ನ್ಯಾಮತಿ:ಯಾವುದೇ ಸಂಘಟನೆಗಳು ಆಯೋಜಿಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ವೈದ್ಯ ಶ್ರವಣ್ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಸರ್ಕಾರಿ ಶಾಲೆಯಲ್ಲಿ ಭಾನುವಾರ ಜಾಮಿಯ ಮಸೀದಿ ಕಮಿಟಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಉರ್ದು ಶಾಲೆ ಎಸ್ಡಿಎಂಸಿ ಕಮಿಟಿ ಮತ್ತು ಕಣಚೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. ಈ ಭಾಗದಿಂದ ಹೆಚ್ಚು ಜನರು ಚಿಕಿತ್ಸೆಗಾಗಿ ಬರುತ್ತಿರುವುದರಿಂದ, ಈ ಭಾಗದ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇ±ದಿಂದ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಕಣಚೂರು ಅಸ್ಪತ್ರೆಯ ಪಿಆರ್ಒ ಅಜ್ಗರ್ಆಲಿ, ರಷೀದ್ ಅವರು ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ವೈದ್ಯಕೀಯ ಶಾಸ್ತ್ರತಜ್ಞರು, ಮಕ್ಕಳ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮೂಳೆ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಕಿವಿ,ಮೂಗು,ಗಂಟಲು ತಜ್ಞರು, ಚರ್ಮರೋಗ ತಜ್ಞರಿಂದ ಅಂದಾಜು 602 ರೋಗಿಗಳನ್ನು ತಪಾಸಣೆ ಮಾಡಿ ಅವರಲ್ಲಿ 100 ರೋಗಿಗಳಿಗೆ ಕಣಚೂರು ಆಸ್ಪತ್ರೆಯ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಜಾಮಿಯ ಮಸೀದಿ ಅಧ್ಯಕ್ಷ ಜಬಿವುಲ್ಲಾ, ಕಾರ್ಯದರ್ಶಿ ಆಸ್ಲಾಂಪಾಷ, ಎಸ್ಡಿಎಂಸಿ ಅಧ್ಯಕ್ಷ ಶಮ್ಸ್ತಬ್ರಿಜ್, ಸದಸ್ಯರಾದ ಸಿದ್ದಿಕಿ, ಸೈಯದ್ ಅಪ್ಸರ್ ಪಾಷ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಸಲಾಂಸಾಬ್,ಬಾಬುಸಾಬ್,ಯುನುಷ್ಬಾಷ, ಮಹಮದ್ರಫಿಕ್, ಜಿ.ನಿಜಲಿಂಗಪ್ಪ, ಚಂದ್ರನ್ಜಂಗ್ಲಿ, ಎಂ.ಎಸ್.ಜಗದೀಶ, ಬಿ.ಜಿ.ಚೈತ್ರಾ, ಎಸ್.ಜಿ.ಬಸವರಾಜಪ್ಪ, ಪಿಡಿಒ ಜಯಪ್ಪ, ಗಜಾನನ, ಈ ಸುಮಲತಾ, sಸಿ.ಕೆ.ಬೋಜರಾಜ, ಉರ್ದು ಶಾಲೆಯ ಮುಖ್ಯಶಿಕ್ಷಕಿ ಅಬಿದಾಬಾನು, ಜಿ.ಮಮತಾ,ಸುರೇಶ, ಸಿಬ್ಬಂದಿ ಸರೋಜ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಣಚೂರು ಆಸ್ಪತ್ರೆಯ ವೈದ್ಯರಾದ ಪ್ರøಥ್ವಿ, ಹಿಂದ್, ಚರಣ್, ರಿಜ್ವಾನ್,ಐಶ್ವರ್ಯ, ದೇಸಾಯಿ ಅಕಾಂಕ್ಷ, ಜೀತು,ಸಪ್ರೀನ್, ಜಾನ್,ಗೋಕುಲ್ ಸನಾ ಪಾಲ್ಗೊಂಡಿದ್ದರು.
