ಹೆಚ್.ಎಸ್ ಸಚ್ಚಿದಾನಂದ ಮೂರ್ತಿಯವರು ಅಭಿನಂದನೆಯನ್ನು ಸ್ವೀಕರಿಸಿ ಅವರುಗಳು ಮಾತನಾಡಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿ 6/01/2020ರಂದು ಅಧಿಕಾರ ಸ್ವೀಕಾರ ಮಾಡಿಕೊಂಡು ಪ್ರಥಮವಾಗಿ ಶೃಂಗೇರಿಯ ಶಾರದಾಂಬೆಯ ದರ್ಶನ ಪಡೆದು ನಂತರ ಮಂಗಳೂರು,ಕೊಲಾರ,ಕಮಲಶೀಲೆ,ಚಿಂತಾಮಣಿ,ಹಾಸನ,ಬೆಂಗಳೂರು ಸಮಾಜದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು. ದಾವಣಗೆರೆ,ಹರಿಹರ,ಚನ್ನಗಿರಿಯಿಂದ,ಹೊನ್ನಾಳಿ
ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಂತರ ಮಾತನಾಡಿ ನಾನು ರಾಜ್ಯಧ್ಯಕ್ಷರಾಗಿರುವುದು ನನಗೆ ಸುಧಿನದ ದಿನಗಳು, ನನ್ನ ಸಮಾಜ ನನಗೆ
ಏನುಮಾಡಿದೆ ಅನ್ನುವುದಕ್ಕಿಂತ ನಾನು ನನ್ನ ಸಮಾಜಕ್ಕೆ ಏನನ್ನು ಕೊಡಿಗೆ ಕೊಟ್ಟಿದ್ದೆನೆ ಎನ್ನುವುದು ಮುಖ್ಯವಾಗುತ್ತದೆ. ಬ್ರಾಹ್ಮಣ ಸಮಾಜದಲ್ಲಿ ಅನೇಕ ಪಂಗಡಗಳಿವೆ, ನಾನು ಶ್ರೇಷ್ಠ, ಅವನು ಅಧಮ
ಅನ್ನುವುದಕ್ಕಿಂತ ನಾವೆಲ್ಲರೂ ಒಂದೇ ಬ್ರಾಹ್ಮಣರು ಎಂದು ಅಂದುಕೊಂಡಾಗ ಸಮಾಜದ ಏಳಿಗೆ ಸಾಧ್ಯ ಎಂದು ಹೇಳಿದರು.

ಬ್ರಾಹ್ಮಣರಿಗೆ ಕೇಂದ್ರ ಸರ್ಕಾರದಿಂದ 10% ಮೀಸಲಾತಿ ಆದೇಶವನ್ನ ಕೊಟ್ಟಿದೆ. ಅಧ್ಯಕ್ಷನಾದ ನಾನು ಈ ಆದೇಶದ ಪ್ರತಿಯನ್ನು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೊಳ್ ರವರ ಜೊತೆಗೊಡಿ ಆದೇಶ ಪ್ರತಿಯನ್ನು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ (ಮುಜುರಾಯಿ) ಅಧೀನ ಕಾರ್ಯದರ್ಶಿಗಳರವರಿಗೆ ತಲುಪಿಸುವ ಕೆಲಸ
ಮಾಡಿದ್ದೇನೆ.

ನನ್ನ ಈ ಉದ್ದೇಶ ಬ್ರಾಹ್ಮಣ ಪ್ರಾಧಿಕಾರದಿಂದ ಕೃಷಿಕರಿಗೆ ಗಂಗಾಕಲ್ಯಾಣ ಮತ್ತು ಹೈನುಸಾಕಣಿಕೆ ಮುಂತಾದ ವಿಷಯಗಳಿಗೆ ಯೋಜನೆ ಹಂಚಿಕೆ ವಿಚಾರದಲ್ಲಿ 10% ಮೀಸಲಾತಿಯನ್ನು ಪರಿಗಣಿಸಿ ಇಂತಿಷ್ಟು ಕೊಟವನ್ನು ನಮ್ಮ ಮಂಡಳಿಯಿಂದ ಹಂಚಿಕೆಯಾಗಬೇಕು ಎಂದು ಸರ್ಕಾರದ ಗಮನಕ್ಕೆ ತರುತ್ತೇನೆ. ಹಾಗೂ
ಸನ್ನಿಧಿ
ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳ ಕೌಶಲ್ಯ ಅಭಿವೃದ್ದಿಗೆ ಅಂದರೆ ಚಟ್ನಿಪುಡಿ,ಸಾಂಬಾರ್‍ಪುಡಿ,ಹಪ್ಪಳ,ಶಂಡಿಗೆ ಮುಂತಾದ ತಯಾರಿಕೆ ಘಟಕಕ್ಕೆ ಸಂಬಂದಿಸಿದಂತೆ 25ಸಾವಿರ ರೂಗಳನ್ನು ಉಚಿತವಾಗಿ ಕೊಡಲಾಗುವುದು ಎಂದರು.

