ಹೊನ್ನಾಳಿ ಹಿರೇಕಲ್ಮಠದಲ್ಲಿ ನಡೆಯುತ್ತಿರುವ ದಿನಾಂಕ 5/3/2020, 6/3/2020 & 7/3/2020 ರ ಮೂರು ದಿನಗಳ ಕಾಲ ಹೊನ್ನಾಳಿ ಹಿರೇಕಲ್ಮಠದ ಲಿಂಗೈಕ್ಯ ಎರಡು ಗುರುಗಳ ಪುಣ್ಯರಾಧನೆ ಅಂಗವಾಗಿ ರಾಜ್ಯ ಕೃಷಿ ಮೇಳ ನಡೆಯಲಿದ್ದು ಈ ವಿಚಾರವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಪ್ರವೃತ್ತರಾಗುವ ಬಗ್ಗೆ ಚರ್ಚಿಸಲು ದಿ 01/03/2020 ರ ಭಾನುವಾರ ಮಧ್ಯಾಹ್ನ 12.15 ಘಂಟೆಗೆ ಹಿರೇಕಲ್ಮಠದ ಶ್ರೀಗಳಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳ ಸಮ್ಮಖದಲ್ಲಿ , ಮಾನ್ಯ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರು ಮತ್ತು ಜಿಲ್ಲಾ ಪಂಚಾಯತ್ ಸಿ. ಇ ಓ.ರವರಾದ ಶ್ರೀಮತಿ ಶ್ರೀ ಪದ್ಮ ಬಸವಂತಪ್ಪ ಇವರುಗಳ ಅಧ್ಯಕ್ಷತೆಯಲ್ಲಿ , ಸಭೆ ನಡೆಯಿತು.
ಮಾನ್ಯ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರು ಮಾತನಾಡಿ ಕೃಷಿ ಮೇಳವು ಮೂರು ದಿನಗಳ ಕಾಲ ನಡೆಯಲಿದ್ದು ಆ ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲಾ ಮೂಲ ಸೌಕರ್ಯಗಳನ್ನ ಎಲ್ಲಾ ಜಿಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಹನುಮಂತರಾಯಪ್ಪನವರ ಸಹಕಾರದೊಂದಿಗೆ ನಡೆಯಲಿದೆ. ಕೃಷಿ ಸಮ್ಮೇಳನದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ಕೊಟ್ಟು “ಮಾತು ಹಾಡುವುದಕಿಂತ ಕೃತಿ ರೂಪದಲ್ಲಿ ತೊಡಗುವುದು ಲೇಸು “ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹೊನ್ನಾಳಿ ತಾಲೂಕಿನ ಶಾಸಕರಾದ ಎಂ ಪಿ ರೇಣುಕಾಚಾರ್ಯ, ಹೊನ್ನಾಳಿ ತಾಲೂಕಿನ ಬಿ.ಜೆ.ಪಿ ಮತ್ತು ಕಾಂಗ್ರೆಸ್ ಅಧ್ಯಕ್ಷರುಗಳು ಜಿಲ್ಲಾ ಪಂಚಾಯತ್ ಸದಸ್ಯರುಗಳು, ತಾಲೂಕು ಪಂಚಾಯತ್ ಸದಸ್ಯರುಗಳು , ಎ.ಪಿ ಎಂ.ಸಿ ಸದಸ್ಯರುಗಳು, ಪಟ್ಟಣ್ಣ ಪಂಚಾಯಿತಿ ಸದಸ್ಯರುಗಳು, ಎಲ್ಲಾ ಇಲಾಖೆ ಜಿಲ್ಲಾಧಿಕಾರಿಗಳು ಡಿ ವೈ ಎಸ್ ಪಿ ಯವರಾದ ಪ್ರಶಾಂತ್ ಮುನೋಳಿ ,ಹಾಗೂ ಎ.ಸಿ ಯವರು, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾರವರು ,ಮತ್ತು ಎಲ್ಲಾ ಇಲಾಖೆಯ ತಾಲೂಕು ಅಧಿಕಾರಿಗಳು, ಜಿಲ್ಲೆ ಮತ್ತು ತಾಲೂಕ್ ರಕ್ಷಣಾ ಅಧಿಕಾರಿಗಳು ಹಾಗೂ ಪತ್ರಿಕಾ ಮಾಧ್ಯಮ, ಶಬ್ದ ಮಾಧ್ಯಮ ದ ಮಿತ್ರರು ಸಹ ಭಾಗಿಯಾಗಿಯಾಗಿದ್ದರು.