ದಾವಣಗೆರೆ
ಯರಗುಂಟೆಯಲ್ಲಿರುವ ಸೇವಾ ನಿಕೇತನ ಡಿಸೇಬಲ್ಡ್ ಶಾಲೆಗೆ ಇಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪದ್ಮಾ ಬಸವಂತಪ್ಪ ಇವರು ಭೇಟಿ ನೀಡಿದರು. ಅವರು ಇಂದು ಶಾಲೆಗೆ ಬೇಟಿ ನೀಡಿದಾಗ ಶಾಲೆಯ ವಿಕಲಚೇತನ ಮಕ್ಕಳು ಅವರನ್ನು ಸಂತೋಷದಿಂದ ಬರಮಾಡಿಕೊಂಡರು. ನಂತರ ಸಿಇಒ ಮಕ್ಕಳ ಯೋಗಕ್ಷೇಮ ಹಾಗೂ ಅವರ ಊಟ, ವಸತಿ ಕುರಿತು ವಿಚಾರಿಸಿ, ಅಲ್ಲಿರುವ ಮಕ್ಕಳಿಗೆ ಅಗತ್ಯ ಸೌಲಭ್ಯ ನೀಡುವಂತೆ ತಿಳಿಸಿದರು.