23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು ಗುರುಪೀಠಕ್ಕೆ ಬಂದು ಶ್ರೀ ಪ್ರಸನ್ನಾ ನಂದ ಮಹಾಸ್ವಾಮಿಗಳನ್ನು ಬೇಟಿ ಮಾಡಿ ಗುರುಗಳ ಆಶೀರ್ವಾದ ಪಡೆದರು.
ತದಾದನಂತರ ಮಾತನಾಡಿ ಮಹಾದಾಯಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗಮನ ತರುತ್ತೆನೆ ಮತ್ತು S ಖಿ ತಳವಾರ ಸಮಾಜದ ಬಂದುಗಳಿಗೆ 7.5 ಮೀಸಲಾತಿಯ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ನವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೆನೆ ಎಂದು ಹೇಳಿದರು.
ಇವರು ಉಪಸ್ಥಿತಿಯಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮಿಗಳು ವಾಲ್ಮೀಕಿ ಗುರುಪೀಠ, ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರು, ಓಬಳಪ್ಪ ಆಡಳಿತಾಧಿಕಾರಿಗಳು ರಾಜೇನಹಳ್ಳಿ ಮಠ ಹಾಗೂ ಹೊನ್ನಾಳಿ ತಾಲೂಕಿನ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಡಿ ಆರ್ ಚಂದಪ್ಪ, ಸಣ್ಣ ತಮ್ಮ ಬಾರ್ಕಿ, ಜಿಗಳಿ ಆನಂದಪ್ಪ, ಪ್ರಕಾಶ್ ವರದಿಗಾರ ಜನತವಾಣಿ ದಾವಣಗೆರೆ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.