ದಾವಣಗೆರೆ, ಮಾ.02
ಜಿಲ್ಲೆಯ ಹಲವೆಡೆ 3000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬಿತ್ತನೆಯಾಗಿದ್ದು ಪ್ರಸುತ್ತ ಹಂಗಾಮಿನಲ್ಲಿ ರೈತರು, ಈ ಕೆಳಗಿನಂತೆ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ.
ಮಾವಿನ ತಾಕುಗಳಲ್ಲಿ ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು. ಏಕೆಂದರೆ, ಗಂಧಕವು ಪರಾಗ ಸ್ಪರ್ಶ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ, ಅರಳಿದ ಮತ್ತು ಎಳೆಯ ಕಚ್ಚಿದ ಕಾಯಿಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಪರಾಗ ಸ್ಪರ್ಶದ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಿಡಗಳಿಗೆ ನೀರುಣಿಸಬಾರದು.
ಕಾಯಿಗಳು ಬಟಾಣಿಯಿಂದ ಗೋಲಿ ಗಾತ್ರದ ಹಂತದಲ್ಲಿ ನೀರು ಕೊಡಲು ಪ್ರಾರಂಭಿಸಬೇಕು. ಕಚ್ಚಿದ ಕಾಯಿಗಳು ಉದುರದಂತೆ ಅವುಗಳಿಗೆ ಸಸ್ಯ ಪ್ರಚೋದಕ ಓಂಂ (ಠಿಟಚಿoಜಿix) 50 ಠಿಠಿm ಪ್ರಮಾಣದಲ್ಲಿ ಸಿಂಪಡಿಸಬೇಕು. (5mಟ/100 ಲೀಟರ್ ಪ್ರಮಾಣದಲ್ಲಿ ಬೆರೆಸಿ). ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಮ್ಯಾಂಗೋ ಸ್ಪೆಷನ್ (ಒಚಿಟಿgo sಠಿeಛಿiಚಿಟ) ದ್ರಾವಣವನ್ನು ಪ್ರತಿ 10ಲೀಟರ್ ನೀರಿನಲ್ಲಿ 50ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸಬೇಕು. ಪೊಟ್ಯಾಷಿಂ ನೈಟ್ರೇಟ್, (13-0-45) 20 ಗ್ರಾಂ/ ಲೀ ಸಿಂಪರಣೆಯನ್ನು ಕೈಗೊಳ್ಳುವುದರಿಂದ ಮೊಗ್ಗು ಅರಳಲು ಮತ್ತು ಏಕರೂಪದ ಹೂ ಬಿಡುವಿಕೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಪ್ರಸುತ್ತ ಹಂತದಲ್ಲಿ ಹೂ ಒಣಗುವ ಅಥವಾ ಚಿಬ್ಬು ರೋಗ ಕಂಡುಬಂದಲ್ಲಿ ಥೈಯೋಪಿನೇಟ್ ಮೀಥೈಲ್ 70% 1ಮೀ.ಲೀ ಅಥವಾ ಡೈನೋಕ್ಯಾಪ್ 1ಮೀ.ಲೀ ಜೊತೆಗೆ ಮ್ಯಾಂಕೋಜೆಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಾರ್ಟಿ ಕ್ಲಿನಿಕ್ ಅಥವಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂರ್ಪಕಿಸಬಹುದೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.