ಹೊನ್ನಾಳಿ ಕ್ಷೇತ್ರದ ಶಾಸಕ ಬಹಿರಂಗ ಸಭೆಯೊಂದರಲ್ಲಿ ಮುಸ್ಲಿಂರ ವಿರುದ್ದ ಹಿಂದುಗಳನ್ನು ಎತ್ತಿಕಟ್ಟುವ ರೀತಿಯಲ್ಲಿ ಪ್ರಚೋದನಾಕಾರಿ ಹೇಳಿಕೆಯನ್ನು ಕೊಟ್ಟಿರುತ್ತಾರೆ.ಮುಸಲ್ಮಾನರ ಮಸೀದಿಗಳಲ್ಲಿ, ಮದ್ದು
ಗುಂಡುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ಈ ಮೂಲಕ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಯಾವುದೇ ಆಧಾರವಿಲ್ಲದೆ ಬಹಿರಂಗವಾಗಿ ಈ ರೀತಿ ಅವಹೇಳನಕಾರಿ ಹೇಳಿಕೆಯನ್ನು ನೀಡಿ ಗಲಬೆಯನ್ನು ಸೃಷ್ಟಿ ಮಾಡಿರುತ್ತಾರೆ.
ಇಂದು ಅವರ ವಿರುದ್ದ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು,ಜಿಲ್ಲಾಧ್ಯಕ್ಷರಾದ ಹೆಚ್ ಬಿ ಮಂಜಪ್ಪ ಇವರುಗಳ ನೇತೃತ್ವದಲ್ಲಿ ಟಿ ಬಿ ಸರ್ಕಲ್ ನಿಂದ ಪಾದಯಾತ್ರೆ ಮೂಲಕ ತಾಲೂಕ್ ಕಛೇರಿಯವರೆಗೆ
ಎಲ್ಲಾ ಕಾಂಗ್ರೆಸ್ ಮುಖಂಡರುಗಳು ಹಾಗೂ ಎಲ್ಲಾ ಕಾಂಗ್ರೆಸ್ ಕಾರ್ಯಕತೃಗಳ ಜೊತೆಗೆ ಸೇರಿ ಬೃಹತ್
ಪ್ರತಿಭಟನೆ ಜರುಗಿತು.
ನಂತರ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಮಾತನಾಡಿ ಮುಸಲ್ಮಾನರು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುತ್ತಾರೆಯೇ ಒರತು ಮದ್ದು ಗುಂಡುಗಳನಲ್ಲ ಎಂದು ಹೇಳಿದರು. ಮುಸಲ್ಮಾನರು ಈ ದೇಶದಲ್ಲಿ
ಹಿಂದೂಗಳ ಜೊತೆಗೆ ಅಣ್ಣ ತಮ್ಮಂದಿರ ರೀತಿಯಲ್ಲಿ ಜೀವನವನ್ನು ಸಾಗಿಸುತಿದ್ದಾರೆ.ಅಂತಹ ಬಾಂದವ್ಯವನ್ನು
ಪ್ರಚೋದನಕಾರಿ ಹೇಳಿಕೆಯನ್ನು ನೀಡುವುದರ ಮೂಲಕ ಹಾಳು ಮಾಡುತಿದ್ದಾರೆ ಎಂದು ಹೇಳಿದರು. ನಂತರ ಮಾತಾನಾಡಿ ಮುಗ್ದ ಹಿಂದೂ ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸುವಂತಹ ಹುನ್ನಾರವನ್ನು ಕೂಡಲೇ ಕೈ ಬಿಡಬೇಕು ಹಾಗೂ ಶಾಸಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ
ಪಿರ್ಯಾದನ್ನು ಕೊಟ್ಟು ಅವರ ಮೇಲೆ ಐ.ಪಿ.ಸಿ ಸೆಕ್ಷೆನಸ 153ರಡಿಯಲ್ಲಿ ಈಗಾಗಲೇ ಎಪ್.ಐ.ಆರ್ ದಾಖಲು ಆಗಿದ್ದು. ಆದರೂ ಇದಾವುದನ್ನು ಲೆಕ್ಕಿಸದ ಶಾಸಕ ರೇಣುಕಾಚಾರ್ಯರು ಮುಂದುವರೆಸಿ ಮುಸ್ಲಿಂರನ್ನು ಎಲ್ಲಿ ಇಡಬೇಕೊ ಅಲ್ಲಿ ಇಡುತ್ತೇನೆ. ಮುಸ್ಲಿಂರಿಗೆ ಬಂದ ಸರ್ಕಾರದ ಅನುದಾನವನ್ನು ಬೇರೆಕಡಗೆ ವರ್ಗಾಯಿಸಿ ಕಾಮಗಾರಿಗಳನ್ನು ಮಾಡಿಸುತ್ತೇನೆ ಎಂದು ನೀವು ಏನು ಮಾಡಿಕೊಳ್ಳುತ್ತಿರಿ ಮಾಡಿಕೊಳ್ಳಿ ಎಂದು ನಿಮ್ಮ ಮತಗಳು ನಮಗೆ ಅವಶ್ಯಕತೆ ಇಲ್ಲಾ ಎಂದು ಬಹಿರಂಗವಾಗಿ ಹೇಳಿಕೆಯನ್ನು ನೀಡಿರುತ್ತಾರೆ.