“ಸುಭದ್ರ ಯೋಜನೆ”;- ಮಕ್ಕಳು ವಯಸ್ಸಾದ ತಂದೆ ತಾಯಿಗಳನ್ನ ಸಾಕಲಿಕ್ಕೆ ಆಗದೆ,ಅವರುಗಳನ್ನ ವೃದ್ದಾಶ್ರಮಕ್ಕೆ ಬಿಡುತ್ತಾರೆ ಅದನ್ನು ಮನಗೊಂಡು ನಮ್ಮ ಮಂಡಳಿಯ ಮೂಲಕ ಇನ್ಸುರೆನ್ಸ್ ಪಾಲಿಸಿ,ಪಿಂಚಿಣಿ ಯೋಜನೆ, ತರುವ ಕೆಲಸ ಮಾಡುತ್ತೆನೆ ಎಂದರು.

ಬೇರೆಯ ಸಮಾಜದವರು ಹೇಗೆ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೋ, ಅದೇ ರೀತಿ ವಿಪ್ರ ಸಮಾಜದ ಬಾಂದವರಿಗೆ ಸಹ ಸಂವಿಧಾನ ಬದ್ದವಾದ ಸೌವಲತ್ತುಗಳು ಸಹ ಸಿಗಬೇಕು ಎಂದು ಮಾತನ್ನು ಮುಕ್ತಾಯಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದವರು;- ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ಅಧ್ಯಕ್ಷರು ಕ.ರಾ.ಬ್ರಾ ಅಭಿವೃದ್ದಿ ಮಂಡಳಿ, ದಿನೇಶ್ ಜೋಶಿ ಅಖಿಲ.ಕ.ಬ್ರಾ.ಮಹಾಸಭ, ಬಿ.ಟಿ ಅಚ್ಚುತ್ ಅಧ್ಯಕ್ಷರು ದಾವಣಗೆರೆ ಜಿಲ್ಲಾ ಬ್ರಾ.,
ಚಿದಂಬರ ದೀಕ್ಷಿತ್ ಉಪಾಧ್ಯಕ್ಷರು,ಮೋಹನ ಪಡಕಿ ಕಾರ್ಯದರ್ಶಿ, ಎನ್ ಜಯರಾವ್ ಅಧ್ಯಕ್ಷರು ವಿಪ್ರ ಸಮಾಜ ಹೊನ್ನಾಳಿ, ರಂಗನಾಥರಾವ್ ಉಪಾಧ್ಯಕ್ಷರು, ಶ್ರೀನಿವಾಸ್‍ರಾವ್ ನಾಡಿಗ ಉಪಾಧ್ಯಕ್ಷರು, ಉಮಾಕಾಂತ್ ಜೋಯ್ಸ್ ಕಾರ್ಯದರ್ಶಿ, ಲಲಿತಾ ಭಾರ್ಗವ ಸಹಕಾರ್ಯದರ್ಶಿ, ಚಿದಂಬರ ಸ.ಕಾ, ಕುಮಾರ್‍ಸ್ವಾಮಿ ಖಜಾಂಸಿ,ವಿಜಯಕುಮಾರ್ ಜೋಯ್ಸ್ ಸದಸ್ಯರು,ಡಾ// ಶಶಿಕಾಂತ ಸದಸ್ಯರು, ರಮೇಶ್ ಪುರೋಹಿತ ಸದಸ್ಯರು, ಆನಂತಪದ್ಮನಾಭ,ಶೈಲಾ ನಾಗೇಶ್, ಸತೀಶ್ ಭಾರ್ಗವ, ಶ್ರೀನಿವಾಸ್ ಮೂರ್ತಿ ಮುಂತಾದವರು ಸಹ ಭಾಗಿಯಾಗಿದರು.

Leave a Reply

Your email address will not be published. Required fields are marked *