ನ್ಯಾಮತಿ ಜಾಮೀಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ
ಸಮುದಾಯದವರು ಭಾನುವಾರ ಸಾರ್ವಜನಿಕರಿಗೆ ಇಪ್ತಿಯಾರ್ ಕೂಟವನ್ನು ಏರ್ಪಡಿಸಿ
ವಿಶೇಷ ಹಣ್ಣಿನ ರಸಾಯನ, ಜ್ಯೂಸ್, ಉಪ್ಪಿಟ್ಟು, ಸಮೋಸ, ಕೇಸರಿಬಾತ್ನ್ನು
ವಿತರಿಸಿದರು. ನಿವೃತ್ತ ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ಕಸಾಪ ಅಧ್ಯಕ್ಷ
ಡಿ.ಎಂ.ಹಾಲಾರಾಧ್ಯ, ಮಹೇಶ್ವರ ಕ್ಲಾತ್ ಹಾಲ್ ಮಾಲೀಕ ಹೊಮ್ಮರಡಿ ಸಂದೀಪ,
ಯುವ ಮುಖಂಡರಾದ ಎ.ಕೆ.ಕರಿಬಸಪ್ಪ, ರೆಡ್ಡಿ ಸತೀಶ, ಕುಮಾರ,
ಮಹಾಂತರೆಡ್ಡಿ, ಸಿ.ಜಿ. ರವಿ, ಜೋಗದ ಸೋಮಶೇಖರ, ಪೊಲೀಸ್ ಇಲಾಖೆಯ
ಕೆ.ಮಂಜಪ್ಪ, ಎ.ಎಸ್.ಐ ಮಲ್ಲೇಶಪ್ಪ ಅವರು ಭಾಗವಹಿಸಿ ಮುಸ್ಲಿಂ
ಸಮುದಾಯದವರಿಗೆ ರಂಜಾನ್ ಶುಭಾಷಯ ಕೋರಿದರು.