ಇವರು ಶಾಸಕರಾಗಿ ಆಯ್ಕೆಯಾದ ನಂತರ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಜಾತಿ, ಮತ, ದ್ವೇಷ, ರಾಗ ,ಭೇದ ಭಾವವಿಲ್ಲದೆ ಎಲ್ಲಾ ಜಾತಿವರ್ಗದ ಜನಗಳಿಗೆ ನ್ಯಾಯವನ್ನು ನೀಡುತ್ತೇನೆ ಎಂದು
ಸಂವಿದಾನದ ಮೇಲೆ ಹಾಗೂ ವಿಧಿವತ್ತಾಗಿ ಸಭಾಧ್ಯಕ್ಷರ ಸಮ್ಮುಖದಲ್ಲಿ ದೇವರ ಮೇಲೆ ಪ್ರಮಾಣ ಮಾಡಿ
ಸಂವಿದಾನಕ್ಕೆ ಯಾವುದೇ ಲೋಪದೋಷಗಳು ಬಾರದಂತೆ ಎತ್ತಿ ಹಿಡಿಯುತ್ತೇನೆ ಎಂದು ಪ್ರಮಾಣ ಮಾಡಿರುತ್ತಾರೆ.
ಆದರೆ ಅದಕ್ಕೆ ತದ್ವಿರುದ್ದವಾಗಿ ರಾಜ್ಯದಲ್ಲಿ ಮತ್ತು ತಾಲೂಕಿನಲ್ಲಿ ಹಿಂದೂ ಮತ್ತು ಮುಸಲ್ಮಾನರ ಬಾಂದವ್ಯವನ್ನು ಹಾಳು ಮಾಡುವ ರೀತಿಯಲ್ಲಿ ಹೇಳಿಕೆಯನ್ನು ಕೊಟ್ಟು ಒಂದು ರೀತಿ ಶಾಂತಿಯನ್ನು ಕದಡಿ ಅಶಾಂತಿಯನ್ನು ಸೃಷ್ಟಿ ಮಾಡಿರುತ್ತಾರೆ. ಇವರ ಹೇಳಿಕೆಗಳು ಇದೆ ರೀತಿ ಮುಂದುವರೆದರೆ ರಾಜ್ಯದಲ್ಲಿ ಹಾಗೂ ತಾಲೂಕಿನಲ್ಲಿ ಯಾವುದೇ ಸಂದರ್ಭದಲ್ಲಿಯು ಕೂಡಾ ಗಲಬೆ ಗಲಾಟೆಗಳು ನಡೆಯಬಹುದು.ಆದ್ದರಿಂದ ಇಂತಹ ಸಂವಿದಾನ
ಜನ ವಿರೋಧಿ ಹಾಗೂ ರಾಜಕೀಯ ಪ್ರೇರಿತ ಹೇಳಿಕೆಯನ್ನು ನೀಡಿರತಕ್ಕಂತಹ ಶಾಸಕ ಎಮ್ ಪಿ ರೇಣುಕಾಚಾರ್ಯರನ್ನು ಕೂಡಲೇ ಬಂಧಿಸಿ ಇವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಹಾಗೂ ಇವರ ಶಾಸಕತ್ವವನ್ನು ರದ್ದುಗೊಳಿಸಿ ರಾಜ್ಯ ಮತ್ತು ತಾಲೂಕಿನ ಜನಗಳಿಗೆ ನೆಮ್ಮದಿ ಮತ್ತು,ಶಾಂತಿಯಿಂದ,ಸಹಬಾಳ್ವೆ ನಡೆಸಲು ತಾವುಗಳು ಅವಕಾಶ ಮಾಡಿಕೊಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳವರಿಗೆ ಸೂಚನೆಯನ್ನು ನೀಡಬೇಕು ಹಾಗೂ ಕೂಡಲೇ ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ
ಜನರ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಹೊನ್ನಾಳಿ ತಾಲೂಕಿನ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸುರಾರವರಿಗೆ ರಾಜ್ಯಪಲರಿಗೆ ಕಳಿಸುವಂತೆ ಜಿಲ್ಲಾ ಕಾಂಗ್ರೆಸ್ ಮತ್ತು ಹೊನ್ನಾಳಿ ತಾಲೂಕ್ ಕಾಂಗ್ರೆಸ್ ವತಿಯಿಂದ ಮನವಿ ಮಾಡಿಕೊಳ್ಳಲಾಯಿತು.
ಈ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ
ಡಿ ಜಿ ಶಾಂತನಗೌಡ್ರು ಮಾಜಿ ಶಾಸಕರು, ಹೆಚ್ ಬಿ ಮಂಜಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಹಾಗೂ ಹೊನ್ನಾಳಿ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಗದ್ದಿಗೇಶಣ್ಣ, ಸಣಕ್ಕಿ ಬಸವನಗೌಡ, ಡಾ// ಈಶ್ವರ್ ನಾಯ್ಕ್ , ಹೆಚ್ ಎ ಉಮಾಪತಿ , ಹೆಚ್ ಬಿ ಶಿವಯೋಗಿ, ಎಂ ರಮೇಶ್ ,ಬಿ ಸಿದ್ದಪ್ಪ, ಕಿರಣ್‍ಬಾರ್ ಸಿದ್ದಪ್ಪ, ಆಪ್ತಾಪ್ ಸಾಬ್, ಅಬಿದ್ ಹಾಲಿ ಖಾನ್, ಚೀಲೂರು ವಾಜಿದ್, ಮುಂತಾದವರು ಬಾಗಿಯಾಗಿ ಈ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.