ಹೊನ್ನಳಿ ಪಟ್ಟಣದ ಅಭಿವೃದ್ದಿಗಾಗಿ ಸಿದ್ದಪಡಿಸಲಾಗಿರುವ2020-21ನೇ ಸಾಲಿನ ಕರಡು ಆಯ ವ್ಯಯ ಅಂದಾಜು ಪಟ್ಟಿಯ ಸಾರಾಂಶವನ್ನು
ಹೊನ್ನಾಳಿಯ ತಾಲೂಕಿನ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸುರಾರವರು ಬಿಡುಗಡೆ ಮಾಡಿದರು.
ನಂತರ ಅವರು 2020-21ನೇ ಸಾಲಿನ ಕರಡು ಆಯ-ವ್ಯಯ ಅಂದಾಜು ಪಟ್ಟಿಯ ಸಾರಾಂಶವನ್ನು ಈ ಮಹಾ ಸಭೆಯಲ್ಲಿ ಸವಿಸ್ಥಾರವಾಗಿ
ಓದಿದರು. ಈ ಕೆಳಕಂಡಂತೆ ಇವೆ.
ಈ ಬಾರಿಯ ಪಟ್ಟಣ ಪಂಚಾಯ್ತಿ ಆಯ-ವ್ಯಯದಲ್ಲಿ ಪ್ರಮುಕವಾಗಿ ಕಟ್ಟಡದ ಆಸ್ಥಿ ತೆರಿಗೆಯ ಮೂಲಕ ರೂ 68,00,000, ನೀರಿನ ದರಗಳ
ವಸೂಲಾತಿಯಿಂದ ರೂ 24,00,000 ಪಟ್ಟಣ ಪಂಚಾಯಿತಿ ಅಧಿಕಾರಿ ಮತ್ತು ನೌಕರರ ವೇತನಕ್ಕಾಗಿ ಸರ್ಕಾರದಿಂದ ಬರುವ ಅನುದಾನ ರೂ
1,10,00,000 14ನೇ ಹಣಕಾಸು ಯೋಜನೆ ಹಾಗೂ ಸರ್ಕಾರದಂದ ಇತರೆ ಅನುದಾನ ರೂ 95,00,000 ಎಸ್.ಎಫ್,ಸಿ ವಿಶೇಷ ಹಾಗೂ
ಇತರೆ ನಿರ್ದಿಷ್ಟ ಅನುದಾನದಿಂದ ರೂ 2,00,00,000 ಕುಡಿಯುವ ನೀರು ಅಥವಾ ಬರಪರಿಹಾರ ಅನುದಾನದಿಂದ ರೂ 60,00,000 ನೀರು
ಸರಬರಾಜು ಮತ್ತು ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಗಾಗಿ ಎಸ್,ಎಫ್,ಸಿ ವಿದ್ಯುತ್ ಅನುದಾನ ರೂ 2,00,00,000 ಮುಂತಾದವುಗಳ
ಪಟ್ಟಣ ಪಂಚಾಯಿತಿ ಆಯ-ವ್ಯಯದಲ್ಲಿ ಎಲ್ಲಾ ಮೂಲಗಳಿಂದ ಒಟ್ಟು ರೂ 11,07,29000 ಆದಾಯವನ್ನು ನಿರೀಕ್ಷಿಸಲಾಗಿದೆ.
ಈ ರೀತಿಯಾಗಿ ಪಟ್ಟಣ ಪಂಚಾಯಿತಿ ಆಯ-ವ್ಯಯದಲ್ಲಿನ ಎಲ್ಲಾ ಮೂಲಗಳಿಂದ “ಪ್ರಸ್ತುತ ಸಾಲಿನ ಆರಂಭಿಕ ಶುಲ್ಕ” ಸೇರಿ ರೂ 11,40,73,443 ಗಳ ಆದಾಯ ಮತ್ತು ರೂ 11,25,76,500 ಗಳ ವೆಚ್ಚವನ್ನು ಅಳವಡಿಸಿಕೊಂಡು ರೂ 14,96,943ಗಳ ನಿರೀಕ್ಷಿತ
ಉಳಿತಾಯವನ್ನು ಹೊಂದಿರುತ್ತದೆ.
2020-21ನೇ ಸಾಲಿನ ಆಯ-ವ್ಯಯ ಅಂದಾಜು ಪಟ್ಟಿಯನ್ನು ಈ ಮಹಾಸಭೆಯಲ್ಲಿ ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಎಚ್ ಎಮ್ ವೀರಭದ್ರಯ್ಯನವರು,ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಸುರೇಶ್ ಎಮ್,ದರ್ಮಪ್ಪ, ಶ್ರೀಧರ್ ಕೆ ವಿ,ಸುಮಾ ಸತೀಶ್,ರಾಜಪ್ಪ ,ರಂಗಪ್ಪ ,ರಾಜೇಂದ್ರ, ವಿಜೇಂದ್ರ ,ವಿನಯ್ ,ಉಷಾ ಗಿರೀಶ್
ಮೇಲಪ್ಪ,ಸವೀತಾ ಮಹೇಶ್, ಮುಂತಾದವರು ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು