ಹೊನ್ನಾಳಿ ಪಟ್ಟಣದ ದೇವನಾಯ್ಕನಹಳ್ಳಿ ದರ್ಗಾ ದಿಂದ ಹಿಡಿದು ಸಾವಿರಾರು ಜನಸಂಖ್ಯೆ ಯ ಮುಸಲ್ಮಾನ ಭಾಂದವರು ಸಂವಿಧಾನ ವಿರೋಧಿ ಕೋಮು ಪ್ರಚೋದಿತ ಹೇಳಿಕೆ ನೀಡಿರುವ
ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ದ ಪಾದಯಾತ್ರೆ ಮೂಲಕ ಮುಸಲ್ಮಾನ ಬಾಂದವರು ಪ್ರತಿಬಟನೆ ಮಾಡುತ್ತಾ
ಪಟ್ಟಣದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬಿಜೆಪಿ ನಾಯಕರ ಅಭಿನಂದನಾ ಸಮಾವೇಷದಲ್ಲಿ
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮುಸಲ್ಮಾನ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಪ್ರತಿಬಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಚಿಲೂರು ವಾಜಿದ್ ಮಾತನಾಡಿ
ಶಾಸಕ ರೇಣುಕಾಚಾರ್ಯ RSSಮತ್ತು BJP, ಮುಖಂಡರ ನ್ನು ಓಲೈಕೆ ಮಾಡಿಕೊಂಡು ಮಂತ್ರಿ ಸ್ಥಾನ ವನ್ನು ಗಿಟ್ಟಿಸಿಕೊಳ್ಳಲಿಕ್ಕೆ ಮುಸಲ್ಮಾನ ಬಾಂದವರ ಬಗ್ಗೆ ಸಂವಿಧಾನದ ವಿರೋಧಿ ಹೇಳಿಕೆಯನ್ನು ನೀಡಿರುವುದು ಖಂಡಿಸಿದರು.
ಯವ ಮುಖಂಡ ದರ್ಶನ್ ಬಳ್ಳೇಶ್ವರ್ ಮಾತನಾಡಿ ರಾವ್ ಸಿಕ್ಕಿ ಬಿದ್ದರೆ ಅವನು ಮಾನಸಿಕ ಅಸ್ವಸ್ಥ,
ಮಂಗಳೂರುನಲ್ಲಿ ಬಾಂಬ್ ಪತ್ತೆಯಾಗಿದ್ದಾಗ ಏನೇನೂ ಮಾತನಾಡಿದರು ಬಿ ಜೆ ಪಿ ಮುಖಂಡರುಗಳು. ಈಗ ಬಾಂಬರ್ ಪತ್ತೆಯಾಗುತಿದ್ದಂತೆ ಒಬ್ಬನಾಯಕರ ಮಾತು ಗಳು ಹೊರಡುತ್ತಿಲ್ಲ.
ಖಾನ್ ಎಂಬ ಹೆಸರಿನ ವ್ಯಕ್ತಿ ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರೆ ಉಗ್ರನ ಪಟ್ಟ ಕಟ್ಟುತಿದ್ದರು.
ರಾವ್ ಎಂಬ ಹೆಸರಿನ ವ್ಯಕ್ತಿ ಸಿಕ್ಕಿದ್ದರಿಂದ ಈಗ ಆತನನ್ನು ಮಾನಸಿಕ ಅಶ್ವಸ್ಥ ಎಂದು ಪ್ರತಿಬಿಂಬಿಸುವ ಕೆಲಸ ಬಿಜೆಪಿ ಯವರು ಮಾಡುತಿದ್ದಾರೆ ಎಂದು ಟೀಕಿಸಿದರು
ಮಸೀದಿಯ ಮೌಲ್ಪೀ ಮಹಮದ್ ಇಸ್ಮಾಯಿಲ್ ಮಾತನಾಡಿ,ಇಸ್ಲಾಂ ಎಂದರೆ ಅದು ಶಾಂತಿ ಸಾರುವ ಧರ್ಮ ವಾಗಿದ್ದು, ಮಸೀದಿಗಳಲ್ಲಿ ಭಕ್ತಿ ಮತ್ತು ಪ್ರೀತಿ ಇಟ್ಟಿದ್ದಾರೆಯೇ ಹೊರತು ರೇಣುಕಾಚಾರ್ಯ ಹೇಳುವ ಹಾಗೆ ಮದ್ದು ಗುಂಡುಗಳು ಇಲ್ಲ ಎಂದು ಹೇಳಿದರು.
ತಮ್ಮಣ್ಣ ಮಾತನಾಡಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮುಸ್ಲಿಂ ಸಮಾಜದ ವಿರುದ್ಧ ಹೇಳಿಕೆ ಯಿಂದ ತಾಲೂಕಿನ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ಹೊನ್ನಾಳಿ ಶಾಸಕರಾದ ಎಮ್ ಪಿ ರೇಣುಕಾಚಾರ್ಯ ಅವರ ವಿರುದ್ಧ ಶುಕ್ರವಾರ ಅವರ ಪ್ರತಿ ಕೃತಿಯೂಂದಿಗೆ ಪ್ರತಿಬಟನಾ ಮೆರವಣಿಗೆ ನಡೆಸಲಾಯಿತು. ನಂತರ ಹೊನ್ನಾಳಿ ತಹಸೀಲ್ದಾರ್ ರಾದ ತುಷಾರ್ ಬಿ ಹೊಸುರಾ ರವರಿಗೆ ಮನವಿ ಸಲ್ಲಿಸಿದರು.
Dospಗಳಾದ ಮಂಜುನಾಥ್ ಗಂಗಲ್ ಮತ್ತು ಪ್ರಶಾಂತ್ ಮನೋಳಿ ರವರ ನೇತೃತ್ವದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.