ನ್ಯಾಮತಿ: ತಾಲ್ಲೂಕು ಯರಗನಾಳ್ ಗ್ರಾಮದ ಇಬ್ಬರು ರೈತರಿಗೆ ಸೇರಿದ ಮೆಕ್ಕೆಜೋಳದ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲದ ಘಟನೆ ಮಂಗಳವಾರ ನಡೆದಿದೆ.
ಗ್ರಾಮದ ವೀರಬಸಪ್ಪ ಅವರ ಎರಡು ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ಖಾಲಿ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ 70 ಕ್ಷಿಂಟಲ್ ಅಂದಾಜಿನ ಮೆಕ್ಕೆಜೋಳ ಆಕಸ್ಮಿಕ ಬೆಂಕಿಯಿಂದ ಸುಟ್ಟು ಅಂದಾಜು ರೂ 1,25 ಲಕ್ಷ ನಷ್ಟವಾಗಿದೆ.
ಮತ್ತೊಬ್ಬ ರೈತ ಬಸಪ್ಪ ಅವರ ಎಂಟು ಎಕರೆ ಜಮೀನಿನಲ್ಲಿ ಬೆಳೆದ 250 ಕ್ವಿಂಟಲ್ ಮೆಕ್ಕೆಜೋಳದ ರಾಶಿ ಭಸ್ಮವಾಗಿದೆ. ಅಂದಾಜು 3.50 ಲಕ್ಷ ನಷ್ಟವಾಗಿದೆ.
ಬೆಂಕಿ ತಗಲಿದ ಕೂಡಲೆ ಗ್ರಾಮಸ್ಥರು ಮತ್ತು ಹೊನ್ನಾಳಿ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
