Exclusive ದಾವಣಗೆರೆ [31.12.19]ದಾವಣಗೆರೆ # ಮಾಯಕೊಂಡ ತಾಲ್ಲೂಕು ರಚನೆ ಕುರಿತು ಸಭೆ # ದಾವಣಗೆರೆ ಡಿ.31 ಜಿಲ್ಲೆಯ ಮಾಯಕೊಂಡವನ್ನು ಹೊಸ ತಾಲ್ಲೂಕನ್ನಾಗಿ ರಚಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2020 ರ ಜನವರಿ 04 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವಜನಿಕ ಮುಖಂಡರು/ಸಾರ್ವಜನಿಕರು ಸಭೆಗೆ ಹಾಜರಾಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ****************************** December 31, 2019 Aravind S