ತೀರ್ಥಹಳ್ಳಿ: ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದು ಇಲ್ಲ ನಾನು ಶಾಸಕ ಸ್ಥಾನದಿಂದಲೆ ಕ್ಷೇತ್ರದ ಅಭಿವೃದ್ಧಿ ಮಾಡುವ ನನ್ನ ಪ್ರಯತ್ನ ನಿರಂತರ ನಡೆಯುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಉಂಬ್ಳೇಬೈಲಿನಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿ ಗಳ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಾ ಅಭಿವೃದ್ಧಿ ಕೇವಲ ಬಾಷಣ ಮಾತಿನಿಂದ ಆಗುವಂತದ್ದಲ್ಲ ಅದೊಂದು ಸಂಕಲ್ಪ ,ಸಂಕಲ್ಪ ಮಾಡಿ ಹೋರಾಟದಿಂದಲೆ ಅಭಿವೃದ್ಧಿ ಸಾದಿಸುವ ಛಲ ನನಗಿದೆ, ಯಾವುದೇ ಕೌಟುಂಬಿಕ ಹಿನ್ನಲೆ ಇಲ್ಲದ ನನ್ನಂತವರಿಗೆ ಜನ ನಾಲ್ಕು ಬಾರಿ ಶಾಸಕ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ ಅದರ ಸಧ್ಬಳಕೆ ಮಾಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ ಎನ್ನುವ ಭರವಸೆ ನೀಡಿದರು. ನಂತರ ತೀರ್ಥಹಳ್ಳಿ ಕ್ಷೇತ್ರ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ನೂರಾರು ಕಿ ಮೀ ದೂರವಿದೆ ಒಂದು ಬಾಗದ ಅಭಿವೃದ್ಧಿ ಯೊಚಿಸಿದರೆ ಮತ್ತೊಂದು ಬಾಗ ಕುಂಠಿತವಾಗುತ್ತದೆ. ಪೂರ್ಣ ಕ್ಷೇತ್ರದ ಕಲ್ಪನೆ ಇಟ್ಟುಕೊಂಡು ಅಭಿವೃದ್ಧಿ ಸಾದಿಸುವುದು ಒಂದು ದೊಡ್ಡ ಚಾಲೆಂಜ್ ಎಂದರಲ್ಲದೇ ಸ್ಥಿರ ಸಧೃಡ ಸರ್ಕಾರ ಬಂದಿದೆ ಮುಖ್ಯಮಂತ್ರಿ ಗಳು ನಮ್ಮ ಜಿಲ್ಲೆಯವರೆ ಎನ್ನುವುದು ಸಮಾಧಾನಕರ ಸಂಗತಿ ಎಂದು ತಿಳಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹೇಮಾವತಿ ಶಿವನಂಜಪ್ಪ ಗ್ರಾಮ ಪಂಚಾಯತ್ ಸದಸ್ಯರು ಶಾಸಕರೊಂದಿಗೆ ಹಾಜರಿದ್ದರು.
ಅಧ್ಯಾತ್ಮ
ಉದ್ಯೋಗ
ಕೃಷಿ
ಕ್ರೀಡೆ
ದಾವಣಗೆರೆ
ದೇಶ/ವಿದೇಶ
ವಾಣಿಜ್ಯ/ತಂತ್ರಜ್ಞಾನ
ಸಾಹಿತ್ಯ ಸಂಗೀತ
ಸುದ್ದಿ ವಿಶೇಷ
ಸ್ಟೇಟ್ ನ್ಯೂಸ್
ಸ್ಥಳೀಯ ಸುದ್ದಿ