ಕುರಕುಂದ ಗ್ರಾಮದಲ್ಲಿ ಶ್ರೀ ಬಸವ ಚಾರಿಟ್ರಬಲ್ ಟ್ರಸ್ಟ್ ಮತ್ತು ಬಸವ ಕೇಂದ್ರ ಸಿಂದನೂರು
ವತಿಯಿಂದ ಹಮ್ಮಿಕೊಂಡಿದ್ದ ಕುರಕುಂದ ಗ್ರಾಮದ ಪೋಲಿಸ್ ಪಟೇಲ್ ಪರಿವಾರದವರ ಕಲ್ಯಾಣೋತ್ಸವ
ಆದಿಶರಣ ನಾಯಕ ನನ್ನಯ್ಯ ವೇದಿಕೆ 12ನೇ ಶತಮಾನದಲ್ಲಿ ಶ್ರೀ ಶರಣ ಬಸವಣ್ಣನವರು ಹಮ್ಮಿಕೊಂಡಿದ ಕಲ್ಯಾಣ ಕಾರ್ಯಕ್ರಮದ
ಕನಸನ್ನು ಈಗ ಅಂದರೆ 21ನೇ ಶತಮಾನದಲ್ಲಿ ದಿನಾಂಕ 14/02/2020ರಂದು ಕುರಕುಂದ ಗ್ರಾಮದಲ್ಲಿ ಎರಡು ಜೋಡಿಗಳ ಕಲ್ಯಾಣೋತ್ಸವ ಮಾಡಲಾಯಿತು.
ಕಲ್ಯಾಣೋತ್ಸವದ ಉದ್ದೇಶ ವೈದಿಕ ಪರಂಪರೆಯ ಬಾಳೆಹಣ್ಣು, ಕಾಯಿ,ಅಕ್ಕಿ,ಅರಿಶಿಣ,ಕುಂಕುಮ, ಮುಂತಾದ ಪೂಜಾ ಸಾಮಾಗ್ರಿಗಳನ್ನು ದಿಕ್ಕರಿಸಿ ವಿಭೂತಿ ಧರಿಸಿ,ರುದ್ರಾಕ್ಷಿ ಕಂಕಣವನ್ನು ಕೈಗೆ ಕಟ್ಟಿ ,ಲಿಂಗಧಾರಣೆ ಮಾಡುವುದರ ಜೊತೆಗೆ ಬಾಸಿಂಗದ ಬದಲಾಗಿ ಗಂಡಿಗೆ ಬಸವಣ್ಣನವರ ಕಿರೀಟ,ಹೆಣ್ಣಿಗೆ ನೀಲಾಂಬಿಕೆಯ ಕಿರೀಟ ಹಾಕುವುದರ ಮುಖಾಂತರ
ನಾಗನಗೌಡ ಪೋಲಿಸ್ ಪಟೇಲ್/ಅಷ್ಟವರಣೆ ಸಂಪನ್ನೆ ರಾಜೇಶ್ವರಿ ಹಾಗೂ
ಡಾ// ಶರಣ ಬಸವ ಪೋಲಿಸ್ ಪಟೇಲ್/ ಅಷ್ಟವರಣೆ ಸಂಪನ್ನೆ ಮಧುರ ಇವರುಗಳಿಗೆ ಪುಷ್ಪಾರ್ಚನೆ ಹಾಕುವುದರ ಮೂಲಕ ಕಲ್ಯಾಣೋತ್ಸವ ಕಾರ್ಯಕ್ರಮವು ನವಲಿಂಗ ಶರಣರು ಸಂತೇ ಕಡೂರು ಶಿವಮೊಗ್ಗ ಇವರ ಅಧ್ಯಕ್ಷತೆಯಲ್ಲಿ ನೇರೆವೇರಿತು.
