ದಾವಣಗೆರೆ:- ಜ 18 ದಾವಣಗೆರೆ ಜಿಲ್ಲೆ ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಹೊನ್ನಾಳಿ ಹಿರೇಕಲಠದಲ್ಲಿ ಶ್ರೀ ಚನ್ನಪ್ಪಸ್ವಾಮಿ ವಿಧ್ಯಾಪೀಠದ ನೌಕರರ ಸಮ್ಮಿಲನ ಕಾರ್ಯಕ್ರಮ ನಡೆಯಿತು,ಶ್ರೀಮಠದ,ಕ್ಷೇತ್ರಾಧಿಪತಿಗಳಾದ ,ಶ್ರೀ ಚನ್ನಪ್ಪಸ್ವಾಮಿ ವಿಧ್ಯಾಪೀಠದ,ಅಧ್ಯಕ್ಷರಾದ ಶ್ರೀ ಷ ಬ್ರ ಒಡೆಯ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಯವರ,ದಿವ್ಯ ಸಾನಿಧ್ಯ ನಡೆದ ಕಾರ್ಯಕ್ರಮದಲ್ಲಿ,ಹಿಂದಿನ ಪೀಠಾಧಿಪತಿಗಳು,ಹಾಗೂ ಈ ಭಾಗದ ನಡೆದಾಡುವ ದೇವರೆಂದೇ ಕೀರ್ತಿಹೊಂದಿದ್ದ,ಶಿವಾಚಾರ್ಯರತ್ನ ಲಿಂ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರ ಪುಣ್ಯಾರಾಧನೆ ನಿಮಿತ್ಯ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮವನ್ನು,ಏರ್ಪಡಿಸಿದ್ದು ಈ ಕಾರ್ಯಕ್ರಮದ ಯಶಸ್ವಿಗೆ,ವಿದ್ಯಾಪೀಠದ ಸಮಸ್ತ ನೌಕರರು ಸ್ವಯಂ ಪ್ರೇರಿತರಾಗಿ,ಭಾಗವಹಿಸುವಂತೆ,ಶಿವಮೊಗ್ಗ ಕೃಷಿ ವಿಶ್ವವಿಧ್ಯಾಲಯದ ಪ್ರಾಧ್ಯಾಪಕ,ಸಾಸ್ವಿಹಳ್ಳಿಯ ಡಾ ಶಶಿಧರ್ ರವರು ತಿಳಿಸುತ್ತಾ,,ಐದೈದು ನೌಕರರಿಗೆ ಒಂದೊಂದು ಸಮಿತಿಯ ಜವಾಬ್ದಾರಿಯನ್ನು ವಹಿಸುವ ಮೂಲಕ, 12ಸಮಿತಿಗಳನ್ನು ರಚಿಸಿದರು,ಭದ್ರಾವತಿ, ಆಕಾಶವಾಣಿ ಕೇಂದ್ರದ ಕೃಷಿವಿಭಾಗದ ,ವಿಶ್ರಾಂತ, ಉದ್ಯೋಗಿ,ವೇದಮೂರ್ತಿಯವರು,ತಮ್ಮಪರಿಚಯ ಮಾಡಿಕೊಳ್ಳುವ ಮೂಲಕ,ರಾಜ್ಯಮಟ್ಟದ ಕಾರ್ಯಕ್ರಮದ ಎಡರು ತೊಡರುಗಳ ಬಗ್ಗೆ ತಿಳಿಸಿ,ಎಲ್ಲರೂ ಸೇರಿ ಮಾಡಿದಲ್ಲಿ,ಕಾರ್ಯಕ್ರಮದಲ್ಲಿ ಸಫಲತೆಯನ್ನು ಹೊಂದಬಹುದು ಎಂದು ಅವರು ತಿಳಿಸಿದರು.ಪಟ್ಟಣ ಪಂಚಾಯ್ತಿ ಸದಸ್ಯ ಸುರೇಶ್ ಹೊಸಕೇರಿಯವರು ಎಲ್ಲರನ್ನು ಸ್ವಾಗತಿಸಿದರು,ಡಾ ನಾ ಕೊಟ್ರೇಶ್ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು

Leave a Reply

Your email address will not be published. Required fields are marked *