ಈ ಹಿಂದೆ ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ರೀತಿಯ ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯವನ್ನು ನಿರ್ವಸುತ್ತಿದ್ದ ಅಭಿವೃದ್ದಿ ಅಧಿಕಾರಿಯಾದ ಡಿ ಆರ್ ಜಯಕುಮಾರ್
ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ. ಮತ್ತೊಬ್ಬ ಪಂಚಾಯಿತಿ ಅಧಿಕಾರಿಯಾದ ಶ್ರೀ ವಿಜಯಗೌಡ ಇವರನ್ನು ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ನಿಯೊಜನೆ ಮಾಡಿ ಕರ್ತವ್ಯ ನಿರ್ವಹಿಸುವಂತೆ ಆದೇಶ ಮಾಡಿದ್ದು ಇದುವರೆಗೆ ಸಾರ್ವಜನಿಕರಿಗೆ ಸ್ಪಂದಿಸದೆ ಇರುವುದರಿಂದ ವಿಜಂiÀiಗೌಡರವರು ಕರ್ತವ್ಯವನ್ನು ನಿರ್ವಹಿಸಿರುವುದಿಲ್ಲ ಆದ್ದರಿಂದ ಜಯಕುಮಾರ್ ಡಿ ಆರ್ ರವರು ಪಂಚಾಯಿತಿ ಅಭಿವೃದ್ದಿಅಧಿಕಾರಿಯಾಗಿ ಇವರನ್ನು ಹೆ ಚ್ ಕಡದಕಟ್ಟೆ ಪಂಚಾಯಿತಿಯಲ್ಲಿ ಕರ್ತವ್ಯವನ್ನು ಮುಂದುವರಿಸುವಂತೆ ಇಂದು ದಿನಾಂಕ 20/2/2020ರಂದು
ಗ್ರಾಮ ಪಂಚಾಯಿತಿ ಆವರಣ ಮುಸ್ಕರದಲ್ಲಿ ಗ್ರಾಮಸ್ಥರು ಭಾಗಿಯಾಗಿ ಸಹಿ ಸಂಗ್ರಹಿಸುವುದರ ಮೂಲಕ
ಪ್ರತಿಭಟನೆಯನ್ನು ಮಾಡಲಾಯಿತು.

ತದನಂತರ ತಾಲೂಕು ಕಾರ್ಯನಿರ್ವಾಹಣ ಅಧಿಕಾರಿಗಳಾದ ಗಂಗಾಧರಮೂರ್ತಿಯವರು ಪ್ರತಿಭಟನೆ ಮಾಡುವ ಸ್ಥಳಕ್ಕೆ ಬಂದು ಜನರ ಕಷ್ಟಗಳನ್ನ ಆಲಿಸಿ ಸಮಸ್ಯಗಳನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಮನವಿಯನ್ನು ಸ್ವೀಕರಿಸಿದರು.
ಪ್ರತಿಭಟನೆ ಸ್ಥಳದಲ್ಲಿ ಇದ್ದವರು ಎ ಡಿ ರಾಘವೇಂದ್ರರವರು, ಸಂತೋಷಕುಮಾರ್ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾ ಪಂ ಕಾರ್ಯದರ್ಶಿ ವಿಜಯಲಕ್ಷಿಮಿ ಗ್ರಾ ಪಂ ಶಾಲಾ ಎಸ್ ಟಿ ಎಮ್ ಸಿ ಅಧ್ಯಕ್ಷರಾದ ಚನ್ನೇಶ್ ಮತ್ತು ಗ್ರಾ ಪಂ ಸಿಬ್ಬಂದಿಗಳು ಹಾಗೂ ಮುಂತಾದವರು ಬಾಗಿಯಾಗಿದ್ದರು.

Leave a Reply

Your email address will not be published. Required fields are marked *