15\01\2020 ನಡೆದ ಸರಳ ಕಾರ್ಯಕ್ರಮದಲ್ಲಿ ಹೊನ್ನಾಳಿಯ ಮಾಜಿ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಡಿ ಜಿ ಶಾಂತನಗೌಡರವರು Online ಸುದ್ದಿ ಮಾಧ್ಯಮ
ABC News India – Online News Channel in Karnataka ಗೆ ಹೊನ್ನಾಳಿಯಲ್ಲಿ online ನಲ್ಲಿ ಅಧಿಕೃತ ಚಾಲನೆ ನೀಡಿದರು.
ನಂತರ ಮಾತನಾಡಿದ ಪತ್ರಿಕೋದ್ಯಮವು ಜವಾಬ್ದಾರಿ
ಯುತ ಮಾಧ್ಯಮವಾಗಿದ್ದು ಸಮಾಜದ ಅಂಕುಡೊಂಕು
ಗಳನ್ನು ತಿದ್ದುವ ಕೆಲಸ ಮಾಡುತ್ತಿದೆ. ABC News India ಕೂಡ ಅದೇ ರೀತಿಯಲ್ಲಿ ಮುಂದುವರೆಯಲಿ. ಉತ್ತಮ ವಾದ ಸುದ್ದಿಗಳನ್ನು ಪ್ರಕಟ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊನ್ನಾಳಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರಾದ ಡಿ.ಎಸ್. ಪ್ರದೀಪ್ ಗೌಡ್ರು ,ಹೊನ್ನಾಳಿ ಕಾಂಗ್ರೆಸ್ ಯುವ ಉಪಾಧ್ಯಕ್ಷರಾದ ಹೆಚ್. ಎಸ್. ರಂಜಿತ್ ,ಅರುಣ್ ಹೆಚ್. ಪಿ ,ಮಲ್ಲೇಶ್ ಬಿ.ಜಿ.ಉಪಸ್ಥಿತಿ ಇದ್ದು ಹಾರೈಸಿದರು.
ಕಾರ್ಯಕ್ರಮದಲ್ಲಿ ABC News India ದ ಸಂಪಾದಕರಾದ ಅರವಿಂದ್. ಎಸ್, ಹಾಗು ಸ್ನೇಹಿತರು ಕುಟುಂಬದವರು,ಹಿತೈಷಿಗಳು ಭಾಗವಹಿಸಿದ್ದರು.
ಅನ್ನದಾನಯ್ಯ ಶಾಸ್ತ್ರಿಗಳ ಮುಂದಾಳತ್ವದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು.