ದಿನಾಂಕ
5,6,7,ಮಾರ್ಚ 2020 ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಭರ್ಜರಿಯಾಗಿ ಕೆಲಸ ಕಾರ್ಯಗಳ ತಯಾರಿ ನಡೆಯುತ್ತಿದ್ದು , ಸ್ಟೇಜ್,ಪೆಂಡಲ್ ಶಾಮಿಯಾನ ಹಾಕಿಸುವುದು ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಜೆಸಿಬಿ ಹಿಟ್ಯಾಚಿ ಮುಂತಾದ ಯಂತ್ರಗಳ ಮೂಲಕ ಭರದಿಂದ ನಡೆಯುತ್ತಿರುವ ಕೆಲಸವನ್ನ ಹೊನ್ನಾಳಿ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳುರವರು ತಾವೇ ಸ್ವತಃ ನಿಂತಿದ್ದು ಕೆಲಸವನ್ನು ಮಾಡಿಸುತ್ತಿರುವ ದೃಶ್ಯ .
ನಂತರ ಶ್ರೀಗಳು ಮಾತನಾಡಿ ಯೋಗ ಗುರು ಬಾಬಾ ರಾಮ್ ದೇವ್ ರವರು ಮಾರ್ಚ 5ನೇ ತಾರೀಖಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಕಾರ್ಯಕ್ರಮ ಮುಗಿದ ನಂತರ ಶ್ರೀಗಳ ಮಠದಲ್ಲಿ ರಾತ್ರಿ ಉಳಿದುಕೊಂಡು 6ನೇ ತಾರೀಖಿನ ಬೆಳಗ್ಗೆ 5 ರಿಂದ 7 ಘಂಟೆಯವರೆಗೆ ಯೋಗ
ಶಿಬಿರವನ್ನು ನಡೆಸಿಕೊಡಲಿದ್ದಾರೆ ಎಂದು ಮಠದ ಶ್ರೀಗಳು ತಿಳಿಸಿದರು.