ಶಿವಮೊಗ್ಗ, ಫೆಬ್ರವರಿ 15 ಆರ್ಯವೈಶ್ಯ ಜನಾಂಗದವರಿಗೆ ಈ ಹಿಂದೆ ಜಾತಿ ಪ್ರಮಾಣ ಪತ್ರವನ್ನು 18 ವರ್ಷ ಒಳಪಟ್ಟವರಿಗೆ ವಿದ್ಯಾಭ್ಯಾಸದ ಸಲುವಾಗಿ ಮಾತ್ರ ನೀಡಲಾಗುತ್ತಿದ್ದು, ಇನ್ನುಮುಂದೆ ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ತರಬೇತಿ ಪಡೆಯಲು ಸಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರ “ನಮೂನೆ-ಜಿ”ಪಡೆಯುವಂತೆ ರಾಜ್ಯ ಸರ್ಕಾರವು ಆದೇಶಿಸಿದೆ.
ನಮೂನೆ-ಜಿಯನ್ನು ಪಡೆಯಲು ನಾಡಕಚೇರಿ ಕೇಂದ್ರ, ಬೆಂಗಳೂರು-ಒನ್, ಕರ್ನಾಟಕ-ಒನ್ ಹಾಗೂ ನಾಡ ಕಚೇರಿ ಅಂತರ್ಜಾಲ ತಿತಿತಿ.ಟಿಚಿಜಚಿಞಚಿಛಿheಡಿi.ಞಚಿಡಿಟಿಚಿಣಚಿಞಚಿ.gov.iಟಿ ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಸಹಾಯವಾಣಿ 9448451111, ಮಿಂಚಂಚೆ suಠಿಠಿoಡಿಣ.ಞಚಿಛಿಜಛಿ@ಞಚಿಡಿಟಿಚಿಣಚಿಞಚಿ.gov.iಟಿ, ನಾಡಕಚೇರಿ ಸಹಾಯವಾಣಿ 18005990044 (ಟೋಲ್‍ಫ್ರೀ) ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, “ಅಶ್ವಿನ್ ನಿವಾಸ”, ಐ ಬ್ಲಾಕ್, 2ನೇ ಪ್ಯಾರಲಲ್ ರಸ್ತೆ, ಗಾಂಧಿನಗರ, ಶಿವಮೊಗ್ಗ, ದೂ.ಸಂ.: 08182-229634 ಗಳನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾನ್ಸ್‍ಟೇಬಲ್ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ
ಶಿವಮೊಗ್ಗ, ಫೆಬ್ರವರಿ 15 : ಜಿಲ್ಲೆಯಲ್ಲಿ ಖಾಲಿ ಇರುವ 46 ಪುರುಷ ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್ ಮತ್ತು 09 ಮಹಿಳಾ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿಯ ಎರಡನೇಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಪೊಲೀಸ್ ಕಚೇರಿಯ ಸೂಚನಾ ಫಲಕದಲ್ಲಿ ಫೆ.12ರಂದು ಪ್ರಕಟಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *