ಹೊನ್ನಾಳಿ ಹಿರೇಕಲ್ಮಠದಲ್ಲಿ ಫೆ 21 ಇಂದು ಹೊನ್ನಾಳಿ ಹಿರೇಕಲ್ಮಠದ ಪಟ್ಟಾಧ್ಯಾಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು , ಮಾನ್ಯ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರು ಮತ್ತು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ಹನುಮಂತ ರಾಯಪ್ಪನವರುಗಳ ನೇತೃತ್ವದಲ್ಲಿ ಸಭೆ ನಡೆಯಿತು.
ಮಾರ್ಚ 5,6,7 /3/2020ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯುರಪ್ಪನವರು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್‍ರವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದಾರಾಮಯ್ಯನವರು, ಕಂದಾಯ ಸಚಿವರಾದ ಕೆ ಎಸ್ ಈಶ್ವರಪ್ಪ, ರಾಜ್ಯ ಕಾಂಗ್ರಸ್ ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ, ರಾಜ್ಯ ಗೃಹ ಸಚಿವರು, ರಾಜ್ಯ ಕೃಷಿ ಸಚಿವರು,ಹಾಗೂ ಮುಂತಾದ ಸಚಿವರುಗಳು ಬರುವ ನಿರೀಕ್ಷೆ ಇದೆ.

ರೈತರು ಹಾಗೂ ಲಕ್ಷಾಂತರ ಜನರು ಬರುತ್ತಿರುವುದರಿಂದ ಅವರುಗಳಿಗೆ ಬೇಕಾಗುವ ಮೂಲ
ಸೌಕರ್ಯಗಳಾದ ಬೀದಿ ದೀಪ, ಸಿಸಿ ಕ್ಯಾಮರದ ವ್ಯವಸ್ಥೆ, ಸ್ವಚ್ಚತೆ ಮತ್ತು ಪ್ಲಾಸ್ಟಿಕ್ ನಿಷೇದ ಹಾಗೂ ಕುಡಿಯುವ ನೀರು, ಉಪಹಾರ ಮತ್ತು ಊಟ ಮತ್ತು ವಸತಿ ವ್ಯವಸ್ಥೆಯನ್ನ ಮಾಡಲಾಗುವುದು ಎಂದು ಮಾನ್ಯ ಜಿಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರು ತಿಳಿಸಿದರು.

ಮಾನ್ಯ ಬಿ ವೈ ರಾಘವೇಂದ್ರ ಸಂಸದರು ಶಿವಮೊಗ್ಗ ಕ್ಷೇತ್ರ ಗೌರವ ಅಧ್ಯಕ್ಷರು ಅವರುಗಳು ಮಾತಾನಾಡಿ ಹೊನ್ನಾಳಿಯಲ್ಲಿ ನಡೆಯುತಿರುವ ಕೃಷಿ ಮೇಳ ರಾಜ್ಯಕ್ಕೆ ಮಾದರಿಯಾಗಬೇಕೆಂದು ಎಂದು ಹೇಳಿದರು.
ಹೊನ್ನಾಳಿ ಶಾಸಕರು ಮುಖ್ಯಮಂತ್ರಿಗಳ ರಾಜೀಕಿಯ ಕಾರ್ಯದರ್ಶಿಗಳು ಅಧ್ಯಕ್ಷರು ಇವರು ಮಾತಾನಡಿ ರಾಜ್ಯ ಸರ್ಕಾರದಿಂದ 50ಲಕ್ಷರೂಗಳನ್ನ ಕೊಡುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಗಳಾದ ಹನುಮಂತ ರಾಯಪ್ಪನವರು ಮಾತಾನಾಡಿ ಈ ಕೃಷಿ ಸಮ್ಮೇಳನಕ್ಕೆ ಬರುವ ರಾಜ್ಯದ ಮುಖ್ಯಮಂತ್ರಿಗಳಿಗು , ಎಲ್ಲಾ ಪಕ್ಷದ ರಾಜಕಾರಣಿಗಳಿಗೂ ಕಾರಿನ ಪಾರ್ಕಿಂಗ್ ವ್ಯವಸ್ಥೆ ಮತ್ತು ಈ ಕಾರ್ಯಕ್ರಮಕ್ಕೆ ಬರುವ ರೈತರುಗಳಿಗೆ ಹಾಗೂ ಜನಗಳಿಗೆ ವ್ಯವಸ್ಥಿವಾಗಿ ಪೋಲಿಸ್ ಇಲಾಖೆಯಿಂದ ರಕ್ಷಣೆ ಕೂಡುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.

ಮಠದ ಶ್ರೀ ಗುರುಗಳು ಮಾತಾನಾಡಿ ರೈತರುಗಳಿಗೆ ಅಧುನಿಕ ಕೃಷಿ ತಂತ್ರಜ್ಞಾನ, ಇಸ್ರಿಲ್ ಮಾದರಿಯ ಬೆಳೆಯ ಬಗ್ಗೆ ಮತ್ತು ಕಾಪಿ,
ಅಡಿಕೆ ಬೆಳೆ,ರೈತ ಸಾಲದ ಸೂಲಕ್ಕೆ ಏರದೆ ತನ್ನ ಕಾರ್ಯ ಮಟ್ಟ ಜೀವನವನ್ನು ರೂಪಿಸುವ ಕೆಲಸ ಮಾಡಬೇಕೆಂಬುವುದು ಈ ಕೃಷಿಮೇಳದ ಉದ್ದೇಶ.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ತಾಲೂಕು ದಂಡಧಿಕಾರಿಗಳದ ತುಷಾರ್ ಬಿ ಹೊಸುರಾರವರು, ಡಿ ಜಿ ಶಾಂತನಗೌಡ್ರು ಮಾಜಿ ಶಾಸಕರು ಮತ್ತು ಉಪಾಧ್ಯಕ್ಷರು, ಹೆಚ್ ಎ ಉಮಾಪತಿ,
ಕಿರಣ್ ಬಾರ್ ಸಿದ್ದಪ್ಪ, ಡಿ ಜಿ ವಿಶ್ವನಾಥ್, ಹೆಚ್ ಬಿ ಶಿವಯೋಗಿ, ಎಲ್ಲಾ ಜಿಲ್ಲಾ ಪಂಚಾಯಿತಿ ಸದಸ್ಯರುಗಳು, ಎಲ್ಲಾ ತಾಲೂಕು ಪಂಚಾಯಿತಿ ಸದಸ್ಯರುಗಳು , ಎಲ್ಲಾ ಇಲಾಖೆಯ ಜಿಲ್ಲಾಅಧಿಕಾರಿಗಳು ಮತ್ತು ಎಲ್ಲಾ ತಾಲೂಕು ಅಧಿಕಾರಿ ವರ್ಗದವರು ಮತ್ತು ಪತ್ರಿಕಾ ಮಿತ್ರರು,ಹಾಗೂ ಟಿ ವಿ ಮಾಧ್ಯಮದವರು ಸಹ ಭಾಗಿಯಾದ್ದರು.

Leave a Reply

Your email address will not be published. Required fields are marked *