ದಾವಣಗೆರೆ, ಸೆ.12- ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ವತಿಯಿಂದ ಸೆಪ್ಟೆÉಂಬರ್ 15 ರಂದು ಬೆಳಿಗ್ಗೆ 10.30 ಕ್ಕೆ ಬಾಪೂಜಿ ಸಭಾಂಗಣದಲ್ಲಿ ನಾಂದಿ ಆರಂಭೋತ್ಸವ ರಾಜ್ಯ ಮಟ್ಟದ ವಿಚಾರ ಸಂಕಿರಣ, ರಂಗಗೀತೆಗಳ ಗಾಯನ, ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಸಂಜೆ 4.00 ಗಂಟೆಗೆ ನಾಂದಿ ಆರಂಭೋತ್ಸವ ಹಾಗೂ ಸಂಜೆ 6.00 ಗಂಟೆಗೆ ಅಕ್ಕಮಹಾದೇವಿ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಗಣಿ ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್‍ನವರು ಕಾರ್ಯಕ್ರಮ ಉದ್ಘಾಟಿಸುವರು. ದಕ್ಷಿಣ ಕ್ಷೇತ್ರ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಶ್ರೀ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಅವರು ಸಾನಿಧ್ಯವಹಿಸಲಿದ್ದು ಹಂಸಲೇಖ ಅವರು ರಂಗಜ್ಯೋತಿ ಬೆಳಗುವಿಕೆ ಕಾರ್ಯಕ್ರಮ ನಡೆಸಿಕೊಡುವರು.
ವರ್ತಮಾನದ ವೃತ್ತಿ ರಂಗಭೂಮಿ ಬಿಕ್ಕಟ್ಟು ಮತ್ತು ಪರಿಹಾರ ಅಧ್ಯಕ್ಷತೆ ಎಲ್.ಬಿ. μÉೀಕ್ ಮಾಸ್ತರ, ದಿಕ್ಕೂಚಿ ನುಡಿ ಸಿ. ಬಸವಲಿಂಗಯ್ಯ, ಪ್ರಬಂಧ ಮಂಡನೆ ಡಾ. ಪ್ರಕಾಶ ಗರುಡ, ವಿಷಯ; ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ ಬಸವರಾಜ ಬೆಂಗೇರಿ, ಸಾಹಿತ್ಯ ಮತ್ತು ಸಂಗೀತ ಅರುಣ್ ಸಾಗರ್, ರಂಗ ಪರಿಕರ ಮತ್ತು ರಂಗ ಸಜ್ಜಿಕೆ ನಿರ್ವಹಣೆ,ನಿರೂಪಣೆ ಶ್ರೀಧರ ಹೆಗಡೆ.
ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್. ಬಸವಂತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋಹನ್ ಕುಮಾರ ಕೊಂಡಜ್ಜಿ, ಮಹಾಪೌರರಾದ ವಿನಾಯಕ ಬಿ.ಹೆಚ್, ವಿಧಾನ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೊಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸುರೇಶ ಬಿ. ಇಟ್ನಾಳ್, ಧಾರವಾಡ ರಂಗಯಣ ನಿರ್ದೇಶಕರಾದ ಡಾ.ತಾಳಿಕೋಟೆ, ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕøತರಾದ ಚಿಂದೋಡಿ ಶ್ರೀಕಂಠೇಶ್ ಹಾಗೂ ಇನ್ನಿತರರು ಭಾಗವಹಿಸುವರು.