ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ಕಾಂಗ್ರೆಸ್ ಪಕ್ಷದ ನೂತನವಾಗಿ ರಾಜ್ಯದ ಕೆ.ಪಿ.ಸಿ.ಸಿ ಸಾರಥಿಯಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್ ರವರಿಗೆ ಡಿ.ಎಸ್ ಪ್ರದೀಪ್ ಗೌಡ್ರು ಶುಭಾಷಯಗಳನ್ನು ಕೋರಿದ ನಂತರ ಅವರುಗಳು ಮಾತನಾಡಿ
ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಪಕ್ಷದ ಕಾರ್ಯಕರ್ತರಿಗೆ ಧ್ವನಿಯಾಗಿ ನಿಂತು ಎಲ್ಲಾ ಸಮಾಜದ ನಾಯಕರುಗಳೊಂದಿಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು, ಮಾಜಿ ಗೃಹ ಸಚಿವರಾದ ಜಿ ಪರಮೇಶ್ವರ್‍ರವರು, ಹಾಗೂ ಕೇಂದ್ರದ ಮಾಜಿ ವಿರೋಧ ಪಕ್ಷದ ನಾಯಕರಾದ
ಮಲ್ಲಿಕಾರ್ಜುನ್ ಖರ್ಗೆಯವರುಗಳೊಂದಿಗೆ ಒಟ್ಟು ಗೂಡಿ ಕೈ ಜೋಡಿಸಿದರೆ ರಾಜ್ಯದಲ್ಲಿ ಮತೊಮ್ಮೆ ಕಾಂಗ್ರೆಸ್ ಪಕ್ಷ
ಅಧಿಕಾರಕ್ಕೆ ತರುವಂತ ಕೆಲಸ ನಿಮ್ಮಗಳ ಮೂಲಕ ಮಾಡಬಹುದು ಎಂದು ಹೇಳಿದರು. ಜೊತೆಗೆ ಯುವ ಪಡೆ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರುಗಳನ್ನು ಗುರುತಿಸುವ ಕೆಲಸ ಅವರುಗಳು ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.