ತಾಳಿಕಟ್ಟುವ ಉದ್ದೇಶ;-
ಗಂಡು ಹೆಣ್ಣಿಗೆ ತಾಳಿಕಟ್ಟುವುದರ ಉದ್ದೇಶ ಹೆಣ್ಣು ಮತ್ತು ಗಂಡು ಸಮಾಜದಲ್ಲಿ ಎರಡು ದೇಹಗಳ ಸಂಬಂದಗಳಾಗದೆ ಎರಡು ಮನಸುಗಳ ಸಂಬಂದಗಳ ಬೇಸುಗೆವಾಗಬೇಕು ಎಂದು ಹೂವಿನ ಮಾಲೆಯನ್ನು ಹಾಕಿ ಸಮಾಜದಲ್ಲಿ ಸಮಾನತೆಯ ಸಂಖೇತವಾಗಿರುವ ಹೆಣ್ಣಿಗೆ ತಾಳಿಕಟ್ಟುವುದು.
ಗಂಡಿಗೆ ಹೆಣ್ಣು ರುದ್ರಕ್ಷಿ ಮಾಲೆಯನ್ನು ಹಾಕುವುದರ ಮೂಲಕ ವಡಂಬಡಿಕೆ ಏರ್ಪಡುತ್ತದೆ. ಅದು ಏನೆಂದರೆ ಪರಧರ್ಮ,ಪರಧನ,ಪರದೈವ,ಪರಸತಿ, ಇದಕ್ಕೆ ಎರಗದಂತೆ ಸಮಾನತೆ ಸಂಖೇತವಾಗಿರುವ ರುದ್ರಕ್ಷಿ ಮಾಲೆಯನ್ನು ಹಾಕುವುದು.
ಗಂಡು ಹೆಣ್ಣಿಗೆ ಹೇಳುತ್ತಾನೆ ಅನ್ಯಾಯದ ದುಡಿಮೆಯಿಂದ ಸಂಪಾದನೆ ಮಾಡದೆ ನ್ಯಾಯಯುತ ದುಡಿಮೆಯಿಂದ ಬಂದ ಹಣದಿಂದ ನಾವುಗಳು ಸಂಸಾರವನ್ನು ಮಾಡಿಕೊಂಡು ಹೊಗೋಣ ಎಂದು ಹೆಣ್ಣಿಗೆ ಪ್ರತಿಜ್ಞೆ ಮಾಡುತ್ತಾನೆ ಇದು ಶ್ರೀ ಶರಣ ಬಸವಣ್ಣನವರ ತತ್ವ.
ಇವರುಗಳ ಮುಖಂಡತ್ವದಲ್ಲಿ ;- ಶ್ರೀ ಬಸವ ಚಾರಿಟ್ರಬಲ್ ಟ್ರಸ್ಟ್ ಮತ್ತು ಶ್ರೀ ಬಸವ ಕೇಂದ್ರದ ಅಧಕ್ಷರುಗಳಾದ ಶರಣ ಶ್ರೀ ಪಿ ವೀರಭದ್ರಪ್ಪ ಸಾವುಕರ್ ಕುರುಕುಂದ ಮತ್ತು ಶರಣೆ ಶ್ರೀ ಗಂಗಮ್ಮ ಇವರ ನೇತೃತ್ವದಲ್ಲಿ ಹಾಗೂ ನವಲಿಂಗ ಶರಣರು ಸಂತೇ ಕಡೂರು ಶಿವಮೊಗ್ಗ
ದೇವದುರ್ಗ ಶರಣ ಶ್ರೀ ಗುರು ಬಸವ ದೇವರು ಮತ್ತು ಜಗಿನಪೇನಲು ವೀರಭದ್ರಯ್ಯ, ಕರೆಗೌಡ ಪೋಲಿಸ್ ಪಟೇಲ್ ಮತ್ತು ಮಕ್ಕಳು ಈ ಕಲ್ಯಾಣೋತ್ಸವ ಕಾರ್ಯಕ್ರಮವು ಸಂಪೂರ್ಣವಾಗಿ ನೇರೆವೇರಿತು.