ಹೊನ್ನಾಳಿ ತಾಲೂಕಿನ ಆರೋಗ್ಯ ಅಧಿಕಾರಿಯಾದ ಕೆಂಚಪ್ಪ ಬಂತಿಯವರು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದಂದು ಹೊನ್ನಾಳಿ ಪಟ್ಟಣದಲ್ಲಿ ಇರುವ ಭಾರತೀಯ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಗೆ ಜಂತು ಹುಳುಗಳ ಮಾತ್ರೆಯನ್ನು ಆಲ್ ಬೆಂಡೋಸರ್ ಹಾಕುವುದರ ಮೂಲಕ ಚಾಲನೆಯನ್ನು ಕೊಟ್ಟರು.
ನಂತರ ಮಾತನಾಡಿದ ಅವರು ಪ್ರತಿ ಆರು ತಿಂಗಳಿಗೊಮ್ಮೆಜಂತು ಹುಳು ಮಾತ್ರೆಯನ್ನು ಹಾಕಿದರೆ ಅಪೌಷ್ಟಿಕತೆಯನ್ನ ದೂರ ಇಡುವುದಕ್ಕೆ ಸಹಾಯ ಮಾಡುತ್ತದೆ ಹಾಗೂ ರಕ್ತ ಹಿನತೆ ಅಜೀರ್ಣ ತೆಯನ್ನು ಹೊಗಲಾಡಿಸುತ್ತದೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದ ಇಡಬೇಕು ಬಯಲು ಶೌಚಾಲಯವನ್ನು ನಿಲ್ಲಿಸಬೇಕು ಮುಂತಾದ ವಿಷಯಗಳನ್ನು ತಿಳಿಸುವುದರ ಮೂಲಕ ಮಕ್ಕಳಿಗೆ ಜಾಗೃತಿಯನ್ನು ಮೂಡಿಸಿದರು.
ಇವರುಗಳ ಜೊತೆಗೆ ತಾಲೂಕು ಆರೋಗ್ಯ ಅಧಿಕಾರಿಗಳಾದ ಕೆಂಚಪ್ಪ ಬಂತಿಯವರು,ಇ ಸಿ ಒ ಸಿದ್ದಪ್ಪ ,ಶಾಲೆಯ ಮುಖ್ಯೋಪಾಧ್ಯಾಯ ರಾದ ದೇವಿರಮ್ಮ, ಶಿಕ್ಷಕರಾದ ತಿಮೇಶ್ , ತಿಪ್ಪೇಸ್ವಾಮಿ ,ಶಿಕ್ಷಕರಾದ ಗಿರೀಶ್ ರವರು ಮುಂತಾದವರು ಭಾಗಿಯಾಗಿಈ ಕಾರ್ಯಕ್ರಮವನ್ನು ಯಶಸ್ವಗೊಳ್ಳಿಸಿದರು