ಬೀದರ, ಫೆಬ್ರವರಿ 09 :-ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು “ರೈತರ ಸ್ವಾವಲಂಬಿ ಬದುಕು ಮತ್ತು ಅಭ್ಯುದಯಕ್ಕಾಗಿ ಪಶು ಸಂಗೋಪನೆ” ಎನ್ನುವ ಮಹತ್ತರ ಸಂದೇಶವನ್ನು ಅಕ್ಷರಶಃ ಜನಮನ ತಲುಪಿಸಿತು. ಮೂರೂ ದಿನಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೀದರ್‌ನ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಅಂಗಳವೇ ಇದಕ್ಕೆ ಸಾಕ್ಷಿಯಾಯಿತು.
ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡುವ ಮೂಲಕ ಬೀದರ್ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.7ರಿಂದ ಆರಂಭಗೊAಡಿದ್ದ ರಾಜ್ಯಮಟ್ಟದ ಮೂರನೇ ಮತ್ತು ಕಲ್ಯಾಣ ಕರ್ನಾಟಕ ಭಾಗದ ಪಶು ಮೇಳವು ಫೆ.9ರವರೆಗೆ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆದು, ಪೂರ್ಣಗೊಂಡು ಇತಿಹಾಸದ ಪುಟ ಸೇರಿತು.
ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ನೀಡಿದ ನಿರ್ದೇಶನಂತೆ ಪಶುಮೇಳವು ಅಚ್ಚುಕಟ್ಟಾಗಿ ನಡೆಯಿತು. ಜಾನುವಾರು ಸಾಕಾಣಿಕೆ, ನಿರ್ವಹಣೆ ಕುರಿತು ಮಾಹಿತಿ, ಹೈನುಗಾರಿಕೆ, ಕುಕ್ಕುಟ ಸಾಕಾಣಿಕೆ, ಜಾನುವಾರ ಆರೋಗ್ಯಕ್ಕೆ ಸಂಬAಧಿಸಿದAತೆ ಔಷಧಿ, ಲಸಿಕೆ ಮತ್ತು ರೋಗ ಪತ್ತೆ ಸಾಧನೆಗಳ ಮಾಹಿತಿ, ಮತ್ಸö್ಯ ಪ್ರದರ್ಶನ, ಫಲ ಪುಷ್ಪ ಪ್ರದರ್ಶನ, ಪ್ರಗತಿಪರ ರೈತರಿಂದ ಚರ್ಚೆ, ಕರ್ನಾಟಕದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸತತ ಮೂರು ದಿನಗಳ ಕಾಲ ನಡೆದವು. ಹೈನುರಾಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ, ಶ್ವಾನ ಪ್ರದರ್ಶನ ಕಾರ್ಯಕ್ರಮಗಳು ಕೂಡ ಪಶುಮೇಳದ ವಿಶೇಷ ಆಕರ್ಷಣೆಯಾಗಿದ್ದವು.


