ನಂತರ ಮಾತನಾಡಿದ ಅವರು ಭಾರತದ ಸಂವಿಧಾನ ಬಂದು ಭಾರತ ಗಣರಾಜ್ಯವಾದದ್ದು ಜನವರಿ 26 1950ರಂದು . ಇದರ ಪ್ರಯುಕ್ತ ಈ ದಿನ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ .ಇಂತಹ ಪವಿತ್ರ ಸಂವಿಧಾನವನ್ನು ರಕ್ಷಿಸಿ ಗೌರವಿಸುವುದು ನಮ್ಮ ನಿಮ್ಮೆಲ್ಲರ ಅಧ್ಯ ಕರ್ತವ್ಯವಾಗಿದೆ
ಸಂವಿಧಾನದಿಂದ ಮೂಲಭೂತಹಕ್ಕುಗಳನ್ನು ಪಡೆಯುತ್ತಿರುವ ನಾವುಗಳು ಕೇವಲ ಹಕ್ಕಿಗಾಗಿ ಹೋರಾಡುತ್ತಾ ನಮ್ಮ ಕರ್ತವ್ಯಗಳನ್ನು ಮರೆಯುತ್ತಿದ್ದೇವೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊನ್ನಾಳಿ ತಾಲೂಕಿನ ಶಾಸಕರಾದ ಎಂ ಪಿ ರೇಣುಕಾಚಾರ್ಯರವರು ಮಾತನಾಡಿ ಸ್ವಾಂತ್ರಾಪೂರ್ವ ಅನೇಕ ಮಹನೀಯರ ಹೋರಾಟ ,ತ್ಯಾಗ , ಬಲಿದಾನಗಳನ್ನು ಸದಾ ಸ್ಮರಿಸುತ್ತಾ , ಈ ದೇಶದ ಅಖಂಡತೆ ಹಾಗೂ ಏಕತೆಯ ಭಾವನೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಬಿ .ಇ ರಾಜೀವ್ ರವರು ಸ್ವಾಗತ ಭಾಷಣ ಮಾಡಿದರು
ಶ್ರೀ ದೇವರಾಜ್ ಟಿ ವಿ circle inspetor , E E Oರಾದ ಶ್ರೀ ಎಸ್ .ಎಲ್ ಗಂಗಾಧರ ಮೂರ್ತಿ ,ಶೀ ಎಸ್ ಆರ್ ವೀರಭದ್ರಯ್ಯ ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯಿತಿ ಹೊನ್ನಾಳಿ ಹಾಗೂ

ಜಿಲ್ಲಾ ಪಂಚಾಯತ್ ಸದಸ್ಯರುಗಳು, ತಾಲೂಕು ಪಂಚಾಯತ್ ಸದಸ್ಯರುಗಳು ,ಪಟ್ಟಣ ಪಂಚಾಯತ್ ಸದಸ್ಯರುಗಳು ಮತ್ತು ಪತ್ರಿಕಾ ಮಧ್ಯಮದ ಮಿತ್ರರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *