ದಾವಣಗೆರೆ, ಮಾ.2
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಾ.1 ರಿಂದ 5 ರವರೆಗೆ ನಡೆಯಲಿರುವ ಶ್ರೀ ದುರ್ಗಾಂಬಿಕ ದೇವಿ ಮತ್ತು ವಿನೋಬನಗರದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಾಗರಿಕರ, ವಾಹನ ಸವಾರರ ಸುರಕ್ಷತೆ ಹಾಗೂ ನಗರದ ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮತ್ತು ಮಹಾನಗರಪಾಲಿಕೆ ವತಿಯಿಂದ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.
ಒಮ್ಮುಖ ರಸ್ತೆಗಳ ಅಧಿಸೂಚನೆ: ನಗರ ಭಾಗದಲ್ಲಿ ಕಿರಿದಾದ ರಸ್ತೆಗಳು ಇರುವ ಕಾರಣ ದೈನಂದಿನ ಸಂಚಾರಕ್ಕಿಂತ ಜಾತ್ರಾ ಸಮಯದಲ್ಲಿ ಹೆಚ್ಚು ವಾಹನ ಸಂಚಾರ ಇರುವ ಕಾರಣ ತಾತ್ಕಾಲಿಕವಾಗಿ ಒಮ್ಮುಖ ರಸ್ತೆ ಮಾಡಲಾಗಿದ್ದು, ಹೊಂಡದ ರಸ್ತೆ(ಅರುಣಾ ಸರ್ಕಲ್ ಕಡೆಯಿಂದ ಹೋಗುವುದು) ವಿಜಯಲಕ್ಷ್ಮೀ ರಸ್ತೆ(ಲಕ್ಷ್ಮೀ ವೃತ್ತದಿಂದ ಹೋಗುವುದು) ಕಾಳಿಕಾದೇವಿ ರಸ್ತೆ(ಗ್ಯಾಸ್‍ಕಟ್ಟೆ ವೃತ್ತದಿಂದ ಹೋಗುವುದು) ದೊಡ್ಡಪೇಟೆ ರಸ್ತೆ(ಗ್ಯಾಸ್‍ಕಟ್ಟೆ ವೃತ್ತದಿಂದ ಹೋಗುವುದು) ಸ್ಟಾರ್ ನಾಗಪ್ಪ ಮನೆ ಮುಂಭಾಗದ ರಸ್ತೆ(ಹೊಂಡದ ರಸ್ತೆಯಿಂದ ಹೋಗುವುದು) ಮೂಲಕ ಸಂಚರಿಸಲು ಕೋರಲಾಗಿದೆ.
ವಾಹನ ನಿಲುಗಡೆ ಸ್ಥಳಗಳ ಅಧಿಸೂಚನೆ: ಜಾತ್ರಾ ಪ್ರಯುಕ್ತ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಹೊಂಡದ ವೃತ್ತದ ಬಳಿಯ ದುರ್ಗಾಂಬಿಕ ದೇವಿ ಶಾಲೆ ಆವರಣ, ಶಾಲೆ ಎದುರುಗಡೆ ಸ್ಥಳ. ಬೂದಾಳು ರಸ್ತೆ ಹೊಂಡದ ವೃತ್ತದ ಬಳಿಯ ದುರ್ಗಾಂಬಿಕ ದೇವಿ ಟ್ರಸ್ಟ್‍ನ ಖಾಲಿ ನಿವೇಶನ ಸ್ಥಳ. ಬೂದಾಳ ರಾಜಕುಮಾರ ಶಾಲೆ ಆವರಣ. ಬೂದಾಳು ರಸ್ತೆ ಇಂದಿರಾ ಕ್ಯಾಂಟಿನ್ ಹಿಂಭಾಗದ ಹೊಂಡದ ದುರ್ಗಾಂಬಿಕ ದೇವಿ ಟ್ರಸ್ಟ್‍ನ ಖಾಲಿ ನಿವೇಶನ ಸ್ಥಳ. ಹಗೇದಿಬ್ಬ ವೃತ್ತದ ಬಳಿಯ ಮಹಾರುದ್ರಯ್ಯ ಸ್ವಾಮಿಯವರ ಖಾಲಿ ಸ್ಥಳ, ಕಾಳಿಕಾದೇವಿ ದೇವಸ್ಥಾನ ಎದುರು ಶಾಮನೂರು ಶಿವಶಂಕರಪ್ಪನವರ ಖಾಲಿ ನಿವೇಶನ ಜಾಗ. ಪಿ.ಬಿ.ರಸ್ತೆ ಅರುಣಾ ಸರ್ಕಲ್ ಬಳಿಯ ವಾಣಿ ಹೊಂಡಾ ಷೋ ರೂಂ ಖಾಲಿ ಜಾಗದ ಸ್ಥಳಗಳಲ್ಲಿ ಸಾರ್ವಜನಿಕರು ವಾಹನ ನಿಲುಗಡೆ ಮಾಡಲು ಕೋರಲಾಗಿದೆ.
ಲಾರಿ ಪ್ರವೇಶ ನಿಷೇಧ: ಜಾತ್ರಾ ಮಾಹೋತ್ಸವದ ಅಂಗವಾಗಿ ಹಳೇ ನಗರಕ್ಕೆ ಬೆಳಿಗ್ಗೆ 5 ರಿಂದ ರಾತ್ರಿ 11 ಗಂಟೆಯವರೆಗೆ ತಾತ್ಕಾಲಿಕವಾಗಿ ರಿಂಗ್ ರಸ್ತೆ ಹೊರತುಪಡಿಸಿ ಲಾರಿ ಪ್ರವೇಶ ನಿಷೇಧಿಸಲಾಗಿದೆ.
ಪ್ರಮುಖ ರಸ್ತೆಗಳಲ್ಲಿ ಶಾಮಿಯಾನ, ಪೆಂಡಾಲ್, ಚಪ್ಪರ ನಿಷೇಧ: ನಗರದ ಪ್ರಮುಖ ರಸ್ತೆಗಳಲ್ಲಿ ಶಾಮಿಯಾನ, ಪೆಂಡಾಲ್, ಚಪ್ಪರ ಅಳವಡಿಸದಂತೆ ನಿಷೇಧಿಸಲಾಗಿದ್ದು, ಯಾವುದೇ ಬೆಂಕಿ ಅವಘಡಗಳು ಸಂಭವಿಸಿದಲ್ಲಿ ತುರ್ತು ವಾಹನಗಳು ಸ್ಥಳಕ್ಕೆ ಬರಲು ಈ ಮೂಲಕ ಅನುಕೂಲವಾಗುವ ಹಿನ್ನೆಲೆಯಲ್ಲಿ ನಗರದ ನಾಗರೀಕರು ಹಳೇ ನಗರದ ಪ್ರಮುಖ ರಸ್ತೆಗಳಲ್ಲಿ ಶ್ಯಾಮಿಯಾನ, ಪೆಂಡಾಲ್, ಚಪ್ಪರಗಳನ್ನು ಅಳವಡಿಸಬಾರದೆಂದು ಪ್ರಕಟಣೆ ತಿಳಿಸಿದೆ.