ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹೊನ್ನಾಳಿ ಹಾಗೂ ಶ್ರೀ ಸಾಯಿ ಗುರುಗುಲ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಶ್ರೀ ಸಾಯಿಗುರುಗುಲ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯ ಆದೇಶದ ಮೆರೆಗೆ ಹಮ್ಮಿಕೊಳ್ಳಲಾದ 20ನೇ ಕಾರ್ಯಗಾರವನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳು ಮಕ್ಕಳಿಂದ ಜ್ಯೋತಿಯನ್ನ ಬೆಳಗಿಸುವುದರ ಮೂಲಕ ಉದ್ಗಾಟನೆಯನ್ನು ಮಾಡಿದರು .ತದಾದನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ
ಹೊನ್ನಾಳಿ ತಾಲೂಕಿನ 15ರಿಂದ20ಶಾಲೆಗಳ
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಾಗಿ
ಪರೀಕ್ಷೆ ಒಂದು ಹಬ್ಬ ಸಂಭ್ರಮಿಸೊಣ ಎಂದು ವ್ಯಕ್ತಿತ್ವ ವಿಕಸನದ ಫಲಿತಾಂಶವನ್ನ ಹೆಚ್ಚಿಸಲು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು ಎಂದು ಹೇಳಿದರು.
ಇದರ ಉದ್ದೇಶ ಎಲ್ಲಾ ಶಾಲೆಯ ಮಕ್ಕಳಿಗೆ ಪರೀಕ್ಷೆ ಎಂಬ ಬಯವನ್ನು ಹೊಗಾಲಾಡಿಸಿ ಸಂಪೂರ್ಣ ಸರಳ ವಿಧಾನದ ಜ್ಞಾನವನ್ನ ತಿಳಿಸಿಕೊಡುವುದರ ಮೂಲಕ ಒಂದು ದಿನದ ನುರಿತ 5 ಜನ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 11ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಉಪನ್ಯಾಸವನ್ನ ಹೇಳಿಕೊಡಲಾಯಿತು.
ಈ ಕಾರ್ಯಕ್ರಮ ದ ಉಪಸ್ಥಿತಿಯಲ್ಲಿ ಇದ್ದವರು ಕ್ಷೇತ್ರ ಶಿಕ್ಷಣಾಧಿಕಾರಿ ಬಿ ರಾಜೀವ್ ಹೊನ್ನಾಳಿ, ಹೆಚ್ ಸಿ ಚಂದ್ರಶೇಖರ್ ಸ. ನೌ. ಸಂಘದ ಅಧ್ಯಕ್ಷರು , ಶ್ರೀ ಸಾಯಿ ಗುರುಗುಲ ಕಾರ್ಯದರ್ಶಿ ಜಿ ಮರಿಗೌಡ್ರು ,ಡಿ ಜಿ ಸೋಮಣ್ಣ ನಿರ್ದೇಶಕರು, ಸಾಯಿ ಗುರುಗುಲ ಆಡಳಿತ ಅಧಿಕಾರಿ ದಾಯಾನಂದ ಪ್ರಭು , ಸಾಯಿ ಗುರುಗುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹೆಚ್ ವಿ ಗೌರಿಯವರು,ಸಾಯಿ ಗುರುಗುಲ ಶಾಲೆಯ ಪ್ರಾಂಶುಪಾಲರಾದ ಸಿ ಜಿ ಸುರೇಂದ್ರ ,ಶಾಲೆಯ ಸಂಯೋಜಕರು ಹರೀಶ್ ಕುಮಾರ್, ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕಿಯರು,ಶಾಲೆಯ ಎಲ್ಲಾ ಸಿಂಬಂದಿಗಳು ಸಹ ಭಾಗಿಯಾಗಿದ್ದರು.