ದಾವಣಗೆರೆ ಜಿಲ್ಲೆ
ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದ ರುದ್ರಮ್ಮ ಎಂಬ ಜಮೀನಿನಲ್ಲಿ ಶನಿವಾರದಂದು ತಾಲೂಕಿನ ಬಡ ರೈತರ ಮೆಕ್ಕೆಜೋಳದ ರಾಶಿಗೆ ಬೆಂಕಿಬಿದ್ದು ಸುಮಾರು ಒಂದು ಲಕ್ಷದ ಐವತ್ತು ಸಾವಿರ ರೂಗಳಿಗಿಂತ ಹೆಚ್ಚಿನ ಹಾನಿಯಾಗಿದ್ದ ಮಾಧ್ಯಮದ ಮೂಲಕ ವಿಷಯ ತಿಳಿದ ಕಿಸಾನ್ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಶ್ರೀ ಶಿವಗಂಗಾ ಬಸವರಾಜ್ ರೈತರನ್ನು ಭೇಟಿಮಾಡಿ ಸಾಂತ್ವಾನ ಹೇಳಿ ವೈಯಕ್ತಿಕವಾಗಿ ತಲಾ ಒಬ್ಬ ರೈತರಿಗೆ ಐದು ಸಾವಿರ ರೂಗಳನ್ನು ನೀಡಿದರು ಹಾಗೂ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ಕೊಡಿಸುವ ಜವಾಬ್ಧಾರಿಯನ್ನು ವಹಿಸಿಕೊಂಡರು , ಇವರುಗಳ ಜೊತೆಗೆ ಕೆಪಿ ವೆಂಕಟೇಶ್ , ಶಂಕ್ರಪ್ಪ ಹಾದಿಮನೆ , ಶರತ್ , ಶಂಕರಪ್ಪ , ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.