ದಾವಣಗೆರೆ, ಮಾ.09
ಮಾ.9 ರಂದು ಕಾಮದಹನ ಮತ್ತು ಮಾ. 10 ರಂದು ಹೋಳಿ
ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಈ
ಸಾರ್ವಜನಿಕರು ಕೆಳಕಂಡ ಸೂಚನೆಗಳನ್ನು ಪಾಲಿಸಬೇಕೆಂದು
ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
- ಯಾವುದೇ ವ್ಯಕ್ತಿಗಳ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ
ಎರಚುವವರ ವಿರುದ್ಧ ಕಾನೂನು ಕ್ರಮ
ಜರುಗಿಸಲಾಗುವುದು. - ಪಿಯುಸಿ ಪರೀಕ್ಷೆಗಳು ಹಾಗೂ ಇತರೆ ಪರೀಕ್ಷೆಗಳು
ನಡೆಯುತ್ತಿರುವುದರಿಂದ ಪರೀಕ್ಷೆಗೆ ಹಾಜರಾಗುವಂತಹ
ವಿದ್ಯಾರ್ಥಿಗಳಿಗೆ ಯಾವುದೇ ಬಣ್ಣ ಎರಚಬಾರದು, ಯಾರಾದರೂ
ಕಿಡಿಗೇಡಿತನಕ್ಕೆ ಮುಂದಾದಲ್ಲಿ ಕಠಿಣ ಕಾನೂನು ಕ್ರಮ
ಜರುಗಿಸಲಾಗುವುದು. - ಪೇಂಟ್, ವಾರ್ನಿಷ್, ಆಸಿಡ್, ಡಾಂಬರ್, ಗಾಣದ ಎಣ್ಣೆ, ಮೊಟ್ಟೆ ಹಾಗೂ
ಯಾವುದೇ ಅಪಾಯಕಾರಿ ರಾಸಾಯನಿಕ ಮಿಶ್ರಣಗಳನ್ನು
ಮೈಮೇಲೆ ಎರಚುವವರ ವಿರುದ್ಧ ಮತ್ತು ವಾಹನಗಳಲ್ಲಿ
ಸಂಚರಿಸುವ ಪ್ರಯಾಣಿಕರ ಮತ್ತು ನೌಕರರು ಹಾಗೂ ಶಾಲಾ
ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚುವವರ ವಿರುದ್ಧ ಕಾನೂನು
ಕ್ರಮ ಜರುಗಿಸಲಾಗುವುದು. - ಸಾರ್ವಜನಿಕ ನೀರು ಸರಬರಾಜು ಸ್ಥಳಗಳಲ್ಲಿ ಬಣ್ಣ ತೊಳೆದು
ನೀರನ್ನು ಮಲೀನ ಮಾಡಬಾರದು. - ಹೋಳಿ ಹಬ್ಬದ ನೆಪದಲ್ಲಿ ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ
ಹಣ ವಸೂಲಿ ಮಾಡುವವರ ವಿರುದ್ಧ ಕಾನೂನು ಕ್ರಮ
ಜರುಗಿಸಲಾಗುವುದು. - ವಿಶೇಷವಾಗಿ ಮೆಡಿಕಲ್ ಮತ್ತು ಇಂಜಿನಿಯರ್ ವಿದ್ಯಾರ್ಥಿಗಳು ಒಂದು
ವಿದ್ಯಾರ್ಥಿ ನಿಲಯದಿಂದ ಇನ್ನೊಂದು ವಿದ್ಯಾರ್ಥಿ ನಿಲಯಕ್ಕೆ ಹೋಗಿ ಬಣ್ಣ
ಎರಚುವುದಾಗಲಿ ಅಥವಾ ಮಹಿಳಾ ವಿದ್ಯಾರ್ಥಿ ನಿಲಯಗಳ ಬಳಿ ತೆರಳಿ
