೊರಗಡೆ ಹೋದ ನಂತರ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಕೀವಿ ಮಾತು ಹೇಳಿದರು.
  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ  ಮಂಜುನಾಥ್ ಮಾತನಾಡಿ ಯುವಕರು ದುಷ್ಟರ ಸಹವಾಸದಿಂದ ಅನ್ಯ ಮಾರ್ಗದಕಡೆಗೆ ಹೋಗುತ್ತಿದ್ದಾರೆ. ನಾವುಗಳು 3 ರೀತಿಯ ಮಾದಕ ವಸ್ತುಗಳನ್ನು ನೋಡಬಹುದಾಗಿದೆ, ಅವುಗಳೆಂದರೆ ಕಾನೂನು ಬದ್ದ ಮಾದಕ ವಸ್ತುಗಳಾದ ಮದ್ಯ, ತಂಬಾಕು, ಸಿಗರೇಟ್. ಕಾನೂನು ಬದ್ದವಲ್ಲದ ಅಕ್ರಮ ಮಾದಕ ವಸ್ತುಗಳು ವಿನೋದ ಉಂಟು ಮಾಡುವ ಡ್ರಗ್ಸ್, ಅಂಗಡಿಗಳಲ್ಲಿ ದೊರೆಯುವ ಅಥವಾ ವೈದ್ಯರು ಸೂಚಿಸಿದ ಔಷಧಿಗಳು ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು. ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಕೂಡ ಮನಸ್ಸಿನ ಮೇಲೆ ಪರಿಣಾಮ ಬಿರುವಂತಹದ್ದಾಗಿವೆ. ಇದರಲ್ಲಿ ಅಕ್ರಮ ಮಾದಕ ವಸ್ತುಗಳು ಮತ್ತು ವಿನೋದ ಉಂಟು ಮಾಡುವ ಡ್ರಗ್ಸ್‍ಗಳಲ್ಲಿ ಕೆಲ ಕೀಡಿಗೇಡಿಗಳು ಯುವಕರನ್ನು ದುರ್ಮಾಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆÉ ಮಾಹಿತಿ ನೀಡಿದರೆ ಅಂತವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.
  ಕಾರಾಗೃಹದ ಅಧೀಕ್ಷಕರಾದ ಕರ್ಣ.ಬಿ.ಕ್ಷತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಆಸ್ಪತ್ರೆಯ ಮನೋವೈದ್ಯರಾದ ಡಾ. ಮರುಳಸಿದ್ದಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ್ ಎಲ್. ಪಾಟೀಲ್, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಡಾ.ಸುರೇಶ್‍ಬಾರ್ಕಿ, ಮನೋವೈದ್ಯಕೀಯ ಸಂಶೋಧನಾ ವಿದ್ಯಾರ್ಥಿ ಡಾ.ಐಶ್ವರ್ಯ, ಡಾ.ಪ್ರಶಲ್.ಹೆಚ್. ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಸಂತೋಷ್‍ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
======

Leave a Reply

Your email address will not be published. Required fields are marked *