ಸಾರ್ವಜನಿಕರು ಶಾಲೆ, ಕಾಲೇಜು, ಉದ್ಯೋಗಕ್ಕಾಗಿ
ಹಾಜರುಪಡಿಸಲು ಅಗತ್ಯವಿರುವಂತಹ ಜಾತಿ ಮತ್ತು ಆದಾಯ
ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿದ ಕೂಡಲೇ ಓವರ್ ದ ಕೌಂಟರ್
ತಂತ್ರಾಂಶದ ಮೂಲಕ ಪ್ರಮಾಣ ಪತ್ರಗಳನ್ನು ವಿತರಿಸಲು
ದಾವಣಗೆರೆ ನಗರಗದಲ್ಲಿ ಇ-ಕ್ಷಣ ಯೋಜನೆಯನ್ನು ಜಾರಿ
ಮಾಡುಲಾಗುತ್ತಿದೆ.
ಆದ್ದರಿಂದ ರೇಷನ್ ಕಾರ್ಡ್ ಹೊಂದಿರುವಂತಹ ಎಲ್ಲಾ
ಸಾರ್ವಜನಿಕರುಗಳು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿ
ಮಾಲೀಕರಲ್ಲಿ ತಮ್ಮ ಪೂರ್ಣ ವಿಳಾಸ ಹಾಗೂ ತಮ್ಮ ಮೊಬೈಲ್
ಸಂಖ್ಯೆಯನ್ನು ದಾಖಲಿಸುವಂತೆ ಅಪರ ಜಿಲ್ಲಾಧಿಕಾರಿ ಪೂಜಾರ
ವೀರಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *