ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಮಾ 2
ಶ್ರೀಯುತ ಎಂ.ಪಿ ರೇಣುಕಾಚಾರ್ಯರವರು
ಸನ್ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಹಾಲಿ ಶಾಸಕರು ಕರ್ನಾಟಕ ರಾಜ್ಯ ವಿಧಾನಸೌಧ ಬೆಂಗಳೂರು ಇವರಿಗೆ
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ಹೊನ್ನಾಳಿ ದಾವಣಗೆರೆ ಜಿಲ್ಲೆ.
ರಾಜ್ಯದ ಪಿಕಾರ್ಡ ಬ್ಯಾಂಕುಗಳ ದೀರ್ಘಾವಧಿ ಸಾಲಗಳಾದ ಆರ್.ಹೆಚ್.ಎಸ್. ಮತ್ತು
ಎನ್.ಎಫ್.ಎಸ್. ಸಾಲಗಳಿಗೂ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸುವ ಬಗ್ಗೆ.
ಕರ್ನಾಟಕ ರಾಜ್ಯದಲ್ಲಿ ಇರುವ 177 ಪಿಕಾರ್ಡ ಬ್ಯಾಂಕುಗಳು ನೀಡಿರುವ ರೈತಾಪಿ ವರ್ಗದವರಿಗೆ
ಮನೆ ನಿರ್ಮಾಣ ಹಾಗೂ ಕೃಷಿಯೇತರ ಯೋಜನೆಯಲ್ಲಿ ಚಾಪೆ,ಬಟ್ಟೆನ್ನೇಯ್ಗೆ,ಕಾಳು ಒಕ್ಕುವಯಂತ್ರ, ಇತ್ಯಾದಿ ಯೋಜನೆಗಳಲ್ಲಿ ಸಾಲ ನೀಡಿದ್ದು ಕಳೆದ 7-8 ವರ್ಷಗಳಿಂದ ಭೀಕರವಾದ ಬರಗಾಲ ಹಾಗೂ ಮಳೆ ಬಾರದೆ ರೈತರು ಸಾಲದ ಕಂತು ಹಣ ಮರುಪಾವತಿಸದೇ ಸುಸ್ತಿದಾರರಾಗಿದ್ದು ಕಾಲಕಾಲಕ್ಕೆ
ಕರ್ನಾಟಕ ರಾಜ್ಯ ಸರ್ಕಾರ ನೀಡಲಾಗುವ ಬಡ್ಡಿ ಮನ್ನಾ ಯೋಜನೆಯನ್ನು ಈ ಸಾಲಗಳ ರೈತ ಸಮೂದಾಯಕ್ಕೂ ಒದಗಿಸಿ ಆದೇಶ ನೀಡಿದರೆ ರೈತರು ಈ ಸಾಲಗಳಿಂದ ಋಣಮುಕ್ತರಾಗಲು ಸಾಧ್ಯವಾಗುತ್ತದೆ.
ನಮ್ಮ ಬ್ಯಾಂಕಿನಲ್ಲಿ 210 ಪ್ರಕರಣಗಳಲ್ಲಿ ರೂ 153.61 ಲಕ್ಷ ಬ್ಯಾಂಕಿಗೆ ಬರಬೇಕಾದ ಬಾಕಿ ಮೇಲಿನ ಎರಡು ಯೋಜನೆಗಳಲ್ಲಿ ಇರುತ್ತದೆ. ಸರ್ಕಾರ ಬಡ್ಡಿ ಮನ್ನಾ ಹೊರಡಿಸಿರುವ ಆದೇಶದಲ್ಲಿ ಕೇವಲ ಕೃಷಿ ಮತ್ತು ಕೃಷಿಪೂರಕ ಸುಸ್ತಿ ಸಾಲಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿರುವುದರಿಂದ ಗ್ರಾಮೀಣ ಗೃಹ ನಿರ್ಮಾಣ ಮತ್ತು ಕೃಷಿಯೇತರ ಯೋಜನೆಗಳಿಗೂ
ಅನ್ವಯಿಸುವಂತೆ ಆದೇಶದಲ್ಲಿ ಮಾರ್ಪಾಡ್ ಮಾಡಿ ಬ್ಯಾಂಕಿನ ಈ ಯೋಜನೆಯ ರೈತರಿಗೂ ಬಡ್ಡಿ ಮನ್ನಾ ಅವಕಾಶ ಕಲ್ಪಸಿದರೆ ಅವರೂ ಸಹ ಈ ಸಾಲಗಳಿಂದ ಋಣಮುತ್ತರಾಗಿ ಸರ್ಕಾರಕ್ಕೆ ಚಿರ ಋಣಿಯಾಗಿರುತ್ತಾರೆ.
ಇತ್ತಿಚಿನ ಪಿಕಾರ್ಡ ಬ್ಯಾಂಕುಗಳ/ ರಾಜ್ಯದ ರೈತರ ಸ್ಥತಿಗತಿಗಳನ್ನು ಬಹಳ ಹತ್ತಿರದಿಂದ ಬಲ್ಲವರಾದ ತಾವು ರಾಜ್ಯದ ರೈತ ಸದಸ್ಯರ ಉಳುವಿಗಾಗಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್.
ಯಡಿಯೂರಪ್ಪ ರವರಿಗೂ ಹಾಗೂ ಸನ್ಮಾನ್ಯ ಸಹಕಾರ ಸಚಿವರಾದ ಶ್ರೀ ಎಸ್. ಟಿ ಸೋಮಶೇಖರ್ ರವರಿಗೂ ಬ್ಯಾಂಕಿನ ಆಡಳಿತಮಂಡಳಿಯವರಾದ ನಾವುಗಳು ಕೃತಘ್ನತೆ ಸಲ್ಲಿಸುತ್ತೇವೆ.
ದಯಮಾಡಿ ಇದೊಂದು ಬಾರಿ ಗ್ರಾಮೀಣ ಗೃಹ ನಿರ್ಮಾಣ ಹಾಗೂ ಕೃಷಿಯೇತರ ಯೋಜನೆಗಳಿಗೂ ಬಡ್ಡಿ ಮನ್ನಾ ಆದೇಶ ಜಾರಿಗೊಳಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ರವರಿಗೂ ಹಾಗೂ ಸನ್ಮಾನ್ಯ ಸಹಕಾರ ಸಚಿವರಾದ ಶ್ರೀ ಎಸ್. ಟಿ ಸೋಮಶೇಖರವರೊಡನೆ ಚರ್ಚಿಸಿ ಸೂಕ್ತ ಆದೇಶ ನೀಡುವಂತೆ ರಾಜ್ಯದ ಎಲ್ಲಾ ಪಿಕಾರ್ಡ ಬ್ಯಾಂಕುಗಳ ಪರವಾಗಿ ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು
ಗೌರವ ಪೂರ್ವಕ ವಂದನೆಗಳೊಂದಿಗೆ ಅಧ್ಯಕ್ಷರಾದ ಶ್ರೀ ಸೋಮ್ಲಾನಾಯ್ಕ ಮತ್ತು ಉಪಧ್ಯಕ್ಷರಾದ ಶ್ರೀ ಎಂ. ಆರ್ ಹನುಮಂತಪ್ಪನವರು ಹಾಗೂ ಎಲ್ಲಾ ನಿರ್ದೇಶಕರುಗಳ ಸಹಿಗಳೊಂದಿಗೆ ಹೊನ್ನಾಳಿ ತಾಲೂಕಿನ ಶಾಸಕ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ ರೇಣುಕಾಚಾರ್ಯರವರಿಗೆ ಮನವಿ ಮಾಡಲಾಯಿತು.