ದಾವಣಗೆರೆ, ಜ.30
ಸರ್ಕಾರಿ ಶಾಲೆಯ ಮಕ್ಕಳು ಜವಾರಿ ತಳಿಯ ಬೀಜಗಳಿದ್ದಂತೆ, ಅವುಗಳನ್ನು ಸರಿಯಾಗಿ ಬಿತ್ತಿ ಪೋಷಣೆ ಮಾಡಿದರೆ, ಮುಂದಿನ ದಿನಗಳಲ್ಲಿ ಅವುಗಳಿಂದ ಉತ್ತಮ ಫಸಲು ನಿರೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಇವರುಗಳ ಸಹಯೋಗದಲ್ಲಿ ಜನವರಿ 30 ರಂದು ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ, “ಕನಸು ಬಿತ್ತುವ ಕೆಲಸ, ರಾಷ್ಟ್ರ ಕಟ್ಟುವ ಕೆಲಸ” ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮವನ್ನು ಉದ್ಟಾಟಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದುದು ಮತ್ತೊಂದಿಲ್ಲ. ಮಕ್ಕಳು ಜ್ಞಾನಾಭಿವೃದ್ಧಿಗೆ ಅಧಿಕ ಆಸಕ್ತಿ ತೋರುವುದರೊಂದಿಗೆ ಜೀವನದಲ್ಲಿ ಸಾಧನೆ ಮಾಡಬೇಕು. ಮಕ್ಕಳ ಮನಸ್ಸು ಹೃದಯ ಹದ ಮಾಡಿ ಜ್ಞಾನವನ್ನು ಬಿತ್ತುವ ಕೆಲಸವನ್ನು ಶಿಕ್ಷಕರು ಹಾಗೂ ಪೊಷಕರು ಮಾಡಬೇಕು ಎಂದರು.
ನಮ್ಮ ಹುಟ್ಟು ದಾರಿದ್ರ್ಯವಾದರೆ ಸಾವು ಚರಿತ್ರೆಯಾಗಬೇಕು. ಶೈಕ್ಷಣಿಕ ಸೋಲು ಸೋಲಲ್ಲ, ಜೀವನದ ಸೋಲೇ ನಿಜವಾದ ಸೋಲು. ಆದ್ದರಿಂದ ಮಕ್ಕಳು ಶೈಕ್ಷಣಿಕವಾಗಿ ಸೋಲಾದರೆ, ಎದೆಗುಂದದೇ ಕಠಿಣ ಶ್ರಮವಹಿಸಿ ಸಾಧನೆಗೆ ಮುಂದಾಗಬೇಕು ಎಂದರು.
ದಾವಣಗೆರೆ ಉಪವಿಭಾಗದ ಉಪವಿಭಾಗಾಧಿಕಾರಿ ಮಮತಾ ಹೊಸÀಗೌಡರ್ ಮಾತನಾಡುತ್ತಾ, ಮಕ್ಕಳಲ್ಲಿ ಈ ಕಾರ್ಯಕ್ರಮವು ಒಂದು ವಿನೂತನ ವಿಶಿಷ್ಟ ವಿಶೇಷ ಕಾರ್ಯಕ್ರಮವಾಗಿದೆ. ಇಲ್ಲಿ ನಾವುಗಳೆಲ್ಲರೂ ಮಕ್ಕಳಲ್ಲಿ ನಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಮಕ್ಕಳನ್ನು ಜೀವನದ ಗುರಿಸಾಧನೆಗೆ ತಯಾರು ಮಾಡಬೇಕಿದೆ ಎಂದರು.