ದೂರದೂರ ಊರುಗಳು: ಕಾರ್ಯಕ್ರಮದಲ್ಲಿ ನಾನಾ ತಳಿಯ ಜಾನುವಾರುಗಳು ರಾಜ್ಯದ ದೂರ ದೂರದ 30 ಜಿಲ್ಲೆಗಳಿಂದ ಆಗಮಿಸಿದ್ದವು. ಜೊತೆಗೆ ಪ್ರಗತಿಪರ ರೈತರು ಕೂಡ ಆಗಮಿಸಿದ್ದರು. ಅಲ್ಲದೇ 30 ಜಿಲ್ಲೆಗಳ ಪಶುವೈದ್ಯಾಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಜಾನುವಾರು ಮಾಹಿತಿಯ ಆಗರ: ಫೆ.7ರಿಂದ ಆರಂಭಗೊAಡಿದ್ದ ಪ್ರಾಣಿಗಳ ಮತ್ತು ವಾಣಿಜ್ಯ ಸ್ಟಾಲಗಳು ಕೂಡ ಪಶುಮೇಳದ ವಿಶೇಷ ಆಕರ್ಷಣೆಯಾಗಿದ್ದವು. ಗೀರ್, ಹಳ್ಳಿಕಾರ್, ಜಾಪ್ರಾಬಾದಿ, ಬಿದ್ರಿ, ಕಿಲಾರಿ, ದೇವಣಿ, ಡ್ಯೂರಾಕ್ ಸೇರಿದಂತೆ ಹತ್ತು ಹಲವು ತಳಿಯ ಆಕಳು, ಎತ್ತುಗಳು, ಮೇಕೆಗಳು, ಹಂದಿಗಳನ್ನು ಜನರು ಬೆರಗುಗಣ್ಣಿನಿಂದ ನೋಡುತ್ತಿದ್ದುದು ಸಾಮಾನ್ಯವಾಗಿತ್ತು. ಆಯಾ ತಳಿಯ ಸಂಕ್ಷಿಪ್ತ ಮಾಹಿತಿ ಮತ್ತು ಕರಪತ್ರಗಳಿಂದ ಜನತೆಗೆ ಜಾನುವಾರುಗಳ ಬಗ್ಗೆ ತಿಳಿಯಲು ಸಹಕಾರಿಯಾಯಿತು.
ಹರಿದು ಬಂದ ಜನಸಾಗರ: ಫೆ.7ರಿಂದ ಫೆ.9ರವರೆಗೆ ನಡೆದ ಪಶುಮೇಳಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ರೈತರು ಮತ್ತು ಬೀದರ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತು.
ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು: ನಾಟ್ಯಶ್ರೀ ನೃತ್ಯಾಲಯದಿಂದ ಭರತನಾಟ್ಯ, ಗಂಗಾವತಿ ಪ್ರಾಣೇಶ ತಂಡದಿAದ ಹಾಸ್ಯಸಂಜೆ, ಸವಿಗಾನ ಸಂಗೀತ ತಂಡದಿAದ ಸುಗಮ ಸಂಗೀತ, ಕೋಗಳಿ ಕೊಟ್ರೇಶ ಅವರಿಂದ ಹಾಸ್ಯ ಕಾರ್ಯಕ್ರಮ, ಪ್ರಹ್ಲಾದ್ ಆಚಾರ್ ಅವರಿಂದ ನೆರಳು ಬೆಳಕು, ಡಾ.ಪದ್ಮಾನಂದ ಮತ್ತು ತಂಡದಿAದ ಸುಗಮ ಸಂಗೀತ ಕಾರ್ಯಕ್ರಮಗಳು ಪಶುಮೇಳಕ್ಕೆ ನೆರದಿದ್ದ ಸಾರ್ವಜನಿಕರ ಮನಸೂರೆಗೊಂಡವು.
117 ಮಳಿಗೆಗಳಲ್ಲಿ ಕಿಕ್ಕಿರಿದು ಜನ: ಕೃಷಿ, ತೋಟಗಾರಿಕೆ, ಜವಳಿ, ಕೈಗಾರಿಕಾ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳಿಂದ ಹಾಕಲಾಗಿದ್ದ ವಿವಿಧ ಬಗೆಯ ಮಳಿಗೆಯಲ್ಲಿ ಜನರು ಮೂರು ದಿನಗಳ ಕಾಲ ಕಿಕ್ಕಿರಿದು ಸೇರಿ ಹಲವಾರು ಮಾಹಿತಿ ಪಡೆದರು. ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಎಲ್ಲೆಡೆ ಸೆಲ್ಫೀ ಸೆಲ್ಫಿ..: ರಾಯಚೂರು ಜಿಲ್ಲೆಯ ಮರ‍್ರಾ, ಆಂಧ್ರಪ್ರದೇಶದ ಒಂಗೋಲ್ ತಳಿಯ ಎತ್ತು, ಮಹಾರಾಷ್ಟçದ ಕಿಲಾರಿ ಎತ್ತು, ದಕ್ಷಿಣ ಭಾರತದ ಹಳ್ಳಿಕಾರ್, ಹೈದ್ರಾಬಾದ್‌ನ ಗೀರ್, ಬಗದಲ್ ಗ್ರಾಮದ ಜಾಪ್ರಭಾದಿ ಕೋಣಗಳ ಕೂಡ ಪಶುಮೇಳದ ವಿಶೇಷ ಆಕರ್ಷಣೆಯಾಗಿದ್ದವು. ಇವುಗಳನ್ನು ವೀಕ್ಷಿಸುತ್ತಿದ್ದ ಜನರು ಆ ಜಾನುವಾರುಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು.
ಉಪಹಾರ, ಚಹಾದ ಅಂಗಡಿಗಳು: ಪಶುಮೇಳಕ್ಕೆ ಆಗಮಿಸುವ ಜನತೆಗೆ ಅನುಕೂಲವಾಗಲೆಂದು ಅಲ್ಲಲ್ಲಿ ಉಪಹಾರ, ಜ್ಯೂಸ್ ಮತ್ತಿ ಇನ್ನೀತರ ಅಂಗಡಿಗಳನ್ನು ಕೂಡ ಹಾಕಲಾಗಿತ್ತು. ಕೆಎಂಎಫ್ ನವರು ಪಶುಮೇಳದಲ್ಲಿ ಸಾರ್ವಜನಿಕರಿಗೆ 10 ಸಾವಿರ ಪೇಡೆ, ಮಜ್ಜಿಗೆ ಪೂರೈಸಿದರು.
ಅಧಿಕಾರಿಗಳು ಸಿಬ್ಬಂದಿಗೆ ಸನ್ಮಾನ: ಕಾರ್ಯಕ್ರಮದ ಯಶಸ್ಸಿಗೆ ಸತತ ಪರಿಶ್ರಮ ವಹಿಸಿದ, ಅವಿರತ ದುಡಿದ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಗೋವಿಂದ್ ಬಿ.ಹೆಚ್. ಹಾಗು ಬೀದರ ಜಿಲ್ಲೆಯ ಎಲ್ಲ ಪಶು ವೈದ್ಯಾಧಿಕಾರಿಗಳಿಗಳು, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸನ್ಮಾನಿಸಲಾಯಿತು.
ಮೂರು ದಿನಗಳ ಕಾಲ ವೇದಿಕೆಯ ಕಾರ್ಯಕ್ರಮವನ್ನು ಬಸವರಾಜ ಬೆಣ್ಣೆ, ಶೈಲಜಾ ಆರ್.ಕೆ. ಗೋಕಾಕ, ಲಾವಣ್ಯ ಭಟ್ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.

Leave a Reply

Your email address will not be published. Required fields are marked *