ಕಳೆದ ವರ್ಷ ಬೆಂಕಿ ಅನಾಹುತದಿಂದ ಬಂಡೀಪುರ ಭಾಗದ ಸಾಕಷ್ಟು ಅರಣ್ಯ ನಾಶವಾಗಿತ್ತು. ಈ ಹಿನ್ನೆಲೆ ಕಳೆದ ವರ್ಷದ ಅನಾಹುತ ಮತ್ತೆ ನಡೆಯದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಚಳಿಗಾಲದಲ್ಲೇ ಫೈರ್‌ಲೈನ್ ಕಾಮಗಾರಿ ಆರಂಭಿಸಿದ್ದಾರೆ.
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಬಾರಿ ಬೆಂಕಿ ಅನಾಹುತದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ಮುಂಜಾಗ್ರತಾ ಕ್ರಮವಾಗಿ ಚಳಿಗಾಲದಲ್ಲೇ ಬೆಂಕಿ ರೇಖೆ (ಫೈರ್ ಲೈನ್) ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.
ಬಂಡೀಪುರ ಉದ್ಯಾನದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ಮತ್ತು 67, ಗುಂಡ್ಲುಪೇಟೆ, ನಂಜನಗೂಡು ಮತ್ತು ಕೋಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಇಕ್ಕೆಲಗಳನ್ನು ಒಳಗೊಂಡಂತೆ ಒಟ್ಟು 2,550 ಕಿ.ಮೀ ಉದ್ದದ ಬೆಂಕಿ ರೇಖೆ ನಿರ್ಮಿಸಲು ಈಗಾಗಲೇ ಕಾರಾರಯಚರಣೆ ಆರಂಭವಾಗಿದೆ. ಮೊದಲ ಹಂತದಲ್ಲಿ ಬೆಂಕಿ ನಿರ್ಮಿಸಲು ಗುರುತಿಸಲಾದ ಪ್ರದೇಶದಲ್ಲಿ ಜಂಗಲ್ ಕಟಿಂಗ್ ನಡೆಯುತ್ತಿದೆ.
ಈಗ ಅರಣ್ಯ ಇಲಾಖೆ ನೌಕರರು ಮತ್ತು 445 ಮಂದಿ ನೇಮಕಗೊಂಡ ಫೈರ್ ವಾಚರ್‌ಗಳನ್ನು ಬಳಸಿಕೊಂಡು ಮೊದಲ ಹಂತದಲ್ಲಿ ಹುಲ್ಲು ಸುಡುವ ಕೆಲಸ ಆಗುತ್ತಿದೆ. ಬೇಸಿಗೆ ಸಮಯದಲ್ಲಿ ಇನ್ನೊಂದು ಹಂತದಲ್ಲಿ ಹುಲ್ಲು ಸುಟ್ಟರೆ ಬೆಂಕಿ ರೇಖೆ ನಿರ್ಮಾಣ ಪೂರ್ಣಗೊಳ್ಳುತ್ತದೆ.
ಬಂಡೀಪುರ ಉದ್ಯಾನ ಸೇಫ್
ಬೆಳೆದು ನಿಂತ ಹುಲ್ಲು: ಈಗ ಕಾಡಿನಲಿ ಹುಲ್ಲುಮಂಡಿ ಯುದ್ದ ಬೆಳೆದು ನಿಂತಿದೆ. ಕಾಡಂಚಿನ ಗ್ರಾಮಗಳ ರೈತರು ಅರಣ್ಯದಲ್ಲಿ ಜಾನುವಾರುಗಳನ್ನು ಮೇಯಿಸಲು ನಿರ್ಬಂಧ ಇರುವ ಕಾರಣ ಮತ್ತು ಜಿಂಕೆ ಇತರ ಸಸ್ಯಹಾರಿ ಪ್ರಾಣಿಗಳು ರಸ್ತೆ ಬದಿಯಲ್ಲಿ ಮತ್ತು ಕಾಡಂಚಿನಲ್ಲಿ ಮೇಯುವುದು ಕಡಿಮೆ. ಹೀಗಾಗಿ ಹುಲ್ಲು ಖಾಲಿ ಆಗಿಲ್ಲ. ಇದರೊಂದಿಗೆ ಉದ್ಯಾನದ ಶೇ. 60ರಷ್ಟು ಭಾಗದಲ್ಲಿ ಲಂಟಾನ ವ್ಯಾಪಿಸಿರುವ ಕಾರಣ ಬೆಂಕಿ ಅನಾಹುತ ಸಂಭವಿಸಿದರೆ ಹಿಂದಿನ ವರ್ಷದಂತೆ ಬೆಂಕಿ ಹತೋಟಿಗೆ ತರುವುದು ಕಡು ಕಷ್ಟ. ಈ ಕಾರಣದಿಂದ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಪ್ರಾಣಿಗಳಿಗೆ ತೊಂದರೆಯಾಗದಂತೆ ಜಾತ್ರೆ ಆಚರಿಸಿ
ಅಗಲಗೊಂಡ ಬೆಂಕಿ ರೇಖೆ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಎರಡು ಬದಿಯಲ್ಲಿ ತಲಾ 15 ಮೀ. ಅಗಲಕ್ಕೆ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಇತರೆ ಸಂಪರ್ಕ ರಸ್ತೆಗಳಲ್ಲಿ 10 ಮೀ. ಅಗಲಕ್ಕೆ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಅಡ್ಡ ಬೆಂಕಿ ಕೊಡುವುದಕ್ಕೆ ಅನುಕೂಲವಾಗುವಂತೆ ಮತ್ತು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಬೆಂಕಿ ವ್ಯಾಪಿಸುವುದನ್ನು ತಡೆಗಟ್ಟುವ ಸಲುವಾಗಿ ಬೆಂಕಿ ರೇಖೆ ಅಗಲವನ್ನು ಹಿಂದಿನ ವರ್ಷಗಳಿಗಿಂತ ಹೆಚ್ಚಿಸಲಾಗಿದೆ.
ಹಂಪಾಪುರದಲ್ಲಿಒಂಟಿ ಸಲಗ ಪ್ರತ್ಯಕ್ಷ
ಬೆಂಕಿ ಅನಾಹುತ
ಹಿಂದಿನ ವರ್ಷ ಫೆಬ್ರವರಿಯಲ್ಲಿ ಉದ್ಯಾನದಂಚಿನ ಹುಂಡೀಪುರ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಪಶ್ಚಿಮದತ್ತ ವ್ಯಾಪಿಸಿ ಗೋಪಾಲಸ್ವಾಮಿಬೆಟ್ಟ ವಲಯದ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಆಪೋಷನ ತೆಗೆದುಕೊಂಡಿತ್ತು. ಬೆಂಕಿ ನಂದಿಸುವ ಕಾರ್ಯಕ್ಕೆ ಸೇನಾ ಹೆಲಿಕಾಪ್ಟರ್ ಒದಗಿಸುವ ವ್ಯವಸ್ಥೆ ಮಾಡಿದ್ದರು. ಆ ಮೂಲಕ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸಾಲುಗಳಲ್ಲಿ ಪಶ್ಚಿಮಕ್ಕೆ ಹರಡುತ್ತಿದ್ದ ಬೆಂಕಿ ನಂದಿಸಲಾಗಿತ್ತು.