ಮಕ್ಕಳಲ್ಲಿ ಕನಸು ಗುರಿಗಳು ಇದ್ದರಷ್ಟೆ ಸಾಲದು, ಆ ಕನಸುಗಳನ್ನು ಸಾಕಾರಗೊಳಿಸಲು ನಿರಂತರ ಪ್ರಯತ್ನ ಅಗತ್ಯವೆಂಬುದನ್ನು ಸಹ ಮನವರಿಕೆ ಮಾಡಿಕೊಡಬೇಕಿದೆ. ಮಕ್ಕಳಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಗುಣ, ಕೆಲಸದಲ್ಲಿ ಶ್ರದ್ದೆ, ಸಮಯ ಪಾಲನೆ ಮುಖ್ಯವಾಗಿರಬೇಕು. ನಾವು ಇಂದು ಮಕ್ಕಳಲ್ಲಿ ಕನಸು ಬಿತ್ತುವ ಕೆಲಸ ಮಾಡಿದ್ದೇವೆ. ಶಿಕ್ಷಕರು ಮಕ್ಕಳ ಕನಸುಗಳಿಗೆ ನೀರೆರೆದು ಹೆಮ್ಮರವಾಗಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ಮನುಷ್ಯರಿಗೂ ಉಳಿದ ಪ್ರಾಣಿಗಳಿಗೂ ಇರುವ ವ್ಯತ್ಯಾಸ ಯೋಚನಾಶಕ್ತಿ. ಮನುಷ್ಯರು ನಾಳೆ ನಾವು ಹೇಗಿರಬೇಕು. ಎಲ್ಲಿಗಾದರೂ ಹೋಗಬೇಕೆಂದರೆ ಯಾವ ಸಿದ್ದತೆ ಮಾಡಿಕೊಳ್ಳಬೇಕು ಎಂದು ಆಲೋಚನೆ ಮಾಡುತ್ತೇವೆ. ಆ ಯೋಚನಾಶಕ್ತಿಯನ್ನು ದೇವರು ನಮಗೆ ಮಾತ್ರ ಕೊಟ್ಟಿದ್ದಾನೆ. ಹಾಗಾಗಿ ನೀವು ನಿಮ್ಮ ಭವಿಷ್ಯದ ಬಗ್ಗೆ ಯೋಚಿಸುವುದರೊಂದಿಗೆ ಕನಸು ಕಾಣಬೇಕು. ನೀವು ಕಂಡ ಕನಸುಗಳನ್ನು ನನಸಾಗಿಸಲು ಅವಿರತ ಪ್ರಯತ್ನ ಅಗತ್ಯ ಎಂದರು.
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು ಪೊಷಕರ ಜವಬ್ದಾರಿಯಾಗಿದ್ದು, ಪೋಷಕರ ಸಹಕಾರ ತುಂಬಾ ಅಗತ್ಯವಾಗಿದೆ. ಹಳ್ಳಿಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ ಹೊಲದಲ್ಲಿ ಬಿತ್ತನೆ, ಮತ್ತಿರರ ಕೆಲಸಕ್ಕೆ ಕರೆದುಕೊಂಡು ಹೋಗುವ ಬದಲು ಶಾಲೆಗೆ ಹೋಗಲು ಪೊಷಕರು ಪ್ರೊತ್ಸಾಹಿಸಬೇಕು. ಸರ್ಕಾರದಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನೇಕ ಯೋಜನೆಗಳಿವೆ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಪರಿಶ್ರಮದಿಂದ ಓದಿ ಸಾಧನೆ ಮಾಡಬೇಕೆಂದು ಹೇಳಿದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಮಾತನಾಡಿ, ಇಂದಿನ ಮಕ್ಕಳಲ್ಲಿರುವ ಆಸಕ್ತಿ ಅಭಿರುಚಿಗಳನ್ನು ಶಿಕ್ಷಕರು ಹಾಗೂ ಪೊಷಕರು ಅರಿತು ಪ್ರೋತ್ಸಾಹಿಸುವ ಮೂಲಕ ಮಕ್ಕಳು ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರಮಿಸಬೇಕಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಇತಿಹಾಸ ಅರಿತವರಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದುದನ್ನು ಮಕ್ಕಳು ಅರಿಯಬೇಕು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ತಿಳಿಸಿರುವಂತೆ ನಾನು ಉತ್ತಮನು, ನನ್ನಿಂದ ಈ ಕೆಲಸ ಸಾಧ್ಯ, ದೇವರು ನನ್ನೊಂದಿಗಿದ್ದಾನೆ, ನಾನು ಜಯಶಾಲಿ, ಇಂದಿನ ದಿನ ನನ್ನ ಶುಭದಿನ ಎಂದು ಹೇಳಿರುವ ಈ ಮಾತುಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉನ್ನತ ಮಟ್ಟ ತಲುಪಬೇಕು, ಸಾಧನೆ ಮಾಡಬೇಕೆಂದು ಹೇಳಿದರು.
ಕೈಗಾರಿಕೆ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸಪಾರಿ ಶ್ರೀನಿವಾಸ ಮಾತನಾಡಿ, ಸರ್ಕಾರಿ ನೌಕರಿ ಪಡೆಯುವುದೇ ಜೀವನದ ಗುರಿಯಾಗಿಸಿಕೊಳ್ಳದೇ, ಸಮಾಜದಲ್ಲಿ ವಿವಿಧ ರೀತಿಯ ಉನ್ನತ ಹುದ್ದೆಗಳಿವೆ ಅವುಗಳ ಕುರಿತು ಅರಿತು ಅಭ್ಯಾಸ ಮಾಡಬೇಕು. ನೌಕರಿ ಮಾಡುವುದಷ್ಟೆ ಜೀವನದ ಉದ್ದೇಶವಾಗಿರಿಸದೇ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಉದ್ಯೋಗದಾತರಾಗುವಲ್ಲಿ ಆಲೋಚಿಸಬೇಕು. ಈ ನಿಟ್ಟಿನಲ್ಲಿ ನಿಮ್ಮ ಕಠಿಣ ಪರಿಶ್ರಮ ಅಗತ್ಯವಾಗಿದೆ ಎಂದರು.
ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್ ಮಾತಾನಾಡಿ, ನಿದ್ದೆ ಮಾಡುತ್ತಾ ಕಾಣುವುದು ಕನಸಲ್ಲ, ಕನಸು ಕಂಡರೆ ಆ ಕನಸು ನಿಮ್ಮನ್ನು ಮಲಗಲು ಬಿಡಬಾರದು, ಆ ಕನಸು ಈಡೇರುವವರೆಗೂ ಸತತ ಪ್ರಯತ್ನ ನಿಮ್ಮದಾಗಬೇಕು. ನಾವು ಹುಟ್ಟುತ್ತಾ ಏನನ್ನು ತೆಗೆದುಕೊಂಡು ಬಂದಿಲ್ಲ ಹೋಗ್ತಾನು ಎನನ್ನು ತೆಗೆದುಕೊಂಡು ಹೋಗಲ್ಲ. ನಾವು ಈ ಭೂಮಿಗೆ ಬಂದಿರುವುದೇ ಏನನ್ನಾದರು ಸಾಧನೆ ಮಾಡಿ, ದೇಶಕ್ಕೆ ಅಳಿಲು ಸೇವೆಯನ್ನು ಮಾಡಲಿಕ್ಕೆ. ತುಂಬಾ ಜನ ಮಕ್ಕಳು ಮನೆಯಲ್ಲಿನ ಬಡತನದಿಂದಾಗಿ ಶಾಲೆಯನ್ನು ಅರ್ಧಕ್ಕೆ ಬಿಡುತ್ತಾರೆ ಜೀವನದಲ್ಲಿ ಯಾವುದೇ ರೀತಿಯ ತೊಂದರೆ, ಕಷ್ಟಗಳು ಬಂದರು ಎದೆಗುಂದದೆ ಓದು ಮುಂದುವರೆಸಬೇಕು ಎಂದರು.
ನಗಾರಾಭಿವೃದ್ದಿಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಮಕ್ಕಳೆ ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದರೆ ನೀವು ಏನ್ನಾನಾದರು ಸಾಧಿಸುತ್ತೀರಿ. ಮುಂದೆ ನೀವು ದೊಡ್ಡ ಅಧಿಕಾರಿಯಾಗಬೇಕೆಂದರೆ ಮೊದಲು ನಿಮ್ಮಲ್ಲಿ ನಿಮಗೆ ಆತ್ಮವಿಶ್ವಾಸವಿರಬೇಕು ಮತ್ತು ಇಂದಿನಿಂದಲೆ ಕಷ್ಟಪಟ್ಟು ಓದಿ ನಿಮ್ಮ ಕನಸುನ್ನು ನನಸು ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಿ ಎಂದು ಮಕ್ಕಳಿಗೆ ಹೇಳಿದರು.
ಇದೇ ಸಂದಂರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ

ಮೌನಾಚರಣೆ ಮಾಡಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಜಿ.ಪಂ ಸದಸ್ಯ ಮಂಜುನಾಥ್, ಅಲ್ಪ ಸಂಖ್ಯಾತರ ಇಲಾಖೆಯ ಕಲ್ಯಾಣಾಧಿಕಾರಿ ಗಂಗಪ್ಪ, ಡಿಹೆಚ್‍ಓ ಹೆಚ್.ಎಸ್ ರಾಘವೇಂದ್ರ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್, ಪರಿಶಿಷ್ಟ ವರ್ಗಗಳ ಅಧಿಕಾರಿ ಸುರೇಶ್ ರೆಡ್ಡಿ, ಜಿಲ್ಲಾ ನೋಂದಣಾಧಿಕಾರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಟಿ.ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ತಾವು ಬೆಳೆದು ಬಂದ ಹಾದಿಯನ್ನು ಮತ್ತು ಯಾವ ರೀತಿಯ ಪ್ರಯತ್ನಗಳಿಂದ ಗುರಿ ಸಾಧನೆ ಮಾಡಬಹುದೆಂದು ಮಕ್ಕಳಿಗೆ ತಿಳಿಸಿದರು.

Leave a Reply

Your email address will not be published. Required fields are marked *