ನಾನು ಮತ್ತು ನನ್ನ ಸಹೋದರು ಪ್ರಮಾಣಿಕರು ನಾವು ಯಾವುದರಲೂ ಭಷ್ಟಾಚಾರ ಮಾಡಿಲ್ಲ. ಆಕ್ರಮ ಮರಳು , ಅಕ್ಕಿ ,ಅಧಿಕಾರಿಗಳಿಂದ ಮಾಮೂಲು ಮತ್ತು ಕಾಮಗಾರಿ ಗಳಲ್ಲಿ ಕಮೀಷನ್ ಪಡೆದಿಲ್ಲ .ಹೊನ್ನಾಳಿ-ನ್ಯಾಮತಿ ತಾಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಎಂಬ ಎಂಪಿ ರೇಣುಕಾಚಾರ್ಯ ಹೇಳಿಕೆ ಹಿನ್ನೆಲೆ ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೇಸ್ ಮುಖಂಡರು ಶಾಸಕರ ಪ್ರಮಾಣಿಕತೆ ಬಗ್ಗೆ ಸವಾಲು ಹಾಕಿದಂತೆ ಇಂದು ಶ್ರೀ ಚನ್ನಪ್ಪಸ್ವಾಮಿ ಸನ್ನಿದಿಯಲ್ಲಿ ಕಾಂಗ್ರೇಸ್ ಪಕ್ಷದ ಮಖಂಡರು ಮತ್ತು ಶಾಸಕ ಎಂ ಪಿ ರೇಣುಕಾಚಾರ್ಯ ರವರಿಂದ ಪರಸ್ಪರ ಆಣೆ-ಪ್ರಮಾಣ ಕಾರ್ಯಕ್ರಮಕ್ಕೆ ಕಾಂಗ್ರೇಸ್ ಪಕ್ಷದ ಮುಖಂಡರು ಹೊನ್ನಾಳಿ ಹಿರೇಕಲ್ಮಠದಲ್ಲಿ 12 ರಿಂದ 1:30 ರ ವರೆಗೆ ಕಾದು ಕುಳಿತರು. ಆದರೆ ಈ ಸವಾಲಿಗೆ ಶಾಸಕರು ಬರಲೇ ಇಲ್ಲ
ಈ ವೇಳೆ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಹೆಚ್ ಬಿ ಮಂಜಪ್ಪನವರು,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ, ಮುಖಂಡರಾದ ಬಿ ಸಿದ್ದಪ್ಪ, ಎಂ ಸಿದ್ದಪ್ಪ, ಎಂ ರಮೇಶ್ , ಹೆಚ್ ಬಿ ಶಿವಯೋಗಿಯವರು , ಕೊಡತಾಳ ರುದ್ರೇಶ್ , ಯುವ ಕಾಂಗ್ರೇಸ್ ಅಧ್ಯಕ್ಷ ಮಧುಗೌಡ, ಪ್ರವೀಣ್ . ಓSUI ಅಧ್ಯಕ್ಷ ಮನೋಜ್
ಬಾಷಾ ಸಾಬ್ , ಸುರೇಶ್ , ರೋಷನ್ ಸೇದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.