ಮಹಿಳಾ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚುವುದನ್ನು ನಿಷೇಧಿಸಿದ್ದು,
ಯಾರಾದರೂ ಕಿಡಿಗೇಡಿತನಕ್ಕೆ ಮುಂದಾದಲ್ಲಿ ಕಠಿಣ ಕಾನೂನು
ಕ್ರಮ ಜರುಗಿಸಲಾಗುವುದು. - ಧ್ವನಿವರ್ಧಕ ಅಳವಡಿಕೆ ನಿಯಮವನ್ನು ಮತ್ತು
ಅನುಮತಿಯನ್ನು ಸಂಬಂಧಪಟ್ಟ ಆಯೋಜಕರು ಕಟ್ಟುನಿಟ್ಟಾಗಿ
ಪಾಲಿಸುವುದು. - ಬಣ್ಣ ಎರಚುವ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ
ವರ್ತನೆ ಮಾಡುವವರು, ಚುಡಾಯಿಸುವವರು ಕಂಡು ಬಂದಲ್ಲಿ
ಅಂತಹವರ ವಿರುದ್ಧ ಕೂಡಲೇ ಕಾನೂನು ಕ್ರಮ
ಜರುಗಿಸಲಾಗುವುದು. - ಮದ್ಯಪಾನ ಸೇವನೆ ಮಾಡಿ ಅತಿವೇಗ ಅಪಾಯಕಾರಿಯಾಗಿ ವಾಹನ
ಚಾಲನೆ ಮಾಡುವವರ ವಿರುದ್ಧ ಕಾನೂನು
ಕ್ರಮ ಜರುಗಿಸುವುದು. - ಬಣ್ಣ ಹಚ್ಚುವ ಸಮಯದ ಕೊನೆಯ ಹಂತದಲ್ಲಿ ಕೆಲವು
ಕಿಡಿಗೇಡಿಗಳು ಮೈ ಮೇಲಿನ ಬಟ್ಟೆಗಳನ್ನು ಹರಿದು
ಸಾರ್ವಜನಿಕವಾಗಿ ಅಸಯ್ಯವಾಗುವ ರೀತಿಯಲ್ಲಿ ನೃತ್ಯ
ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದು. - ಧಾರ್ಮಿಕ ಕಟ್ಟಡಗಳಾದ ಚರ್ಚು, ಮಸೀದಿ, ದರ್ಗಾ ಮತ್ತು
ದೇವಾಲಯಗಳಿಗೆ ಬಣ್ಣ ಎರಚುವಂತಿಲ್ಲ. - ದ್ವಿಚಕ್ರ ವಾಹನಗಳಲ್ಲಿ 3 ಜನರು ಸೇರಿ ಸವಾರಿ ಮಾಡಿಕೊಂಡು
ಚಲಿಸುವುದಾಗಲಿ, ವಾಹನದ ಸೈಲೆನ್ಸ್‍ರ್‍ಗಳನ್ನು ತೆಗೆದು
ಕರ್ಕಶವಾದ ಶಬ್ದವನ್ನು ಉಂಟುಮಾಡುವುದು ಕಂಡುಬಂದಲ್ಲಿ
ಅಂತಹ ವಾಹನಗಳನ್ನು ಸ್ವಾದೀನ ಪಡಿಸಿಕೊಂಡು ಕಾನೂನು
ಕ್ರಮ ಕೈಗೊಳ್ಳಲಾಗುವುದು. - ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‍ಗಳಿಗೆ ನಂಬರ್ ಕಾಣದಂತೆ
ಬಟ್ಟೆ ಕಟ್ಟುವುದು ಹಾಗೂ ಬಣ್ಣ, ಗ್ರೀಸ್ ಹಚ್ಚಿಕೊಂಡು
ಸಂಚರಿಸುವುದು ಅಪರಾಧವಾಗುತ್ತದೆ. ಅಂತಹ ವಾಹನಗಳು
ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು
ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.