ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಮಹಾಯೋಗಿ ಶ್ರೀ ವೇಮನ ಜಯಂತೋತ್ಸವದ ಸಮಿತಿ ವತಿಯಿಂದ ವಾಟರ್ ಟ್ಯಾಂಕ್ ಹತ್ತಿರ J H ಪಟೇಲ್ ಬಡಾವಣೆಯ ದಾವಣಗೆರೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಸ್ಟೆಲ್ ಸಭಾಭವನದಲ್ಲಿ ನಡೆಯಿತು ದಿನಾಂಕ 19/1/2020ರಂದು ಈ ಕಾರ್ಯಕ್ರಮದ ಉದ್ಗಾಟನೆಯನ್ನು ಅಪಾರ ಜಿಲ್ಲಾಧಿಕಾರಿಯಾದ ಶ್ರೀ ವೀರಮಲ್ಲಪ್ಪ ಪುಜಾರ್ ರವರು ಉದ್ಗಾಟಿಸಿದರು
ಇದರ ಅಧ್ಯಕ್ಷತೆಯನ್ನು ಡಾ|| ಕೊಟ್ರೇಶ್ ಬಿದರಿ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷರು ,ಶ್ರೀ ರಾಮ ಕೃಷ್ಣ ರೆಡ್ಡಿ ಕರ್ನಾಟಕ ವೇಮನ ರೆಡ್ಡಿ ಜನ ಸಂಘ ಅಧ್ಯಕ್ಷರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ A .D.Cವರಾದ ರವಿಚಂದ್ರರವರು ಹಾಗೂ ಪ್ರಧಾನ ಕಾರ್ಯದರ್ಶಿ ಶಿವಲಿಂಗಮೂರ್ತಿ ಸಹಕಾರ್ಯದರ್ಶಿ B V ಲೋಹಿತ್ ಮತ್ತು ಸಂಘಟನಾ ಕಾರ್ಯದರ್ಶಿಯವರಾದ ಸತೀಶ್ ಗೌಡ್ರು
ಮುಕ್ತೆನಹಳ್ಳಿ , ಆನೇಕಲ್, ಮರಡಿ,ತ್ಯಾವಣಿಗೆ , ಕಡ್ಲೇಗೊಂಧಿ , ಸುತ್ತಮುತ್ತಲಿನ ರೆಡ್ಡಿ ಬಂದುಗಳು ಈ ಕಾರ್ಯಕ್ರಮಕ್ಕೆ ಬಾಗಿಯಾಗಿ ಯಶಸ್ವಿಗೊಳಿಸಿದರು
ಸುಮಿತಾ ಜಯಪ್ಪ ನವರು ವೇಮನವರ ಜಯಂತಿಯ ಉಪನ್ಯಾಸವನ್ನ ನೀಡಿದರು
ಆಂಧ್ರಪ್ರದೇಶದ ಕಾಟರುಪಲ್ಲಿಯಲ್ಲಿ 1412ರ ಜನವರಿ 19ರಂದು ಜನಿಸಿದ ವೇಮನರವರು ಹುಟ್ಟು ಶ್ರೀಮಂತರಾಗಿದ್ದರು. ವೇಶ್ಯೆಯ ದಾಸನಾಗಿದ್ದ ವೇಮನ, ಅವಳಿಗಾಗಿ ತನ್ನ ಅತ್ತಿಗೆಯಾದ ಹೇಮರಡ್ಡಿ ಮಲ್ಲಮ್ಮಳ ಮೂಗುತಿಯನ್ನು ಕೇಳುತ್ತಾನೆ. ವೇಶ್ಯೆಯು ವಿವಸ್ತ್ರಳಾಗಿ ನಿನ್ನ ಮುಂದೆ ನಾಟ್ಯ ಮಾಡುವಂತೆ ಷರತ್ತು ವಿಧಿಸಿ, ವೇಮನಿಗೆ ಮೂಗುತಿ ಕೊಡುತ್ತಾಳೆ
. ಅದರಂತೆ ವೇಶ್ಯೆಯು ನಗ್ನಳಾಗಿ ಮೂಗುತಿ ಧರಿಸಿದಾಗ ರಕ್ತ, ಮಾಂಸದಿಂದ ಕೂಡಿದ ದೇಹಕ್ಕಾಗಿ ಇಲ್ಲಿಯವರೆಗೂ ಬದುಕಿರುವೆನೇ ಎಂದು ಪಶ್ಚಾತಾಪ ಪಡುತ್ತಾನೆ. ಅಂದಿನಿಂದ ಮೋಹವನ್ನು ತ್ಯಜಿಸಿ ಲೋಕದ ಡೊಂಕುಗಳನ್ನು ತಿದ್ದಲು ಮುಂದಾಗುತ್ತಾರೆ ಎಂದು ಹೇಳಿದರು.
ಇಂಗ್ಲಿಷ್ ಭಾಷೆಗೆ ಮೊಟ್ಟ ಮೊದಲು ತರ್ಜುಮೆಯಾದ ವಚನಗಳೆಂದರೆ ವೇಮನರವರ ವಚನಗಳು. ಅವರು 18 ಸಾವಿರ ವಚನಗಳನ್ನು ರಚಿಸಿದ್ದಾರೆ. ಸಾಮಾನ್ಯ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿರುವುದು ವಿಶೇಷ. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು
ರೆಡ್ಡಿ ಸಮಾಜದವರು ಎಲ್ಲಾ ಸಮುದಾಯಗಳೊಂದಿಗೆ ಬೆರೆಯುವ ಮತ್ತು ತಾವು ಕಷ್ಟದಲ್ಲಿದ್ದರೂ ಇತರರ ಕಷ್ಟಗಳಿಗೆ ನೆರವಾಗುವ ಶಕ್ತಿಯನ್ನು ಹೊಂದಿದ್ದಾರೆ. ಸದಾ ಸಮಾಜದ ಒಳಿತಿಗೆ ಚಿಂತಿಸುವ ರೆಡ್ಡಿ ಸಮಾಜದವರು ಒಂದಾಗಬೇಕು.ಏಕತೆ ಧ್ಯೇಯವಾಗಬೇಕು
ಮಹಾನ್ ಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರ ಉಪದೇಶದಿಂದ ಜೀವನ ಕ್ರಮವನ್ನು ಬದಲಾಯಿಸಿಕೊಂಡ ಮಹಾಯೋಗಿ ವೇಮನರವರು ಸಮಾಜದ ಒಳಿತಿಗಾಗಿ ಕಾಯಕ ಮಾಡಲು ಮುಂದಾದರು. ಸಮಾಜದಲ್ಲಿರುವ ಅನಿಷ್ಠ ಪದ್ಧತಿಗಳನ್ನು ತೊಲಗಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟರು. ಅವರ ವಚನಗಳಲ್ಲಿನ ಸಂದೇಶಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ಈ ಕಾರ್ಯಕ್ರಮವನ್ನ ಮುಕ್ತಯಾಗೊಳಿಸಿದ್ದರು