ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರ ಗ್ರಾಮದ ಯುವ ಜನ ವಸತಿಯಲ್ಲಿ ಬೆಳಗುತ್ತಿ ,ಮಲ್ಲಿಗೆನಹಳ್ಳಿ ಮತ್ತು ರಾಮೇಶ್ವರ ಪ್ರತಿಯೊಂದು ಹಳ್ಳಿಗೆ 30ಜನರಂತೆ ಮೂರು ಗ್ರಾಮದ 90ರೈತರಿಗೆ ಸಾವಯವ ಕೃಷಿ ಬಗ್ಗೆ ಒಂದು ದಿನದ ತರಬೇತಿಯನ್ನು ನಡೆಸಿಕೊಡಲಾಯಿತು ಈ ತರಬೇತಿಯ ಕಾರ್ಯಕ್ರಮದ ಉದ್ಗಾಟನೆಯನ್ನು ದಾವಣಗೆರೆ ತರಳುಬಾಳು ಕೃಷಿ ವಿಜ್ಞಾನ I C A R ಕೇಂದ್ರದ ವಿಜ್ಞಾನಿಗಳಾದ ಶ್ರೀ ಮಲ್ಲಿಕಾರ್ಜುನರವರು (BO) ನೆರವೇರಿಸಿ ಕೊಟ್ಟರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಜಿ ಹೆಚ್ ಪರಮೇಶ್ವರಪ್ಪ ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಸುರೇಂದ್ರ ಕುಮಾರ್ , ಗೋವಿಂದ ನಾಯ್ಕ , ಸಾ.ಕೃ ನ್ಯಾಮತಿ ಕೆ ಹರೀಶ್ ಸಂಪನ್ಮೂಲ ಅಧಿಕಾರಿಯಾದ ಪರಮೇಶ್ವರಪ್ಪ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್ ಕೆ ತೀರ್ಥಲಿಂಗಪ್ಪ , ಬೆಳಗುತ್ತಿ ಚಂದ್ರು ಹಾಗೂ ಬೆಳಗುತ್ತಿ, ಮಲ್ಲಿಗೇನಹಳ್ಳಿ ,ರಾಮೇಶ್ವರ ಗ್ರಾಮಗಳ ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸದುಪಯೋಗವನ್ನು ಪಡೆದುಕೊಂಡರು .