ಹರಿಹರ, ಮಾ.06: ತಾಲ್ಲೂಕಿನ ರಾಮತೀರ್ಥ ಗ್ರಾಮದಲ್ಲಿ ಆಯೋಜಿಸಿದ್ದ 2020-21 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್.ವಿ. ಸದಾಶಿವಯ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಹರಿಹರ ಶ್ರೀ ಜ.ವಿ.ವಿ. ಪೀಠದ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಘನ ಉಪಸ್ಥಿತಿ ವಹಿಸಿದ್ದರು. ಹರಿಹರ ಎಸ್.ಜೆ.ವಿ.ಪಿ. ಕಾಲೇಜು ಪ್ರಾಚಾರ್ಯ ಡಾ. ಹದಡಿ ಯಲ್ಲಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಜ.ವಿ.ವಿ. ಪೀಠದ ನಿರ್ದೇಶಕ ಸದಸ್ಯ ಎನ್.ಹೆಚ್. ಪಾಟೀಲ್, ಆಡಳಿತಾಧಿಕಾರಿ ಎಸ್.ಎಂ. ವೀರಯ್ಯ, ಶೈಕ್ಷಣಿಕ ಸಲಹೆಗಾರ ಸಿ.ವಿ. ಪಾಟೀಲ್, ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಬಸಯ್ಯಮಠದ, ಮಾಜಿ ಉಪಾಧ್ಯಕ್ಷ ಜಿ.ಹೆಚ್. ಗೌಡ್ರು ಹಾಲೇಶಪ್ಪ, ಮಾಜಿ ಸದಸ್ಯ ಹರನಗಿರಿ ಕರಿಬಸಪ್ಪ, ರಾಮತೀರ್ಥ ಗ್ರಾಮ ಪಂಚಾಯಿತಿ ಸದಸ್ಯ ರಾಜು ಜಿ., ಶ್ರೀ ಜ.ವಿ.ವಿ. ಪೀಠದ ಸದಸ್ಯ ಹರನಗಿರಿ ಸೋಮಪ್ಪ, ನಿವೃತ್ತ ಮುಖ್ಯೋಪಾಧ್ಯಯ ಆರ್.ಪಿ. ಮಾನಚಾರಿ ಹಾಗೂ ಶಿಬಿರಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.