ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಇಂದು ಕೃಷಿ ಮೇಳದ ಉದ್ಗಾಟನೆಯನ್ನು ಒಡೆಯರ್ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದರು. ಇವರುಗಳ ಜೊತೆಗೆ, ಎಂ.ಪಿ ರೇಣುಕಾಚಾರ್ಯ ಶಾಸಕರು, ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರ, ಎಸ್ ಪಿ ಯವರಾದ ಹನುಮಂತರಾಯಪ್ಪ ನವರು ಸಹ ಭಾಗಿಯಾಗಿದ್ದರು.

ತಾದಾದನಂತರ ಬ್ರಹ್ಮಾ ಕುಮಾರಿ ವಿಶ್ವವಿದ್ಯಾಲಯ ಇವರುಗಳು ಈಶ್ವರ ಲಿಂಗದ ಮೂರ್ತಿಯ ಹಾಗೂ ಪ್ರಸಾದ ವಿತರಣಾಕೇಂದ್ರವನ್ನು ಡಿ.ಜಿ ಶಾಂತನಗೌಡ್ರುರವರು ಉದ್ಗಾಟನೆಯನ್ನು ಮಾಡಿದರು.

ನಂತರ ಮಾತನಾಡಿ ಹಿರೇಕಲ್ಮಠಕ್ಕೆ 800.900ವರ್ಷ ಕಾಲ ಇತಿಹಾಸ ಇದೆ. ಈ ಮಠವು ಸತ್ಯ ಪ್ರಾಮಾಣಿಕತೆ ಇದ್ದವರಿಗೆ ಒಳಿತುಹಾಗಿರುವುದು ಕಣ್ಣಾರೆ ಕಂಡಿದ್ದೆನೆ ಎಂದರು.ಈ ಹಿಂದೆ ಇದ್ದ
ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು ಸ್ವನಿಷ್ಠೆ 45ವರ್ಷಗಳ ಕಾಲ ಮಠವನ್ನು ಮುಂದುವರಿಸಿಕೊಂಡು ಶಿಕ್ಷಣ ಸಂಸ್ಥೆಗಳನ್ನ ಅಂದರೆ ಎಲ್.ಕೆ.ಜಿ, ಯು. ಕೆ.ಜಿಗಳಿಂದ ಪ್ರಾರಂಭಗೊಂಡು ಎಸ್.ಎಸ್.ಎಲ್.ಸಿ, ಪಿಯುಸಿ, ಬಿ.ಎಡ್ ಮುಂತಾದ ತರಬೇತಿ ಶಾಲೆಗಳನ್ನ ಸ್ಥಾಪಿಸಿ ಈ ಅಂತಕ್ಕೆ ತಂದಿರುವುದು ಶ್ಲಾಘನೀಯ. ಅವರುಗಳು ಲಿಂಗೈಕ್ಯ ಅದಾನಂತರ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳಿ ಪಟ್ಟಾಭಿಷೇಕ ಮಾಡಲಾಯಿತು.
ಇವರುಗಳು 5ವರ್ಷಕ್ಕೆ 4ದಿನಗಳು ಬಾಕಿ ಇದ್ದು 5ವರ್ಷಗಳು ತುಂಬುವುದರ ಒಳಗೆ ಇಂತಹ ರಾಜ್ಯ ಮಟ್ಟದ ಕೃಷಿಮೇಳವನ್ನ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಇನ್ನು ಮುಂದಿನ ದಿನಗಳಲ್ಲಿ ಶ್ರೀಗಳು ಪಂಚಪೀಠಾಧಿಶ್ವರರ ಅಡ್ಡ ಪಲ್ಲಕ್ಕಿ ಉತ್ಸವವನ್ನು ಹೊನ್ನಾಳಿ ಮಠದಲ್ಲಿ ಮಾಡಬೇಕು ಎಂದು ಗುರುಗಳಿಗೆ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *