ದಾವಣಗೆರೆ: ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್
ವತಿಯಿಂದ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ
ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಿ
ಗೌರವಿಸಲಾಯಿತು.
ಇಂದು ಮದ್ಯಾಹ್ನ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ
ಗೃಹ ಕಛೇರಿ ಶಿವಪಾರ್ವತಿಯಲ್ಲಿ ನಡೆದ ಸರಳ
ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಹಾಲಿ ಶಾಸಕರೂ ಆದ ಡಾ||
ಶಾಮನೂರು ಶಿವಶಂಕರಪ್ಪನವರು ಮಹಿಳಾ
ಸಾಧಕಿಯರನ್ನು ಸನ್ಮಾನಿಸಿದರು.
ಸನ್ಮಾನಕ್ಕೆ ಪಾತ್ರವಾದ ಮಹಿಳಾ ಸಾಧಕಿಯರು:
ರೇವತಿನಾಯಕ್(ಈಜು ಕ್ರೀಡಾಪಟು) ಕಾವ್ಯ ಕೆ. (ವಾಲ್
ಪ್ಲೇಬಿಂಗ್) ಚಾರಣ, ಮತ್ತೂರಮ್ಮ (ಪೌರಕಾರ್ಮಿಕರು)
ಮಾಳಮ್ಮ (ಇನ್ಸ್‍ಪೆಕ್ಟರ್)ಪೊಲೀಸ್ ಇಲಾಖೆ, ಮೀನಾಕ್ಷಿ
(ಮಹಿಳಾ ಸಂಘ), ದೇವಿಕಾ ಸುನಿಲ್,(ಜನತಾವಾಣಿ
ವರದಿಗಾರರು), ಪುಷ್ಪಲತಾ( ಬಿಇಓ), ಚೇತನಾ(ಶಿಕ್ಷಣ
ಸಂಯೋಜಕರು) ಶೀಲಾ(ಬಸ್ ಕಂಡಕ್ಟರ್).
ಡಾ|| ಶಾಮನೂರು ಶಿವಶಂಕರಪ್ಪನವರು ಮಾತನಾಡಿ
ಇಂದು ಮಹಿಳಾ ದಿನಾಚರಣೆ ಅಂಗವಾಗಿ ದಾವಣಗೆರೆಯಲ್ಲಿ
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು
ಸನ್ಮಾನಿಸುತ್ತಿರುವುದು ಶ್ಲಾಘನೀಯ. ಇಂದು
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ

ಛಾಪು ಮೂಡಿಸಿದ್ದಾರೆ. ಸರ್ಕಾರಗಳು ಸಹ ಮಹಿಳೆಯರಿಗೆ
ಅವಕಾಶ ನೀಡುವಂತಹ ಅನೇಕ ಯೋಜನೆಗಳನ್ನು
ಜಾರಿಗೆ ತಂದಿದ್ದು, ಆ ಯೋಜನೆಗಳನ್ನು ಮಹಿಳೆಯರು
ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಮ ಸಮಾಜ
ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ
ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
ಶ್ರೀಮತಿ ಅನಿತಾಬಾಯಿ ಮಾಲತೇಶ್, ಸನ್ಮಾನಿತರ ಪರವಾಗಿ
ಜನತಾವಾಣಿ ವರದಿಗಾರರಾದ ಶ್ರೀಮತಿ ದೇವಿಕಾ ಸುನೀಲ್, ಬಿಇಓ
ಪುಷ್ಪಲತಾ ಅವರುಗಳು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ
ಶುಭಮಂಗಳ,ಮಹಾನಗರ ಪಾಲಿಕೆ ಸದಸ್ಯರುಗಳಾದ
ಸವಿತಾ ಹುಲ್ಮನಿ ಗಣೇಶ್, ಸುಧಾ ಇಟ್ಟಿಗುಡಿ ಮಂಜುನಾಥ್,
ಶಿವಶೀಲಾ ಕೊಟ್ರಯ್ಯ, ಆಶಾ ಉಮೇಶ್, ಮುಖಂಡರುಗಳಾದ
ಸರ್ವಮಂಗಳಮ್ಮ, ಮುಮ್ತಾಜ್, ರಾಧಾಬಾಯಿ, ಓಬಳೇಶ್,
ಹುಚ್ಚವ್ವನಹಳ್ಳಿ ಮಂಜುನಾಥ್, ಸಾಗರ್, ಮತ್ತಿತರರಿದ್ದರು.

Leave a Reply

Your email address will not be published. Required fields are marked *