ಕೆ.ಪೆ.ಸಿ.ಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ಮತ್ತು ಶಾಸಕಾಂಗ ಪಕ್ಷದ ಪುನಾರ್ ಆಯ್ಕೆಯಾದ ಮಾನ್ಯ ಶ್ರೀ ಸಿದ್ದಾರಾಮಯ್ಯನವರು ಹಾಗೂ ಕಾರ್ಯಧಕ್ಷರುಗಳಾಗಿ ಈಶ್ವರ್ ಖಂಡ್ರೆ, ಶ್ರೀ ಸತೀಶ್ ಜಾರಕಿಹೊಳಿ,ಸಲೀಂ ಅಹಮದ್ ಮತ್ತುವಿಧಾನಸಭೆಯ ಮುಖ್ಯ ಸಚೇತಕರಾಗಿ ಶ್ರೀ ಅಜಯ್ ಸಿಂಗ್ ರವರನ್ನು ಮತ್ತು ,ವಿಧಾನಪರಿಷತ್ ಮುಖ್ಯ ಸಚೇತಕರಾಗಿ
ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡಿರುವ ಹಿನ್ನಲೆಯಲ್ಲಿ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ
ಶಾಂತನಗೌಡ್ರು ಮತ್ತು ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪ,ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹೆಚ್.ಎ ಗದ್ದಿಗೇಶಣ್ಣ ಮತ್ತು ಸಣ್ಣಕ್ಕಿ ಬಸವನಗೌಡ ಹಾಗೂ ಪಕ್ಷದ ಎಲ್ಲಾ ಮುಖಂಡರುಗಳು ಮತ್ತು ಕಾರ್ಯಕತರುಗಳೊಂದಿಗೆ ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿಯನ್ನು ತಿನ್ನಿಸುವುದರ ಮೂಲಕ ಸಂಭ್ರಮಿಸಿದರು.

ನಂತರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಾದಯಾತ್ರೆಯ ಮೂಲಕ ತಾಲೂಕು ಕಛೇರಿಯವರೆಗೆ ತೆರಳಿ ಮೆಕ್ಕೆಜೋಳ ಕರೀದಿ ಕೇಂದ್ರವನ್ನು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಭಾಗಗಳಲ್ಲಿ ಬೇಗನೆ ತೆರೆಯಬೇಕು. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಜನರಿಂದ, ಕಳೆದ ಎಂಟು ತಿಂಗಳುಗಳ ಹಿಂದೆ ಸಂಗ್ರಹವಾದ ಸುಮಾರು 47ಲಕ್ಷ ರೂಪಾಯಿ ಹಣವನ್ನು ಉತ್ತರ ಕನಾರ್ಟಕ ಸಂತ್ರಸ್ತರಿಗೆ ತಲುಪಿಸದೆ ತಹಶೀಲ್ದಾರ್ ರವರು ತಮ್ಮ ಬಳಿ ಇಟ್ಟುಕೊಂಡಿರುವುದು,

ಹಲವು
ಅನುಮಾಗಳಿಗೆ ಕಾರಣವಾಗಿದೆ. ಇದನ್ನು ಖಂಡಿಸಿ ಸಂಗ್ರಹಿಸಿದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸಬೇಕು ಎಂದು ಅಗ್ರಹಿಸಿ ಡಿ.ಜಿ ಶಾಂತನಗೌಡ್ರು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರುಗಳು ಜೊತೆಗೂಡಿ ಪ್ರತಿಭಟನೆ ನೆಡಸಿ ತಾಲೂಕು ದಂಡಾಧಿಕಾರಿಗಳಾದ ತುಷಾರ್ ಬಿ ಹೊಸುರಾ ಇವರುಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಈ ಮನವಿ ಪತ್ರವನ್ನು ಸಲ್ಲಿಸುವಂತೆ ಕೋರಲಾಯಿತು.
ಇವರುಗಳ ಉಪಸ್ಥಿಯಲ್ಲಿ;- ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು,ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪ,ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹೆಚ್.ಎ ಗದ್ದಿಗೇಶಣ್ಣ ಮತ್ತು ಸಣ್ಣಕ್ಕಿ ಬಸವನಗೌಡ,ಬಿ ಸಿದ್ದಪ್ಪ, ಉಗ್ಗಿ ಸಿದ್ದಪ್ಪ, ಹೆಚ್.ಎ ಉಮಾಪತಿ, ಎಂ ರಮೇಶ್, ಟಿ.ಪಿ ಅಭಿದ್ ಹಾಲಿ ಖಾನ್,ಅಪ್ತಾಬ್ ಸಾಬ್, ಮುಂತಾದವು ಸಹ ಭಾಗಿಯಾಗಿದರು.

Leave a Reply

Your email address will not be published. Required fields are marked *